ಶುಕ್ರವಾರ, ಜೂನ್ 25, 2021
30 °C

ಸಮಿತಿಯ ಆಯ್ಕೆಯನ್ನು ಸರ್ಕಾರ ಪರಿಗಣಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಹಾಯಧನ ನೀಡುವ ಸಂಬಂಧ ಕನ್ನಡದ ಗುಣಾತ್ಮಕ ಚಲನಚಿತ್ರಗಳ ಸಬ್ಸಿಡಿ ಸಮಿತಿ ಆಯ್ಕೆ ಮಾಡಿರುವ ಚಿತ್ರಗಳನ್ನು ಸರ್ಕಾರ ಪರಿಗಣಿಸಬೇಕು ಎಂದು ಸಮಿತಿಯ ಅಧ್ಯಕ್ಷ, ಚಿತ್ರನಟ ಎಸ್. ಶಿವರಾಂ ಕೋರಿದರು.



ಚಲನಚಿತ್ರಗಳ ಆಯ್ಕೆ ವಿವಾದದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟನೆ ನೀಡಿದ ಅವರು, `ಸಮಿತಿಯು ಚಲನಚಿತ್ರಗಳನ್ನು ಪ್ರಾಮಾಣಿಕವಾಗಿ ಆಯ್ಕೆ ಮಾಡಿದೆ. ಸದಸ್ಯರೆಲ್ಲರೂ ಆಮಿಷಕ್ಕೆ ಒಳಗಾಗಿದ್ದಾರೆ ಎನ್ನುವುದು ಸರಿಯಲ್ಲ~ ಎಂದರು.



`ಸದಸ್ಯರಾದ ಸುರೇಶ್ ಮಂಗಳೂರು ಹಣ ಸ್ವೀಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.  ಅವರು ಕ್ಷಮಾಪಣಾ ಪತ್ರ ನೀಡಿದ್ದರೂ ಅದು ಸಮಾಧಾನ ತಂದಿಲ್ಲ. ಸದಸ್ಯರ ಗಮನಕ್ಕೆ ತಾರದೆ ಅವರು ನಿಯಮಗಳನ್ನು ಉಲ್ಲಂಘಿಸಿದ್ದಾರೆ~ ಎಂದರು. `ನಾನೂ ಹಣ ಸ್ವೀಕರಿಸಿದ್ದೇನೆ ಎಂದು ಕೆಲವರು ತೆರೆಮರೆಯಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ~ ಎಂದು ಬೇಸರ ವ್ಯಕ್ತಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.