ಭಾನುವಾರ, ಜೂನ್ 13, 2021
20 °C

ಸಮಗ್ರ ಹಣದುಬ್ಬರ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತರಕಾರಿ ಮತ್ತು ಪ್ರೋಟಿನ್‌ಯುಕ್ತ  ಆಹಾರ ಪದಾರ್ಥಗಳ ಬೆಲೆಗಳು ಏರಿಕೆ ಕಂಡ ಹಿನ್ನೆಲೆಯಲ್ಲಿ, ಫೆಬ್ರುವರಿ ತಿಂಗಳಲ್ಲಿ ಸಮಗ್ರ ಹಣದುಬ್ಬರ ದರ ಶೇ 6.95ಕ್ಕೆ ಏರಿಕೆ ಕಂಡಿದೆ.

ಸಗಟು ಬೆಲೆ ಸೂಚ್ಯಂಕ ಆಧರಿಸಿದ (ಡಬ್ಲ್ಯುಪಿಐ) ಹಣದುಬ್ಬರ ದರ ಜನವರಿ ತಿಂಗಳಲ್ಲಿ ಶೇ 6.55ರಷ್ಟಿತ್ತು.

ಬುಧವಾರ ಸರ್ಕಾರ ಬಿಡುಗಡೆ ಮಾಡಿರುವ ಅಧಿಕೃತ ಅಂಶಗಳ ಪ್ರಕಾರ, ಫೆಬ್ರುವರಿ ತಿಂಗಳ ಆಹಾರ ಹಣದುಬ್ಬರ ದರ ಜನವರಿ ತಿಂಗಳ ಶೇ (-) 0.52ರಿಂದ ಶೇ 6.07ಕ್ಕೆ ಏರಿಕೆ ಕಂಡಿದೆ. ಕಳೆದ ವರ್ಷದ ಫೆಬ್ರುವರಿ ತಿಂಗಳಲ್ಲಿ ಒಟ್ಟಾರೆ ಹಣದುಬ್ಬರ ದರ ಶೇ 9.54ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಪ್ರಸಕ್ತ ಅವಧಿಯಲ್ಲಿ ಗಣನೀಯ ಇಳಿಕೆ ಕಂಡಿದೆ. ಆದರೆ, ಈ ಅವಧಿಯಲ್ಲಿ ಬೇಳೆಕಾಳು ಬೆಲೆಗಳು ಶೇ 7ರಷ್ಟು, ತರಕಾರಿ ಶೇ 1.50ರಷ್ಟು ಏರಿಕೆ ಕಂಡಿದೆ.

ಮೊಟ್ಟೆ, ಮೀನು, ಮಾಂಸ ಶೇ 20ರಷ್ಟು ತುಟ್ಟಿಯಾಗಿವೆ. ಫೆಬ್ರುವರಿ ತಿಂಗಳಲ್ಲಿ ಈರುಳ್ಳಿ ಮತ್ತು ಆಲೂಗಡ್ಡೆ ದರಗಳು ಮಾತ್ರ ಶೇ 2 ಮತ್ತು ಶೇ 48ರಷ್ಟು ಇಳಿಕೆ ಕಂಡಿವೆ. ಉಳಿದ ಪದಾರ್ಥಗಳು ತುಟ್ಟಿಯಾಗಿವೆ. ಪ್ರಾಥಮಿಕ ಸರಕುಗಳ ಹಣದುಬ್ಬರ ದರ ಫೆಬ್ರವರಿ ತಿಂಗಳಲ್ಲಿ ಶೇ 6.28ರಷ್ಟಾಗಿದೆ. ತೈಲ ಮತ್ತು ವಿದ್ಯುತ್ ವಲಯದ ಹಣದುಬ್ಬರ ದರ ಶೇ 13ರಷ್ಟು ಏರಿಕೆ ಕಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.