ಬುಧವಾರ, ಮೇ 12, 2021
19 °C

ಶ್ರೀಶಾಂತ್, ಅಂಕಿತ್‌ಗೆ ಜಾಮೀನು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಸ್ಪಾಟ್‌ಫಿಕ್ಸಿಂಗ್ ಪ್ರಕರಣದ ಆರೋಪಿಗಳಾಗಿರುವ ರಾಜಸ್ತಾನ ರಾಯಲ್ಸ್ ತಂಡದ ಎಸ್.ಶ್ರೀಶಾಂತ್ ಮತ್ತು ಅಂಕಿತ್ ಚವಾಣ್ ಅವರಲ್ಲದೆ 17ಮಂದಿ ಬುಕ್ಕಿಗಳಿಗೆ ದೆಹಲಿ  ಹೈಕೋರ್ಟ್ ಸೋಮವಾರ ಜಾಮೀನು ನೀಡಿದೆ.ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ವಿ.ಕೆ.ಖನ್ನಾ ಈ ತೀರ್ಪು ನೀಡಿದ್ದಾರೆ. ರಾಯಲ್ಸ್ ಆಟಗಾರರು ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗಿದ್ದಾರೆ ಎನ್ನುವ ಆರೋಪಕ್ಕೆ ಪೊಲೀಸರು ಸೂಕ್ತ ದಾಖಲೆಗಳನ್ನು ಒದಗಿಸಿಲ್ಲ ಎಂದು ನ್ಯಾಯಾಲಯ 1ಅಭಿಪ್ರಾಯ ಪಟ್ಟಿದೆ.ಬುಕ್ಕಿಗಳಾದ ಜಿಜು ಜನಾರ್ದನ ಮತ್ತು ಟಂಕು ಮುಂಡಿ ಅವರಿಗೂ ಜಾಮೀನು ಲಭಿಸಿದೆ. ಆದರೆ, ರಾಯಲ್ಸ್ ತಂಡದ ಇನ್ನೊಬ್ಬ ಆಟಗಾರ ಅಜಿತ್ ಚಾಂಡಿಲ ಮತ್ತು ಇತರ ಆರು ಮಂದಿ ಜಾಮೀನಿಗಾಗಿ ಅರ್ಜಿ ಸಲ್ಲಿಸಿಲ್ಲ. ಜಾಮೀನು ದೊರೆತವರು ವಿಚಾರಣೆ ಪೂರ್ಣಗೊಳ್ಳುವ ತನಕ ಭಾರತವನ್ನು ಬಿಟ್ಟು ತೆರಳುವಂತಿಲ್ಲ. ಪಾಸ್‌ಪೋರ್ಟ್‌ಗಳನ್ನು ಒಪ್ಪಿಸಬೇಕು ಎಂದು ನ್ಯಾಯಾಲಯ ಸೂಚನೆ ನೀಡಿದೆ.  ಶ್ರೀಶಾಂತ್‌ಗೆ ಜಾಮೀನು ಲಭಿಸಿರುವುದಕ್ಕೆ ಅವರ ತಾಯಿ ಸಾವಿತ್ರಿ ದೇವಿ ಸಂತೋಷ ವ್ಯಕ್ತಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.