ಚಂಡೀಗಢ(ಪಿಟಿಐ): ದೇಶದಲ್ಲಿನ ಸಣ್ಣ, ಅತಿಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ದಿಮೆಗಳು(ಎಂಎಸ್ಎಂಇ) ಸದ್ಯ ಎದುರಿಸುತ್ತಿರುವ ಸಮಸ್ಯೆಗಳತ್ತ ಗಂಭೀರವಾಗಿ ಗಮನ ಹರಿಸಿರುವ `ಭಾರತೀಯ ಕೈಗಾರಿಕಾ ಒಕ್ಕೂಟ~(ಸಿಐಐ), ಮೊದಲಿಗೆ ಬ್ಯಾಂಕ್ಗಳು ಮತ್ತು ಹಣಕಾಸು ಸಂಸ್ಥೆಗಳ ಮೂಲಕ `ಎಂಎಸ್ಎಂಇ~ಗಳಿಗೆ ಆರ್ಥಿಕ ನೆರವು ದೊರೆಯುವಂತೆ ಮಾಡಲು ಯತ್ನಿಸುತ್ತಿದೆ.

ಇಲ್ಲಿ ಸೋಮವಾರ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ದಿಮೆದಾರರನ್ನುದ್ದೇಶಿಸಿ ಮಾತನಾಡಿದ ಸಿಐಐ ಅಧ್ಯಕ್ಷ ಆರ್.ನಾರಾಯಣನ್, ಈ ಸಣ್ಣ ಉದ್ದಿಮೆ ಕ್ಷೇತ್ರಕ್ಕೆ ಬಹಳ ಅಗತ್ಯವಾದ ಹಣಕಾಸಿನ ನೆರವು ದೊರಕಿಸಿಕೊಡುವ ಸಂಬಂಧ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದರು.

ದೊಡ್ಡ ಕಂಪೆನಿಗಳೂ `ಎಂಎಸ್ಎಂಇ~ಗಳಿಗೆ ತಮ್ಮದೇ ಆದ ರೀತಿಯಲ್ಲಿ ನೆರವಾಗಬಹುದು. ಹಣಕಾಸಿನ ನೆರವು ಮತ್ತು ತಂತ್ರಜ್ಞಾನ ಸಹಕಾರ ಒದಗಿಸಬಹುದು ಎಂದು ಗಮನ ಸೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.