ಸೋಮವಾರ, ಮೇ 10, 2021
22 °C

ಸಮವಸ್ತ್ರ ಸದುಪಯೋಗ ಮಾಡಿಕೊಳ್ಳಲು ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಂದಗೋಳ : `ಮಕ್ಕಳು ಸಮಯದ ಅವಕಾಶವನ್ನು ತಪ್ಪಿಸಿಕೊಳ್ಳಬಾರದು. ಇಂದು ಬೋಧಿಸಿದ ಅಭ್ಯಾಸವನ್ನು ಇಂದೇ ಮಾಡಿ ಮುಗಿಸಬೇಕು. ನಾಳೆ ಮಾಡಿದರಾಯಿತು ಎಂದುಕೊಂಡು ಕೂಡಬಾರದು. ದಾನವಾಗಿ ನೀಡಿದ ಸಮವಸ್ತ್ರಗಳನ್ನು ಸದುಪಯೋಗ ಮಾಡಿಕೊಳ್ಳಬೇಕು' ಎಂದು ಧಾರವಾಡ ಡಯಟ್‌ನ ಹಿರಿಯ ಉಪನ್ಯಾಸಕಿ ಎ.ಎಚ್. ಹೂಗಾರ ಹೇಳಿದರು.ಪಟ್ಟಣದ ಗಾಂಧೀ ಹಿಂದಿ ವಿದ್ಯಾಪೀಠದ ಜಿ.ಎಸ್.ಪಿ.ಪಿ. ಸ್ಕೂಲಿನ ಮಕ್ಕಳಿಗೆ ಅಂಬಿಕಾ ಬಾಳಿಹಳ್ಳಿಮಠ ದಾನವಾಗಿ ನೀಡಿದ ಶಾಲಾ ಸಮವಸ್ತ್ರಗಳನ್ನು ವಿತರಿಸಿ ಮಾತನಾಡಿದ ಅವರು, `ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಮೂಡಿಸಿಕೊಳ್ಳಬೇಕು. ಪಾಲಕರು ಮತ್ತು ಶಿಕ್ಷಕರು ಅದಕ್ಕೆ ಸಹಕಾರ ನೀಡುವ ಅಗತ್ಯವಾಗಿದೆ' ಎಂದರು.ಕಲಘಟಗಿ ದೈಹಿಕ ಶಿಕ್ಷಣಾಧಿಕಾರಿ ಎಸ್.ಎಂ. ಮಾಕಣ್ಣವರ ಮಾತನಾಡಿ, `ಕೇವಲ ಶಾಲೆಯಲ್ಲಿ ಕಲಿಕೆಯ ವಾತಾವರಣ ಮೂಡಿದರೆ ಸಾಕಾಗದು. ಅದು ಸಮಾಜದಲ್ಲಿ ಮತ್ತು ಮನೆಯಲ್ಲಿಯೂ ಮೂಡಿ ಬರಬೇಕಾಗಿದೆ' ಎಂದರು.ಕಾರ್ಯಕ್ರಮದಲ್ಲಿ ದಾನಿ ಅಂಬಿಕಾ ಬಾಳಿಹಳ್ಳಿಮಠ, ಅಕ್ಕಮ್ಮೋ ಸುಣಗಾರ, ಬಿ.ಪಿ. ಅಂಗಡಿ, ಬಿ.ಎಚ್. ಚಲವಾದಿ, ಎ.ಬಿ.ಕುಂಬಾರ, ಎನ್.ಕೆ. ಗುಣಕಿ, ಎಸ್.ಎಸ್. ಬಂಡಗಾರ, ಮಹ್ಮದ್‌ರಫಿ ಹುಲಗೂರ, ನಾಗವೇಣಿ ಕಲಾಲ ಮತ್ತಿತರರು ಹಾಜರಿದ್ದರು.

ಮುಖ್ಯಾಧ್ಯಾಪಕ ಗುರುಸ್ವಾಮಿ ಬಾಳಿಹಳ್ಳಿಮಠ ಸ್ವಾಗತಿಸಿ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.