ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಕಾರಿ ಬ್ಯಾಂಕ್‌ಗಳ ಲೆಕ್ಕ ತಪಾಸಣಾ ವರದಿ ಬಹಿರಂಗಕ್ಕೆ ಸೂಚನೆ

Last Updated 3 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ದೇಶದ ಸಹಕಾರಿ ಬ್ಯಾಂಕ್‌ಗಳ ಲೆಕ್ಕ ತಪಾಸಣಾ ವರದಿಯ ವಿವರವನ್ನು ಸಾರ್ವಜನಿಕರಿಗೆ ಬಹಿರಂಗಗೊಳಿಸುವಂತೆ ಕೇಂದ್ರ ಮಾಹಿತಿ ಆಯೋಗವು ಭಾರತೀಯ ರಿಸರ್ವ್ ಬ್ಯಾಂಕ್‌ಗೆ  ನಿರ್ದೇಶನ ನೀಡಿದೆ.

ಗುಜರಾತಿನ ಜಯಂತಿಲಾಲ್ ಮಿಸ್ತ್ರಿ ಎಂಬುವವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಆಯೋಗದ ಆಯುಕ್ತ ಶೈಲೇಶ್ ಗಾಂಧಿ, ಇದು ಗೋಪ್ಯ ಮಾಹಿತಿಯಾದರೂ ಸಾರ್ವಜನಿಕರ ಹಿತಾಸಕ್ತಿಯ ದೃಷ್ಟಿಯಿಂದ ಬಹಿರಂಗಗೊಳಿಸಬೇಕು, ಸಹಕಾರಿ ಬ್ಯಾಂಕ್‌ಗಳ ಲೆಕ್ಕ ತಪಾಸಣಾ ವರದಿಯ ಪ್ರತಿಗಳನ್ನು ನ. 30ರ ಒಳಗಾಗಿ ಅರ್ಜಿದಾರರಿಗೆ ನೀಡಬೇಕು ಎಂದು ಆದೇಶಿಸಿದರು.

ಲೆಕ್ಕ ತಪಾಸಣಾ ವರದಿ ಬಹಿರೊಂಗಗೊಳಿಸುವುದರಿಂದ ಕೆಲವು ಬ್ಯಾಂಕುಗಳ ವಿಶ್ವಾಸಾರ್ಹತೆಗೆ ಧಕ್ಕೆಯಾಗುತ್ತದೆ. ಅಲ್ಲದೆ, ರಾಜ್ಯಗಳ ಆರ್ಥಿಕ ವ್ಯವಸ್ಥೆಗೆ ಮಾರಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಮೇಲಾಗಿ ಇದು ರಹಸ್ಯ ಮಾಹಿತಿಯಾದ್ದರಿಂದ ಬಹಿರಂಗಪಡಿಸಲಾಗದು ಎಂದು ರಿಸರ್ವ್ ಬ್ಯಾಂಕ್ ವಾದಿಸಿತ್ತು. ಆದರೆ, ಆಯೋಗ, ಈ ವಾದವನ್ನು ತಳ್ಳಿಹಾಕಿದೆ.

ವರದಿ ಬಹಿರಂಗದಿಂದ ರಾಜ್ಯಗಳ ಆರ್ಥಿಕ ವ್ಯವಸ್ಥೆಗೆ ಪೆಟ್ಟಾಗುವ ಸಾಧ್ಯತೆ ಇದ್ದ ಕಾರಣ ಈ ಕುರಿತು ನಿರ್ಣಯ ತೆಗೆದುಕೊಳ್ಳುವ ಅಧಿಕಾರವನ್ನು ಆಯೋಗದ ಪೂರ್ಣಪೀಠ ಬ್ಯಾಂಕ್‌ನ ಆಡಳಿತ ಮಂಡಳಿಗೆ ನೀಡಿತ್ತು ಎಂಬ ವಿಷಯವನ್ನು ರಿಸರ್ವ್ ಬ್ಯಾಂಕ್ ಈ ಸಂದರ್ಭದಲ್ಲಿ ಆಯೋಗದ ಗಮನಕ್ಕೆ ತಂದಿತು.

ಪೂರ್ಣಪೀಠದ ಈ ನಿರ್ಧಾರ `ಮಾದರಿ ಅಥವಾ ಕಡ್ಡಾಯ ನಿಬಂಧನೆಯಲ್ಲ~ ಎಂದು ಗಾಂಧಿ ಸ್ಪಷ್ಟಪಡಿಸಿದರು. ಸಾರ್ವಜನಿಕರ ನೂರಾರು ಕೋಟಿ ಹಣ ಸಹಕಾರಿ ಬ್ಯಾಂಕ್‌ಗಳಲ್ಲಿರುವ ಕಾರಣ ಅವರಿಗೆ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿಗತಿಯನ್ನು ತಿಳಿದುಕೊಳ್ಳುವ ಸಂಪೂರ್ಣ ಹಕ್ಕು ಇದೆ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT