ಬೆಂಗಳೂರು: ‘ಸರ್ಕಾರಿ ಕೋಟಾ ಸೀಟುಗಳಿಗೆ ಈಗಿರುವ ಶುಲ್ಕವನ್ನೇ ಒಪ್ಪಿಕೊಳ್ಳುತ್ತೇವೆ. ಕಾಮೆಡ್ – ಕೆ ಕೋಟಾ ಸೀಟುಗಳಿಗೆ ಮಾತ್ರ ಶುಲ್ಕ ಹೆಚ್ಚಳ ಮಾಡಿ’ ಎನ್ನುವ ಮೂಲಕ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳು ಮತ್ತೊಮ್ಮೆ ರಾಗ ಬದಲಿಸಿವೆ.ಶೇ 25ರಷ್ಟು ಶುಲ್ಕ ಹೆಚ್ಚಳ ಮಾಡಲು ಸಾಧ್ಯವಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದ ಬೆನ್ನಿಗೇ ಅನುದಾನರಹಿತ ಖಾಸಗಿ ಎಂಜಿನಿಯರಿಂಗ್ ಕಾಲೇಜುಗಳ ಒಕ್ಕೂಟ ಒಂದು ಹೆಜ್ಜೆ ಹಿಂದೆ ಸರಿದಿದೆ.

‘ಸರ್ಕಾರಿ ಕೋಟಾದ ಶೇ 45ರಷ್ಟು ಸೀಟುಗಳಿಗೆ ಈಗಿರುವ ಶುಲ್ಕವನ್ನೇ ಮುಂದುವರಿಸಲು ಒಪ್ಪುತ್ತೇವೆ. ಕಾಮೆಡ್ –ಕೆ ಕೋಟಾದ ಶೇ 30ರಷ್ಟು ಸೀಟುಗಳಿಗೆ ಶುಲ್ಕ ಹೆಚ್ಚಳ ಮಾಡಿ’ ಎಂಬ ಹೊಸ ಬೇಡಿಕೆಯನ್ನು ಅವು ಸರ್ಕಾರದ ಮುಂದಿಟ್ಟಿವೆ.ಆದರೆ, ಸರ್ಕಾರ ಇದನ್ನು ಸ್ಪಷ್ಟವಾಗಿ ತಿರಸ್ಕರಿಸಿದೆ. ‘ಹಾಲಿ ಶುಲ್ಕವನ್ನೇ ಮುಂದುವರಿಸುವುದಾಗಿ ಈಗಾಗಲೇ ಪ್ರಕಟಿಸಲಾಗಿದೆ. ಈಗ ಮತ್ತೆ ಹೆಚ್ಚಳ ಮಾಡಲು ಸಾಧ್ಯವಿಲ್ಲ’ ಎಂದು ಸ್ಪಷ್ಟಪಡಿಸಿರುವುದಾಗಿ ಉನ್ನತ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.

ಹಾಲಿ ಇರುವ ಸೀಟು ಹಂಚಿಕೆ ಮತ್ತು ಶುಲ್ಕ ಪದ್ಧತಿಯನ್ನೇ 2014–15ನೇ ಸಾಲಿಗೂ ಮುಂದುವರಿಸಲು ಖಾಸಗಿ ಕಾಲೇಜುಗಳು ಒಪ್ಪದೆ ಇದ್ದರೆ 2006ರ ಕರ್ನಾಟಕ ವೃತ್ತಿಪರ ಶಿಕ್ಷಣ ಸಂಸ್ಥೆಗಳ (ಪ್ರವೇಶ ನಿಯಂತ್ರಣ ಮತ್ತು ಶುಲ್ಕ ನಿಗದಿ) ಕಾಯ್ದೆಗೆ ತಿದ್ದುಪಡಿ ತರುವ ಮೂಲಕ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಸಿದ್ಧತೆ ಮಾಡಿಕೊಂಡಿದೆ.

ಈ ಸಂಬಂಧ ಉನ್ನತ ಶಿಕ್ಷಣ ಇಲಾಖೆ ರೂಪಿಸಿರುವ ಕರಡು ನಿಯಮಾವಳಿಗೆ ಕಾನೂನು ಇಲಾಖೆ ಒಪ್ಪಿಗೆ ಸೂಚಿಸಿದೆ. ಲೋಕಸಭಾ ಚುನಾವಣೆ ನಂತರ ಸುಗ್ರೀವಾಜ್ಞೆ ಹೊರಡಿಸಲಾಗುವುದು ಎಂದು ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಸರ್ಕಾರದೊಂದಿಗೆ ನಡೆದ ಮೊದಲ ಸುತ್ತಿನ ಮಾತುಕತೆ ಸಂದರ್ಭದಲ್ಲಿ ಈಗಿರುವ ಶುಲ್ಕ ಪದ್ಧತಿಯನ್ನೇ 2014–15ನೇ ಸಾಲಿಗೂ ಮುಂದುವರಿಸಲು ಖಾಸಗಿ ಎಂಜಿನಿಯರಿಂಗ್ ಕಾಲೇಜು ಗಳು ಒಪ್ಪಿಕೊಂಡಿದ್ದವು. ಆದರೆ, ನಾಲ್ಕೇ ದಿನದಲ್ಲಿ ರಾಗ ಬದಲಾಯಿಸಿದ ಕಾಲೇಜುಗಳು ಶೇ 25ರಷ್ಟು ಶುಲ್ಕ ಹೆಚ್ಚಳ ಮಾಡುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು.

ರಾಜ್ಯದವರಿಗೆ ಮಾತ್ರ ಸೀಟು: ತಿದ್ದುಪಡಿ ಕಾಯ್ದೆ ಪ್ರಕಾರ ಅಖಿಲ ಭಾರತ ಕೋಟಾ ಇರುವುದಿಲ್ಲ.ಎಲ್ಲ ಸೀಟುಗಳನ್ನು ರಾಜ್ಯದ ವಿದ್ಯಾರ್ಥಿಗಳಿಗೆ ಮೀಸಲಿಡಲಾಗುತ್ತದೆ.ಕಾಮೆಡ್– ಕೆ ಕೋಟಾ ಸೀಟುಗಳನ್ನು ಇದುವರೆಗೆ ಹೊರ ರಾಜ್ಯ ದವರೇ ಹೆಚ್ಚಾಗಿ ಪಡೆಯುತ್ತಿದ್ದರು. ಆದರೆ, ಕಾಯ್ದೆಗೆ ತಿದ್ದುಪಡಿಯಾದ ನಂತರ ಇದಕ್ಕೆ ಅವಕಾಶ ಇರುವುದಿಲ್ಲ.

ಕನಿಷ್ಠ 10 ವರ್ಷ ರಾಜ್ಯದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮಾತ್ರ ಸೀಟುಗಳನ್ನು ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ. ಸೀಟು ಬಯಸುವ ವಿದ್ಯಾರ್ಥಿಯ ತಂದೆ – ತಾಯಿ 10 ವರ್ಷ ಕಾಲ ರಾಜ್ಯದಲ್ಲಿ ವಾಸವಾಗಿದ್ದರೆ ಸೀಟು ಪಡೆಯಲು ಅರ್ಹರಾಗುತ್ತಾರೆ ಎಂಬ ಅಂಶ ಹೊಸ ಕಾಯ್ದೆಯಲ್ಲಿದೆ.

ಶೇ 15ರಷ್ಟು ಅನಿವಾಸಿ ಭಾರತೀಯ ಕೋಟಾ ಸೀಟುಗಳಿಗೆ ಖಾಸಗಿ ಕಾಲೇಜು ಗಳ ಆಡಳಿತ ಮಂಡಳಿಗಳು ಎಷ್ಟು ಬೇಕಾದರೂ ಶುಲ್ಕ ಪಡೆಯಬಹುದು. ಆದರೆ, ಆ ಹಣದಲ್ಲಿ ಪರಿಶಿಷ್ಟ ಜಾತಿ/ ಪಂಗಡ, ಹಿಂದುಳಿದ ವರ್ಗದವರಿಗೆ ವಿದ್ಯಾರ್ಥಿವೇತನ ನೀಡಬೇಕಾಗುತ್ತದೆ. ಇದು ಕಡ್ಡಾಯವಾಗಿದ್ದು, ಕಾಯ್ದೆಯಲ್ಲೇ ಸೇರಿಸಲಾಗುತ್ತದೆ ಎಂದು ಅವರು ಹೇಳಿದರು.

ಸೋಮವಾರ ಸಭೆ: ವೈದ್ಯಕೀಯ/ ದಂತ ವೈದ್ಯಕೀಯ ಕೋರ್ಸ್ಗಳ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಒಪ್ಪಂದ ಮಾಡಿಕೊಳ್ಳಲು ವೈದ್ಯಕೀಯ ಶಿಕ್ಷಣ ಇಲಾಖೆ ಸಿದ್ಧಪಡಿಸಿರುವ ಕರಡು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರವು ಸೋಮವಾರ ಕಾಮೆಡ್ – ಕೆ ಪದಾಧಿಕಾರಿಗಳನ್ನು ಮಾತುಕತೆಗೆ ಆಹ್ವಾನಿಸಿದೆ.

ಕಾಮೆಡ್ –ಕೆ ಸೀಟುಗಳು ಖಾಲಿ: ರಾಜ್ಯದಲ್ಲಿ ಒಟ್ಟು 96,340 ಎಂಜಿನಿಯರಿಂಗ್ ಸೀಟುಗಳು ಲಭ್ಯವಿವೆ. ಈ ಪೈಕಿ 46,542 (ಶೇ 45) ಸೀಟುಗಳು ಸರ್ಕಾರಿ ಕೋಟಾ ಮೂಲಕ ಹಂಚಿಕೆಯಾಗುತ್ತವೆ.23,897 (ಶೇ 30) ಸೀಟುಗಳು ಕಾಮೆಡ್ – ಕೆ ಮೂಲಕ ಹಂಚಿಕೆ ಆಗುತ್ತವೆ. 20,087 (ಶೇ 25) ಸೀಟುಗಳು ಆಡಳಿತ ಮಂಡಳಿ ಹಾಗೂ ಅನಿವಾಸಿ ಭಾರತೀಯ ಕೋಟಾ ಮೂಲಕ ಹಂಚಿಕೆಯಾಗುತ್ತವೆ.

2013–14ನೇ ಸಾಲಿನಲ್ಲಿ ಕಾಮೆಡ್ – ಕೆಗೆ ಹಂಚಿಕೆಯಾಗಿದ್ದ 23,897 ಸೀಟುಗಳ ಪೈಕಿ 17 ಸಾವಿರ ಸೀಟುಗಳು ಖಾಲಿ ಉಳಿದಿದ್ದವು. 11,318 ಸೀಟುಗಳನ್ನು ಖಾಸಗಿ ಕಾಲೇಜುಗಳ ಆಡಳಿತ ಮಂಡಳಿಗಳು ಸರ್ಕಾರಕ್ಕೆ ವಾಪಸ್ ಮಾಡಿದ್ದವು.ಅಲ್ಪಸಂಖ್ಯಾತ ಎಂಜಿನಿಯರಿಂಗ್ ಕಾಲೇಜುಗಳು 2923 (ಶೇ 30)ರಷ್ಟು ಸೀಟುಗಳನ್ನು ಕೆಆರ್ಎಲ್ಎಂ ಕೋಟಾ ಮೂಲಕ ಹಾಗೂ 2891 ಸೀಟುಗಳನ್ನು ಆಡಳಿತ ಮಂಡಳಿ ಕೋಟಾ ಮೂಲಕ ಹಂಚಿಕೆ ಮಾಡುತ್ತವೆ.

ಹೈಕೋರ್ಟ್ಗೆ ಖಾಸಗಿ ಕಾಲೇಜುಗಳ ಅರ್ಜಿ
ಬೆಂಗಳೂರು: ವೃತ್ತಿ ಶಿಕ್ಷಣ ಕೋರ್ಸ್ಗಳಿಗೆ ಪ್ರವೇಶ ಪಡೆಯುವ ಎಲ್ಲ ವಿದ್ಯಾರ್ಥಿಗಳಿಂದ ಏಕರೂಪದ ಶುಲ್ಕ ಸಂಗ್ರಹಿಸಲು ಅವಕಾಶ ನೀಡಬೇಕು ಎಂದು ಕೋರಿ 13 ಖಾಸಗಿ ಅನುದಾನ ರಹಿತ ಎಂಜಿನಿಯರಿಂಗ್ ಕಾಲೇಜುಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿವೆ.

‘ಸರ್ಕಾರಿ ಕೋಟಾ ಅಡಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಂದ ಒಂದು ಮಾದರಿಯ ಶುಲ್ಕ, ಆಡಳಿತ ಮಂಡಳಿ ಕೋಟಾ ಅಡಿ ಪ್ರವೇಶ ಗಿಟ್ಟಿಸುವ ವಿದ್ಯಾರ್ಥಿಗಳಿಂದ ಇನ್ನೊಂದು ಮಾದರಿಯ ಶುಲ್ಕ ಪಡೆಯುವ ವ್ಯವಸ್ಥೆಯನ್ನು ನಮ್ಮ ಮೇಲೆ ಹೇರದಂತೆ ಸರ್ಕಾರಕ್ಕೆ ಸೂಚನೆ ನೀಡಬೇಕು’ ಎಂದೂ ಅರ್ಜಿಯಲ್ಲಿ ಕೋರಲಾಗಿದೆ.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಲ್. ಮಂಜುನಾಥ್ ಮತ್ತು ನ್ಯಾಯಮೂರ್ತಿ ರವಿ ಮಳಿಮಠ ಅವರಿದ್ದ ವಿಭಾಗೀಯ ಪೀಠ ಸರ್ಕಾರಕ್ಕೆ ನೋಟಿಸ್ ಜಾರಿಗೆ ಆದೇಶಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದೆ.ಅರ್ಜಿ ಸಲ್ಲಿಸಿರುವ ಎಂಜಿನಿಯರಿಂಗ್ ಕಾಲೇಜುಗಳೆಲ್ಲವೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿವೆ.

ವೃತ್ತಿ ಶಿಕ್ಷಣ ಕೋರ್ಸ್ಗಳ ಶುಲ್ಕ ನಿಗದಿಗೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಅಜಿತ್ ಗುಂಜಾಳ್ ನೇತೃತ್ವದಲ್ಲಿ ರಚಿಸಿರುವ ಸಮಿತಿಯ ಖಾಸಗಿ ಕಾಲೇಜುಗಳು ನೀಡಿರುವ ಶುಲ್ಕ ಹೆಚ್ಚಳ ಪ್ರಸ್ತಾವನೆಯನ್ನು ಪರಿಶೀಲಿಸಬೇಕು, ಅದಕ್ಕೆ ಅನುಮೋದನೆ ನೀಡಬೇಕು, ಸಮಿತಿ ನಿಗದಿ ಮಾಡುವ ಶುಲ್ಕವನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದೂ ಕಾಲೇಜುಗಳು ನ್ಯಾಯಪೀಠವನ್ನು ಕೋರಿವೆ.

‘2014–15ನೇ ಶೈಕ್ಷಣಿಕ ಸಾಲಿನ ವೃತ್ತಿ ಶಿಕ್ಷಣ ಕೋರ್ಸ್ಗಳ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತಿದೆ. ಬೇರೆ ಬೇರೆ ಕಾಲೇಜುಗಳ ಶುಲ್ಕ ಎಷ್ಟು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಬೇಕು. ಇಂಥ ಸಂದರ್ಭದಲ್ಲಿ ಸಮಿತಿಗೆ ಶುಲ್ಕ ನಿಗದಿ ಮಾಡಲು ಅವಕಾಶ ನೀಡದೆ, ಕಾಲೇಜುಗಳು ಕಳೆದ ವರ್ಷ ನಿಗದಿಯಾದ ಮೊತ್ತವನ್ನೇ ಈ ಬಾರಿಯೂ ಸಂಗ್ರಹಿಸಬೇಕು ಎಂದು ಸರ್ಕಾರ ಹೇಳುವುದು ಸಮರ್ಥನೀಯವಲ್ಲ’ ಎಂಬುದು ಕಾಲೇಜುಗಳ ವಾದ.

ಈಗಿರುವ ಶುಲ್ಕ
ಕಾಮೆಡ್– ಕೆ ಕೋಟಾ ಮೂಲಕ ಹಂಚಿಕೆಯಾಗುವ ಎಂಜಿನಿಯರಿಂಗ್ ಸೀಟುಗಳಿಗೆ ಪ್ರಸ್ತುತ ಎರಡು ರೀತಿಯ ಶುಲ್ಕವಿದೆ. ಇವುಗಳಲ್ಲಿ ಯಾವು ದಾದರೂ ಒಂದನ್ನು ಆಯ್ಕೆ ಮಾಡಿ ಕೊಳ್ಳಬಹುದು. ಸರ್ಕಾರಿ ಕೋಟಾ ಸೀಟಿಗೆ ರೂ.41,590 ಶುಲ್ಕ ಪಡೆಯುವ ಖಾಸಗಿ ಕಾಲೇಜುಗಳು ಕಾಮೆಡ್– ಕೆ ಕೋಟಾ ಸೀಟಿಗೆ ರೂ.1.10 ಲಕ್ಷ ಶುಲ್ಕ ಪಡೆಯಬಹುದು. ಅದೇ ರೀತಿ ಸರ್ಕಾರಿ ಕೋಟಾ ಸೀಟಿಗೆ ರೂ.38,090 ಶುಲ್ಕ ಸಂಗ್ರಹಿಸುವ ಖಾಸಗಿ ಕಾಲೇಜುಗಳು ‘ಆಡಳಿತ ಮಂಡಳಿ ಕೋಟಾ’ ಸೀಟುಗಳಿಗೆ ರೂ. 1.37 ಲಕ್ಷ ಶುಲ್ಕ ಪಡೆಯಲು ಅವಕಾಶವಿದೆ.

ಇಂದಿನಿಂದ ಅರ್ಜಿ ಸಲ್ಲಿಕೆ
ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ಕೋರ್ಸ್ಗಳ ಪ್ರವೇಶಕ್ಕೆ ಮೇ 1ರಿಂದ ನಡೆಯುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶನಿವಾರದಿಂದ ಆರಂಭವಾಗಲಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ಸೈಟ್ ಮೂಲಕ ಚಲನ್ ಡೌನ್ಲೋಡ್ ಮಾಡಿಕೊಂಡು ಸಂಬಂಧಪಟ್ಟ ಬ್ಯಾಂಕ್ನಲ್ಲಿ ಶುಲ್ಕ ಪಾವತಿಸಬೇಕು.

ಈ ತಿಂಗಳ 17ರವರೆಗೂ ಶುಲ್ಕ ಪಾವತಿಗೆ ಅವಕಾಶ ಇದೆ. ಈ ತಿಂಗಳ 22ರ ನಂತರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಿಗೆ ಕೈಪಿಡಿಯನ್ನು ಕಳುಹಿಸಲಾಗುತ್ತದೆ. ಸಾಮಾನ್ಯ ವರ್ಗದವರಿಗೆ ರೂ.650 ಹಾಗೂ ಪರಿಶಿಷ್ಟ ಜಾತಿ/ ಪಂಗಡ ಹಾಗೂ ಪ್ರವರ್ಗ–1ಕ್ಕೆ ಸೇರಿದ ವಿದ್ಯಾರ್ಥಿಗಳು ರೂ.500 ಶುಲ್ಕ ಪಾವತಿಸಬೇಕು. ಈ ಬಾರಿ ಬಿ.ಫಾರ್ಮಾ ಪದವಿಗೆ ಸೇರಬಯಸುವ ವಿದ್ಯಾರ್ಥಿಗಳೂ ಸಿಇಟಿ ಬರೆಯಬೇಕಾಗುತ್ತದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.