ನವದೆಹಲಿ (ಪಿಟಿಐ): ಶತಕಗಳ ಶತಕ ಗಳಿಸಿದ ಬ್ಯಾಟಿಂಗ್ ಚಾಂಪಿಯನ್ ಸಚಿನ್ ತೆಂಡೂಲ್ಕರ್ ಅವರ ಸಾಧನೆಯನ್ನು ಸಂಸತ್ನಲ್ಲಿ ಶ್ಲಾಘಿಸಲಾಯಿತು. `ಇದೊಂದು ಶ್ರೇಷ್ಠ ಸಾಧನೆ~ ಎಂದು ಉಭಯ ಸದನಗಳಲ್ಲಿ ಸದಸ್ಯರು ನುಡಿದರು.

`ಇದು ರಾಷ್ಟ್ರದ ಹೆಮ್ಮೆ. ಇದು ಕ್ರಿಕೆಟ್ ಆಡುವ ಎಲ್ಲಾ ಮಕ್ಕಳಿಗೆ ಸ್ಫೂರ್ತಿ ಆಗುವಂಥದ್ದು~ ಎಂದು ಲೋಕಸಭಾ ಸ್ಪೀಕರ್ ಮೀರಾ ಕುಮಾರ್ ಹೇಳಿದರು. `ತೆಂಡೂಲ್ಕರ್ ಹಾಗೂ ಭಾರತ ತಂಡಕ್ಕೆ ನಮ್ಮ ಅಭಿನಂದನೆಗಳು~ ಎಂದು ಅವರು ತಿಳಿಸಿದರು.

ಮೀರ್ಪುರದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ ಶತಕ ಗಳಿಸುವ ಮೂಲಕ ತೆಂಡೂಲ್ಕರ್ ಈ ಸಾಧನೆ ಮಾಡಿದ್ದರು.

ರಾಜ್ಯಸಭಾ ಸದಸ್ಯರು ಕೂಡ ಸಚಿನ್ ಸಾಧನೆಯನ್ನು ಕೊಂಡಾಡಿದರು. `ಭಾರತದ ಆಸೆ ಹಾಗೂ ಉತ್ತಮ ಭವಿಷ್ಯವನ್ನು ಸಚಿನ್ ಅವರ ಶತಕಗಳ ಶತಕದ ಸಾಧನೆ ಪ್ರತಿನಿಧಿಸುತ್ತದೆ~ ಎಂದು ಬಿಜೆಪಿ ಸದಸ್ಯ ತರುಣ್ ವಿಜಯ್ ನುಡಿದರು.

ಪಾಕಿಸ್ತಾನ ವಿರುದ್ಧದ ಜಯಕ್ಕೆ ಕಾರಣವಾದ ವಿರಾಟ್ ಕೊಹ್ಲಿ (183) ಅವರ ಆಟವನ್ನೂ ಈ ಸಂದರ್ಭದಲ್ಲಿ ಶ್ಲಾಘಿಸಲಾಯಿತು.

ಸ್ವಿಟ್ಜರ್ಲೆಂಡ್ನ ಬಾಸೆಲ್ನಲ್ಲಿ ನಡೆದ ಸ್ವಿಸ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಚಾಂಪಿಯನ್ ಆದ ಸೈನಾ ನೆಹ್ವಾಲ್ ಅವರನ್ನು ಸ್ಪೀಕರ್ ಮೀರಾ ಕುಮಾರ್ ಅಭಿನಂದಿಸಿದರು. ಈ ಟೂರ್ನಿಯ ಫೈನಲ್ನಲ್ಲಿ ಸೈನಾ 21-19, 21-16ರಲ್ಲಿ ಮೂರನೇ ರ್ಯಾಂಕ್ನ ಆಟಗಾರ್ತಿ ಚೀನಾದ ಶಿಕ್ಸಿಯನ್ ವಾಂಗ್ ಎದುರು ಗೆಲುವು ಸಾಧಿಸಿದ್ದರು.

ಭಾರತ ರತ್ನ ನೀಡಿ (ಮುಂಬೈ ವರದಿ): ಅದ್ಭುತ ಸಾಧನೆಗಳ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರಿಗೆ `ಭಾರತ ರತ್ನ~ ನೀಡಬೇಕೆಂದು ಬಿಸಿಸಿಐ ಉಪಾಧ್ಯಕ್ಷ ಹಾಗೂ ಕೇಂದ್ರ ಸಚಿವ ರಾಜೀವ್ ಶುಕ್ಲಾ ಆಗ್ರಹಿಸಿದ್ದಾರೆ.

ಢಾಕಾ ವರದಿ: ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಅವರನ್ನು ಸೋಮವಾರ ಸಚಿನ್ ಭೇಟಿ ಮಾಡಿದರು. ನೂರನೇ ಶತಕ ಗಳಿಸಿದ ಸಚಿನ್ ಅವರಿಗೆ ಹಸೀನಾ ಸಹಿ ತಿಂಡಿ ಕಳುಹಿಸಿಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.