ಶನಿವಾರ, ಆಗಸ್ಟ್ 15, 2020
21 °C

ಶ್ರೀಲಂಕಾಕ್ಕೆ ಬಂದ ದೋನಿ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಲಂಕಾಕ್ಕೆ ಬಂದ ದೋನಿ ಪಡೆ

ಕೊಲಂಬೊ: ಏಕದಿನ ಸರಣಿ ಹಾಗೂ ಏಕೈಕ ಟಿ-20 ಪಂದ್ಯವನ್ನಾಡಲು ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ಕ್ರಿಕೆಟ್ ತಂಡ ಬುಧವಾರ ಶ್ರೀಲಂಕಾಕ್ಕೆ ಬಂದಿಳಿಯಿತು.

ಭಾರತದ ಆಟಗಾರರನ್ನು ವಿಮಾನ ನಿಲ್ದಾಣದಲ್ಲಿ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು. ನಂತರ ದೋನಿ ಹಾಗೂ ಶ್ರೀಲಂಕಾ ತಂಡದ ನಾಯಕ ಮಾಹೇಲ ಜಯವರ್ಧನೆ ಅವರು ಏಕದಿನ ಸರಣಿಯ ಟ್ರೋಫಿ ಅನಾವರಣ ಮಾಡಿದರು. ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉಭಯ ತಂಡಗಳ ನಾಯಕರು ಪಾಲ್ಗೊಂಡಿದ್ದರು. ಜುಲೈ 21ರಂದು ಹಂಬಂಟೋಟಾದಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ.

ಚೆನ್ನೈ ವರದಿ (ಪಿಟಿಐ): `ನಾವು ಸಾಕಷ್ಟು ವಿಶ್ರಾಂತಿ ಅವಧಿ ಕಳೆದು ಕ್ರಿಕೆಟ್ ಆಡಲು ಬಂದಿದ್ದೇವೆ. ಈಗ ಸತತವಾಗಿ ಕ್ರಿಕೆಟ್ ಸರಣಿಗಳಿವೆ. ಮೊದಲು ಲಂಕಾ ಪ್ರವಾಸದಲ್ಲಿ ಉತ್ತಮ ಆರಂಭ ಪಡೆಯಬೇಕು~ ಎಂದು ದೋನಿ ಲಂಕಾಕ್ಕೆ ಹೋಗುವ ಮುನ್ನ ಇಲ್ಲಿ ಹೇಳಿದರು.

`ದೀರ್ಘ ಕಾಲದ ಬಿಡುವು ಪಡೆದು ಬಂದಿದ್ದೇವೆ. ಕ್ಷೇತ್ರ ರಕ್ಷಣೆ ಹಾಗೂ ಇತರ ಚಟುವಟಿಕೆಗಳನ್ನು ನಡೆಸಲು ಕೊಂಚ ಕಷ್ಟವಾಗುತ್ತಿದೆ~ ಎಂದೂ ನುಡಿದರು.

ಲಂಕಾ ಪ್ರವಾಸದ ಬಳಿಕ ನ್ಯೂಜಿಲೆಂಡ್ ಎದುರು ಸರಣಿ, ಟಿ-20 ವಿಶ್ವಕಪ್, ಈ ವರ್ಷದ ಅಂತ್ಯದಲ್ಲಿ ಇಂಗ್ಲೆಂಡ್ ಜೊತೆ ಸರಣಿ ಹಾಗೂ ಪಾಕಿಸ್ತಾನ ಎದುರು ನಡೆಯಲಿರುವ ಮೂರು ಏಕದಿನ ಹಾಗೂ ಟಿ-20 ಪಂದ್ಯಗಳ ಸರಣಿಯನ್ನು ಭಾರತ ಆಡಬೇಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.