ಶುಕ್ರವಾರ, ಮೇ 27, 2022
31 °C

ಸರ್ಕಾರದ ಮೇಲೆ ಮಠಗಳ ನಿಯಂತ್ರಣ ಅಪಾಯಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಬೆಂಗಳೂರು: `ಮಠ ಮಂದಿರಗಳು ಸರ್ಕಾರದ ಮೇಲೆ ನಿಯಂತ್ರಣ ಹೇರುವ ಮೂಲಕ ಪ್ರಜಾಪ್ರಭುತ್ವನ್ನು ಕಗ್ಗೊಲೆ ಮಾಡುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಮಾನತೆಯನ್ನು ಪ್ರತಿಪಾದಿಸಿದ ಅಂಬೇಡ್ಕರ್ ಅಂತಹವರ ವ್ಯಕ್ತಿತ್ವದವರು ರಾಜಕೀಯ ನಾಯಕರಾಗಬೇಕು~ ಎಂದು ಚಿಂತಕ ಜಿ.ಕೆ.ಗೋವಿಂದರಾವ್ ಅಭಿಪ್ರಾಯಪಟ್ಟರು.ಕೆಎಸ್‌ಟಿಡಿಸಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ನೌಕರರ ವೆಲ್‌ಫೇರ್ ಅಸೋಸಿಯೇಷನ್ ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಡಾ.ಬಿ.ಆರ್ . ಅಂಬೇಡ್ಕರ್ ಅವರ ಜಯಂತ್ಯುತ್ಸವದಲ್ಲಿ ಅವರು ಮಾತನಾಡಿದರು.`ಸ್ವಾತಂತ್ಯ ಮತ್ತು ಸಮಾನತೆಗಳ ಚಳವಳಿಗಳು ಹುಟ್ಟಿಕೊಂಡಾಗಲೇ ಅದಕ್ಕೆ ವಿರುದ್ದವಾಗಿ ಧರ್ಮ ಮತ್ತು ಶಿಸ್ತಿನ ಹೆಸರಿನಲ್ಲಿ ಆರ್‌ಎಸ್‌ಎಸ್ ರೂಪ ಪಡೆಯಿತು. ಇಂತಹ ಸಂಘಟನೆಗಳು ಸರ್ಕಾರವನ್ನು ಆಳುತ್ತಿರುವುರುವುದು ಪ್ರಜಾಪ್ರಭುತ್ವದ ಅಣಕ~ ಎಂದು ವ್ಯಂಗ್ಯವಾಡಿದರು.  `ಅಂಬೇಡ್ಕರ್ ಚಿಂತನೆಗಳಿಗೆ ಕೇವಲ ತತ್ವ ಸಿದ್ದಾಂತಗಳ ಚೌಕಟ್ಟು ಒದಗಿಸದೇ ಜನ ಜೀವನದ ಭಾಗವಾಗಬೇಕು. ಹಿಂದುಳಿದ ಜನಾಂಗದವರು ಯಾವುದೇ ಕೀಳರಿಮೆಯಿಲ್ಲದೇ ಮೀಸಲಾತಿಯನ್ನು ಪಡೆಯುವಂತಾಗಬೇಕು~ ಎಂದು ಆಶಿಸಿದರು.ಸಚಿವ ಎ.ನಾರಾಯಣಸ್ವಾಮಿ ಅವರು  ಮಾತನಾಡಿ, `ದಲಿತರಿಗೆ ಮೀಸಲಾತಿ ಸಮರ್ಪಕವಾಗಿ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ವಿಧಾನಸೌಧದಲ್ಲಿರುವ ಪ್ರಧಾನ ಕಾರ್ಯದರ್ಶಿಗಳಲ್ಲಿ ಎಷ್ಟು ಜನ ದಲಿತರಿದ್ದಾರೆ. ಕೈಗಾರಿಕೆ ಸ್ಥಾಪನೆ ಸೇರಿದಂತೆ ಎಲ್ಲ ಪ್ರಮುಖ ಸ್ಥಾನಗಳಿಗೆ ದಲಿತರು ಅವಕಾಶ ಪಡೆಯುತ್ತಿದ್ದಾರೆಯೇ?~ ಎಂದು ಪ್ರಶ್ನಿಸಿದರು.ವಿಧಾನ ಪರಿಷತ್ ಸದಸ್ಯ ಡಿ.ಎಸ್. ವೀರಯ್ಯ, ಕೆ.ಎಸ್.ಟಿ.ಡಿ.ಸಿ ವ್ಯವಸ್ಥಾಪಕ ನಿರ್ದೇಶಕ ಸಿ.ಡಿ.ದೇವಯ್ಯ, ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಜಿ.ಸತ್ಯವತಿ, ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಆಯುಕ್ತ ಕೆ.ಸಿ. ಶ್ರೀರಾಮಯ್ಯ ಇತರರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.