ಪರ್ತ್ (ಎಎಫ್ಪಿ): ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎರಡನೇ ದಿನ ದಾಟದಲ್ಲಿ ಬೇಗನೆ ಕಟ್ಟಿ ಹಾಕಿದರೂ, ದಿಢೀರ್ ಕುಸಿತ ಕಂಡ ಇಂಗ್ಲೆಂಡ್ ತಂಡಕ್ಕೆ ನಾಯಕ ಅಲಸ್ಟೇರ್ ಕುಕ್ ಆಸರೆಯಾದರು. ಇದರಿಂದ ಪ್ರವಾಸಿ ತಂಡ ಮರು ಹೋರಾಟ ನಡೆಸಿದೆ.

ಆ್ಯಷಸ್ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿ ಕಾಂಗರೂ ನಾಡಿನ ಬಳಗ ಮೊದಲ ಇನಿಂಗ್ಸ್ನಲ್ಲಿ 103.3 ಓವರ್ಗಳಲ್ಲಿ 385 ರನ್ ಕಲೆ ಹಾಕಿತು. ಮೊದಲ ದಿನವಾದ ಶುಕ್ರವಾರದ ಅಂತ್ಯಕ್ಕೆ ಈ ತಂಡ ಆರು ವಿಕೆಟ್ ಕಳೆದು ಕೊಂಡು 326 ರನ್ ಗಳಿಸಿತ್ತು. ಶನಿ ವಾರ 59 ರನ್ ಕಲೆ ಹಾಕುವ ಅಂತರ ದಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡಿತು.

ಮೊದಲ ಇನಿಂಗ್ಸ್ನ ಬ್ಯಾಟಿಂಗ್ ಆರಂಭಿಸಿರುವ ಇಂಗ್ಲೆಂಡ್ ಎರಡನೇ ದಿನದಾಟದ ಅಂತ್ಯಕ್ಕೆ 68 ಓವರ್ಗಳಲ್ಲಿ ನಾಲ್ಕು ವಿಕೆಟ್ ಕಳೆದುಕೊಂಡು 180 ರನ್ ಗಳಿಸಿದೆ.

ಕುಕ್ ನೆರವು: ಮೊದಲ ವಿಕೆಟ್ ಜೊತೆಯಾಟದಲ್ಲಿ ಕುಕ್ (72, 153ಎಸೆತ, 10 ಬೌಂಡರಿ) ಮತ್ತು ಮೈಕಲ್ ಕ್ಯಾರಿಬೆರ್ರಿ (43) 85 ರನ್ ಕಲೆ ಹಾಕಿದರು. ಇಂಗ್ಲೆಂಡ್ 61 ರನ್ ಗಳಿಸುವ ಅಂತರದಲ್ಲಿ 4 ವಿಕೆಟ್ ಕಳೆದು ಕೊಂಡ ಕಾರಣ ಸಂಕಷ್ಟಕ್ಕೆ ಸಿಲುಕಿತು.

100ನೇ ಟೆಸ್ಟ್: ಆಸೀಸ್ ತಂಡದ ನಾಯಕ ಕ್ಲಾರ್ಕ್ ಮತ್ತು ಇಂಗ್ಲೆಂಡ್ ಸಾರಥ್ಯ ವಹಿಸಿಕೊಂಡಿರುವ ಕುಕ್ ಇಬ್ಬ ರಿಗೂ ಇದು 100ನೇ ಟೆಸ್ಟ್ ಪಂದ್ಯ.

ಸಂಕ್ಷಿಪ್ತ ಸ್ಕೋರು: ಆಸ್ಟ್ರೇಲಿಯಾ 103.3 ಓವರ್ಗಳಲ್ಲಿ 385 (ಸ್ಟೀವನ್ ಸ್ಮಿತ್ 111, ಮಿಷೆಲ್ ಜಾನ್ಸನ್ 39; ಜೇಮ್ಸ್ ಆ್ಯಂಡರ್ಸನ್ 60ಕ್ಕೆ2, ಸ್ಟುವರ್ಟ್ ಬ್ರಾಡ್್ 100ಕ್ಕೆ3, ಗ್ರೇಮ್ ಸ್ವಾನ್ 71ಕ್ಕೆ2); ಇಂಗ್ಲೆಂಡ್್ 68 ಓವರ್ಗಳಲ್ಲಿ 4 ವಿಕೆಟ್ಗೆ 180 (ಅಲಸ್ಟೇರ್ ಕುಕ್ 72, ಮೈಕಲ್ ಕ್ಯಾರಿಬೆರ್ರಿ 43; ರ್್ಯಾನ್ ಹ್ಯಾರಿಸ್ 26ಕ್ಕೆ1, ಶೇನ್ ವಾಟ್ಸನ್ 32ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.