ಮಾಸ್ಕೊ(ಪಿಟಿಐ): ರಷ್ಯಾದ ಪ್ರಸಿದ್ಧ ಗ್ಲಿಂಕಾ ರಾಷ್ಟ್ರೀಯ ವಸ್ತು ಸಂಗ್ರಹಾಲಯಕ್ಕೆ ಭಾರತವು ಶಾಸ್ತ್ರೀಯ ಸಂಗೀತ ವಾದ್ಯಗಳ ಉಡುಗೊರೆ ನೀಡುವ ಮೂಲಕ ಸಾಂಸ್ಕೃತಿಕ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

ಗ್ಲಿಂಕಾ ವಸ್ತು ಸಂಗ್ರಹಾಲಯವು ಶತಮಾನೋತ್ಸವ ಆಚರಿಸಿಕೊಳ್ಳತ್ತಿರುವ ಸಂದರ್ಭದಲ್ಲಿ ಭಾರತ ಈ ಕಾಣಿಕೆ ನೀಡಿದೆ. ಇದರಲ್ಲಿ ಸಿತಾರ್, ಸರೋದ್, ವೀಣೆ, ತಬಲ ವಾದ್ಯಗಳು ಸೇರಿವೆ. ರಷ್ಯಾದಲ್ಲಿರುವ ಭಾರತದ ರಾಯಭಾರಿ ಅಜಯ್ ಮಲ್ಹೋತ್ರ ಅವರು ಗ್ಲಿಂಕಾ ಅಧಿಕಾರಿಗಳಿಗೆ ಈ ಸಂಗೀತ ಸಾಧನಗಳನ್ನು ಹಸ್ತಾಂತರಿಸಿದರು.

`ಸಂಗ್ರಹಾಲಯದಲ್ಲಿರುವ ಹತ್ತು ಲಕ್ಷಕ್ಕೂ ಹೆಚ್ಚಿನ ಸಂಗೀತ ಸಾಧನಗಳಲ್ಲಿ ಇವು ಮೌಲ್ಯಯುತವಾದವು~ ಎಂದು ವಸ್ತು ಸಂಗ್ರಹಾಲಯದ ಹಿರಿಯ ಅಧಿಕಾರಿ ವ್ಲಾಡಿಮಿರ್ ಲಿಸೆಂಕೊ ಬಣ್ಣಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.