ಭಾನುವಾರ, ಏಪ್ರಿಲ್ 11, 2021
22 °C

ಶೀಘ್ರ ತನಿಖೆ: ತಪ್ಪಿತಸ್ಥರ ವಿರುದ್ಧ ಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾನಗಲ್:   ಹಾನಗಲ್ ತಾಲ್ಲೂಕು ಪಂಚಾಯಿತಿಯಿಂದ ಕ್ರೀಡಾ ಸಾಮಗ್ರಿ ಖರೀದಿ ಸಂಬಂಧಿಸಿದಂತೆ ಅವ್ಯವಹಾರ ನಡೆದಿದೆ ಎಂದು ಮಾಡಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ ಕಟ್ಟುನಿಟ್ಟಿನ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸ ಲಾಗುವುದು ಎಂದು ಜಿ.ಪಂ ಸದಸ್ಯ ಪದ್ಮನಾಭ ಕುಂದಾಪುರ ಹಾಗೂ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಮನೋಜಕುಮಾರ ತಿಳಿಸಿದರು.ಬುಧವಾರ ತಾ.ಪಂ ಕಾರ್ಯಾಲ ಯದಲ್ಲಿ ಸುದ್ದಿಗಾರರಿಗೆ ವಿವರಣೆ ನೀಡಿದ ಅವರು, ಕ್ರೀಡಾ ಸಾಮಗ್ರಿ ಖರೀದಿ ವಿಷಯದಲ್ಲಿ ಜನಪ್ರತಿನಿಧಿ ಗಳನ್ನು ದೂರವಿಡುವ ಪ್ರಯತ್ನ ನಡೆಸಿರ ಬಹುದು ಎನ್ನಲಾಗಿದೆ.ತಾಲ್ಲೂಕಿನ  21 ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಅಂದಾಜು ತಲಾ ರೂ. 15 ಸಾವಿರ ಕ್ರೀಡಾ ಸಾಮಗ್ರಿ ಒದಗಿಸಲು ರೂ. 3 ಲಕ್ಷ  ತೆಗೆದಿಡಲಾಗಿತ್ತು. ಆದರೆ ಖರೀದಿ ವಿಷಯದಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಕಳಪೆ ಸಾಮಗ್ರಿ ಖರೀದಿಸಲಾಗಿದೆ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.

 

ಈ ಬಗ್ಗೆ ತಾ.ಪಂ ಪ್ರಗತಿ ಪರಿಶೀಲನಾ ಸಭೆಯಲ್ಲಿ ನಡೆದ ಚರ್ಚೆಯನ್ನು ಪರಿಗಣಿಸಿ ಹಾವೇರಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದು ತಕ್ಷಣ ಈ ಕುರಿತು ತನಿಖೆ ನಡೆಸಲು ತಿಳಿಸಲಾಗಿದೆ.  ಇದೇ ವಿಷಯದ ಕುರಿತು ಸ್ಥಳಿಯ ಶಾಸಕ, ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ ಅವರ ಗಮನಕ್ಕೆ ತರಲಾಗಿದೆ. ಸಚಿವರು ಕೂಡ ಹಾವೇರಿ ಜಿ.ಪಂ ಅಧಿಕಾರಿಗಳಿಗೆ ಈ ವಿಷಯದ ಕುರಿತು ಶೀಘ್ರ ಮತ್ತು ಪಾರದರ್ಶಕ ತನಿಖೆ ನಡೆಸಿ ಕೂಡಲೇ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು.

 

ಪಾರದರ್ಶಕ ಆಡಳಿತಕ್ಕೆ ಎಲ್ಲರೂ ಬದ್ಧರಾಗಿ ಕಾರ್ಯ ನಿರ್ವಹಿಸಲು ಸಿದ್ಧ ಎಂಬುದಾಗಿ ಸಚಿವರು ತಿಳಿಸಿದ್ದಾರೆ. ಅಕ್ರಮದಲ್ಲಿ ಜನಪ್ರತಿನಿಧಿಗಳು ಭಾಗಿಯಾಗಿದ್ದು ತನಿಖೆಯಿಂದ ರುಜುವಾತುಪಟ್ಟಲ್ಲಿ ಅಂತಹವರ ಮೇಲೆಯೂ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಪಂ ಸದಸ್ಯರು ಸುದ್ದಿಗಾರರಿಗೆ ತಿಳಿಸಿದರು.ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳಿಗೆ ಕೂಡಲೇ ಕಾರಣ ಕೇಳಿ ನೋಟೀಸ ಜಾರಿ ಮಾಡಲಾಗಿದೆ. ಜನಪ್ರತಿನಿಧಿಗಳ ಗಮನಕ್ಕೆ ಬರಲಾರದೇ ಇಂಥದೊಂದು ಘಟನೆ ನಡೆದಿರುವುದು ಅಕ್ಷಮ್ಯ ಅಪರಾಧ ಎಂಬುದರಲ್ಲಿ ಸಂಶಯವಿಲ್ಲ. ಆದ್ದರಿಂದ ಕೂಡಲೇ ತನಿಖೆ ನಡೆಸಲು ಸರ್ವಸಮ್ಮತ ಒಪ್ಪಿಗೆ ನೀಡಲಾಗಿದೆ. ಕೇವಲ ಮೂರು-ನಾಲ್ಕು ದಿನಗಳಲಿಲ್ಲಿ ಈ ಪ್ರಕರಣದ ಮೊದಲ ಹಂತದ ತನಿಖೆ ಮುಗಿಯಲಿದೆ.

 

ಹಾನಗಲ್ಲಿನ ತಾ.ಪಂ ಕಾರ್ಯ ನಿರ್ವಾಹಕ ಅಧಿಕಾರಿಗಳ ಬದಲಾಗಿ ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೇ ಈ ಪ್ರಕರಣದ ತನಿಖೆ ಒಪ್ಪಿಸಿರುವುದರಿಂದ ಯಾವುದೇ ರೀತಿಯ ಲೋಪಗಳಾಗಲು ಸಾಧ್ಯವಿಲ್ಲ,. ಸತ್ಯನಿಷ್ಠ ತನಿಖೆಗೆ ಎಲ್ಲ ಸದಸ್ಯರು ಬದ್ಧ ಎಂದು ಅವರು ಸ್ಪಷ್ಟಪಡಿಸಿದರು.ಈ ಪ್ರಕರಣವನ್ನು ಮುಚ್ಚಿ ಹಾಕಲು ಯಾರೂ ಮುಂದಾಗುವುದಿಲ್ಲ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸು ವವರೆಗೂ ಯಾವುದೇ ರೀತಿಯ ಹಿನ್ನಡೆಗೆ ಅವಕಾಶವಿಲ್ಲದಂತೆ ತನಿಖೆ ನಡೆಸಲಾಗುವುದು. ತಾ.ಪಂನ ಯಾವುದೇ ಸದಸ್ಯರು ಈ ವಿಷಯದ ಕುರಿತು ಕೇಳುವ ಎಲ್ಲ ಮಾಹಿತಿಯನ್ನು ವಿಳಂಬವಿಲ್ಲದೇ ನೀಡಲು ತಾಪಂ ಸಿದ್ಧ ಎಂದು ಅವರು ತಿಳಿಸಿದರು.ತಾ.ಪಂ ಆಡಳಿತದಲ್ಲಿ ಜನಪ್ರತಿನಿ ಧಿಗಳ ಹಿಡಿತ ಇಲ್ಲ ಎಂಬ ಕೂಗು ಇದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಪದ್ಮನಾಭ, ಎಲ್ಲ ವಿಷಯದಲ್ಲಿ ಜನಪ್ರತಿನಿಧಿಗಳು ಅಧಿಕಾರಿಗಳ ಮೇಲೆ ಹಿಡಿತ ಸಾಧಿಸಲು ಹೋಗಿ ಆಡಳಿತ ವನ್ನು ಮುಜುಗರಕ್ಕೆ ಈಡುಮಾಡುವ ಉದ್ದೆೀಶವಿಲ್ಲ. ಅಗತ್ಯ ಸಂದರ್ಭ, ಅಗತ್ಯ ವಿಷಯಗಳಲ್ಲಿ ಜನಪ್ರತಿನಿಧಿಗಳು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ. ಆದರೆ ಕೆಲವು ವೇಳೆ ಜನಪ್ರತಿನಿಧಿಗಳ ಗಮನಕ್ಕೆ ಬಾರದೇ ಅನುದಾನದ ದುರುಪಯೋಗಕ್ಕೆ ಮುಂದಾದರೆ ಅಂಥವರು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.ಪಾರದರ್ಶಕ ಆಡಳಿತವೇ ನಮ್ಮ ಉದ್ದೆೀಶವಾಗಿರುವುದರಿಂದ ಇಂಥ ಯಾವುದೇ ಪ್ರಕರಣಗಳಿಗೆ ಅವಕಾಶ ನೀಡಿಲ್ಲ. ಈ ಪ್ರಕರಣದ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವುದಲ್ಲದೆ, ಇನ್ನು ಮುಂದೇ ಎಲ್ಲ ಕಾರ್ಯಗಳ ಮೇಲೆ ಜನಪ್ರತಿನಿಧಿಗಳು ನಿಗಾ ಇಟ್ಟು ಪಾರದರ್ಶಕ ಆಡಳಿತ ನೀಡಲಾಗುವುದು ಎಂದು ಅವರು ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.