ಮಂಗಳವಾರ, ಜೂನ್ 15, 2021
26 °C

ಸಂಸ್ಕೃತಿ ಸಚಿವಾಲಯಕ್ಕೆ 76 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಈ ಬಜೆಟ್‌ನಲ್ಲಿ ಸಂಸ್ಕೃತಿ ಸಚಿವಾಲಯಕ್ಕೆ 67 ಕೋಟಿ ರೂ. ಹೆಚ್ಚುವರಿಯಾಗಿ ನೀಡಲಾಗಿದೆ. ಈ ವರ್ಷ ಇದಕ್ಕೆ 1,447 ಕೋಟಿ ನಿಗದಿಪಡಿಸಲಾಗಿದೆ.ಕಳೆದ ವರ್ಷ ಈ ಇಲಾಖೆಗೆ 1378 ಕೋಟಿ ನೀಡಲಾಗಿತ್ತು. 864 ಕೋಟಿ ರೂ.ಗಳನ್ನು ಯೋಜನಾ ವೆಚ್ಚಕ್ಕಾಗಿ ಮತ್ತು 583 ಕೋಟಿ ಯೋಜನೇತರ ವೆಚ್ಚಕ್ಕಾಗಿ ಖರ್ಚು ಮಾಡಬಹುದಾಗಿದೆ ಎಂದು ಮುಖರ್ಜಿ ಹೇಳಿದ್ದಾರೆ.ದೇಶದ ಪ್ರಾಚೀನ ಸ್ಮಾರಕ ರಕ್ಷಿಸುತ್ತಿರುವ ಪುರಾತತ್ವ ಇಲಾಖೆಗೆ ಈ ಬಾರಿ 462 ಕೋಟಿ ನೀಡಲಾಗಿದ್ದು, ಕಳೆದ ವರ್ಷ 430 ಕೋಟಿ ನೀಡಲಾಗಿತ್ತು.ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಎಲ್ಲ ಅಕಾಡೆಮಿ ಮತ್ತು ಸಂಸ್ಥೆಗಳ ಅನುದಾನವನ್ನು ಹೆಚ್ಚಿಸಲಾಗಿದೆ.ಸಂಗೀತ, ನಾಟಕ, ಲಲಿತಕಲಾ ಅಕಾಡೆಮಿ ಮತ್ತು ಸಾಹಿತ್ಯ ಅಕಾಡೆಮಿಗೆ 31 ಕೋಟಿ, ಪ್ರತಿಷ್ಠಿತ ಇಂದಿರಾಗಾಂಧಿ ರಾಷ್ಟ್ರೀಯ ಕಲಾ ಕೇಂದ್ರಕ್ಕೆ 25 ಕೋಟಿ ನೀಡಲಾಗಿದ್ದು, ರಾಷ್ಟ್ರೀಯ ನಾಟಕ ಶಾಲೆಗೆ 23.50 ಕೋಟಿ ಅನುದಾನ  ಕಲ್ಪಿಸಲಾಗಿದೆ. ಲಾಲ ಬಹಾದ್ದೂರ್ ಶಾಸ್ತ್ರಿ ಅವರ ಜನ್ಮ ಶತಮಾಮಾನೋತ್ಸವ ಆಚರಣೆಗೆ 2 ಕೋಟಿ ಮತ್ತು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ 150ನೇ ವಾರ್ಷಿಕೋತ್ಸವ ಆಚರಣೆಗೆ 2.20 ಕೋಟಿ ರೂ. ನೀಡಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.