ಬರದಿಂದ ಬಳಲಿದ ಜನರ ಬವಣೆಯನ್ನು ಆಲಿಸಲು ಬಣ ರಾಜಕೀಯ ಕಾರಣವಾಗಿ, ಅದು ಜಿದ್ದಿಗೆ ಬಿದ್ದವರಂತೆ ಎಲ್ಲ ಪಕ್ಷಗಳಲ್ಲಿಯೂ ಸಂಚಲನ ಮೂಡಿಸಿದೆ. ಇದೀಗ ನಾ ಮುಂದು ತಾ ಮುಂದು ಎಂದು ಆಳುವ -ಪ್ರತಿಪಕ್ಷಗಳ ನೇತಾರರು ಕೆಂಡದಂತಹ ಉರಿಬಿಸಿಲಿನಲ್ಲಿ ಒಳಗೊಳಗೇ ಕನಲುತ್ತ ಹಳ್ಳಿಗಳೆಡೆ ಕಾಲು ಹಾಕುತ್ತಿದ್ದಾರೆ.

ಮುಖ್ಯಮಂತ್ರಿಗಳೂ ಬರದ ಸಮೀಕ್ಷೆ ಮಾಡಲು ಸಮಯವಿಲ್ಲದಿದ್ದರೂ ಹಳ್ಳಿಗಳತ್ತ ಮುಖ ಮಾಡಿದ್ದಾರೆ. ಆದರೆ ಈ ಭೇಟಿಗಳು ಕೇವಲ ಕಾಟಾಚಾರಕ್ಕೆಂಬಂತೆ, ಒಂದು - ಎರಡು ನಿಮಿಷಗಳಲ್ಲಿ ನಡೆಯುತ್ತಿವೆ. ಇದರಿಂದ ಜನತೆ ನೀಡಿದ ತೆರಿಗೆ ಹಣ ಮಂತ್ರಿಮಹೋದಯರ ಪ್ರವಾಸ - ಪ್ರಯಾಣ ಭತ್ಯೆಗಳಿಗೆ ಸಲುತ್ತಿದೆ.

ಈ ಭತ್ಯೆಗಳು ಲಕ್ಷಗಳ ಮೊತ್ತವನ್ನು ದಾಟುತ್ತಿರುವುದು ಗಮನಾರ್ಹ. ಬರ ಸಮೀಕ್ಷೆಯೂ ಮಂತ್ರಿಗಳಿಗೆ ಲಾಭದಾಯಕವಾಗುತ್ತಿರುವುದರಿಂದ ವಿಡಿಯೋ ಸಂವಾದದ ಮೂಲಕವೇ ಬರ ಪರಿಹಾರ ಕಾಮಗಾರಿಗಳಿಗೆ ಮಾರ್ಗದರ್ಶನ ಮಾಡುವುದು ವಿಹಿತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.