ಬುಧವಾರ, ಜೂನ್ 23, 2021
22 °C

ಸಚಿವರಿಗೆ ಅಡ್ಡಿಯಾಗದ ನೀತಿ ಸಂಹಿತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಪಟ್ಟಣ: ಲೋಕಸಭಾ ಚುನಾ­ವಣಾ ನೀತಿ ಸಂಹಿತೆ ಜಾರಿಯಾದ ನಂತರವೂ ಪಟ್ಟಣದ ಎಲೆಕೇರಿ ರೈಲ್ವೆ­ಗೇಟ್ ಅಂಡರ್‌ಪಾಸ್‌ ಕಾಮಗಾರಿ ಶಂಕುಸ್ಥಾಪನೆ ನಡೆಯಿತು.ನೀತಿ ಸಂಹಿತೆ ಜಾರಿಯಾದ ಕಾರಣ ಶಂಕುಸ್ಥಾಪನೆ ನೆರವೇರಿ­ಸುವುದಿಲ್ಲ ಎಂದೇ ಮಾತು ಆರಂಭಿಸಿದ ಸಚಿವ ಡಿ.ಕೆ.­ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಭಾಷಣ ಮಾಡಿದರು.ನನ್ನ 6 ತಿಂಗಳ ಅವಧಿಯಲ್ಲಿ  ಜನರ ನಿರೀಕ್ಷೆಗೆ ತಕ್ಕಂತೆ ಕಾರ್ಯ­ನಿರ್ವಹಿಸಿದ್ದೇನೆ. ನೀವು ನನ್ನ ಕೆಲ­ಸವನ್ನು ಮೆಚ್ಚಿದ್ದರೆ ಮುಂಬರುವ ಚುನಾವಣೆಯಲ್ಲಿ ನನ್ನನ್ನು ಆಶೀ­ರ್ವದಿಸಿ’ ಎಂದು ಡಿ.ಕೆ.ಸುರೇಶ್ ಮನವಿ ಮಾಡಿದರು.ಸರ್ಕಾರಿ ಕಾರ್ಯಕ್ರಮದ ವೇದಿಕೆ­ಯಲ್ಲೇ ಸಂಸದ ಸುರೇಶ್‌ ಅವರು ಚುನಾವಣಾ ಭಾಷಣ ಮಾಡಿ ಮತ ಯಾಚಿಸಿದ್ದು ವಿಶೇಷವಾಗಿತ್ತು. ರಾರಾಜಿಸಿದ ಬ್ಯಾನರ್‌ಗಳು: ಲೋಕ­ಸಭಾ ಚುನಾವಣೆಗೆ ದಿನಾಂಕ ಘೋಷಣೆಯಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದಾಗುತ್ತದೆ ಎಂಬ ಭಾವನೆ ಸಾರ್ವಜನಿಕರಲ್ಲಿ ಇತ್ತಾ­ದರೂ, ಬೆಳಗ್ಗೆಯಿಂದಲೇ ಬೃಹತ್ ವೇದಿಕೆ ಸಿದ್ಧಪಡಿಸಿ, ಪಟ್ಟಣದ ತುಂಬೆಲ್ಲಾ ಬ್ಯಾನರ್, ಕಟೌಟ್‌ ಮತ್ತು ಕಾಂಗ್ರೆಸ್‌ ಪಕ್ಷದ ಬಾವುಟ­ಗಳನ್ನು ಹಾರಿಸಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.