ಕಟಕ್ (ಪಿಟಿಐ): ಒಡಿಶಾದ ಕಂಧಮಲ್ನಲ್ಲಿ 2008ರಲ್ಲಿ ಕೋಮು ಗಲಭೆ ವೇಳೆ ಕ್ರೈಸ್ತ ಸಂನ್ಯಾಸಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ತಪ್ಪಿತಸ್ಥರೆಂದು ಜಿಲ್ಲಾ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಇನ್ನುಳಿದ ಆರು ಜನರನ್ನು ನ್ಯಾಯಾಲಯ ಖುಲಾಸೆ ಮಾಡಿದೆ.

ಸೆಷನ್ಸ್ ನ್ಯಾಯಾಧೀಶರಾದ ಜ್ಞಾನ ರಂಜನ್ ಪುರೋಹಿತ್ ಅವರು ಪ್ರಮುಖ ಆರೋಪಿ ಮಿಟ್ಟು ಪಟ್ನಾಯಕ್್ ಅಲಿಯಾಸ್್ ಸಂತೋಷ್ ಪಟ್ನಾಯಕ್ಗೆ 11 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ₨ 10,000 ದಂಡ ವಿಧಿಸಿದ್ದಾರೆ. ಗಜೇಂದ್ರ ಡಿಗಲ್ ಹಾಗೂ ಸರೋಜ್ ಬಹ್ದೇಯಿಗೆ 26 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಪೊಲೀಸರು 24ಕ್ಕೂ ಹೆಚ್ಚು
ಜನರನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.