ಶನಿವಾರ, ಮೇ 21, 2022
25 °C

ಸಹಕಾರ ಕಾಯ್ದೆ:ತಿದ್ದುಪಡಿಗೆ ಹೈಕೋರ್ಟ್ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಸಹಕಾರ ಸಂಘಗಳು ಲೆಕ್ಕ ಪರಿಶೋಧನೆಯನ್ನು ಇಲಾಖೆ ಸೂಚಿತ ಲೆಕ್ಕಪರಿಶೋಧಕರಿಂದಲೇ ನಡೆಸಬೇಕು ಎನ್ನುವ ಕುರಿತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆಯ ತಿದ್ದುಪಡಿ ಕಲಂ 63(1)ನ್ನು ಇಲ್ಲಿನ ಹೈಕೋರ್ಟ್ ಸಂಚಾರಿ ಪೀಠ ತಳ್ಳಿಹಾಕಿ ಶುಕ್ರವಾರ ಆದೇಶ ಹೊರಡಿಸಿದೆ.ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ-1959ಕ್ಕೆ ಸರ್ಕಾರ 2013ರ ಫೆಬ್ರುವರಿ 11ರಂದು ತಿದ್ದುಪಡಿ ತಂದಿತ್ತು. ತಿದ್ದುಪಡಿ ನಿಯಮ 63 (1)ರಡಿ ಸಹಕಾರ ಸಂಘಗಳು  ಪ್ರತಿ ವರ್ಷ ಲೆಕ್ಕ ಪರಿಶೋಧನೆಯನ್ನು ಸರ್ಕಾರ ಸೂಚಿಸುವ 10 ಲೆಕ್ಕಪರಿಶೋಧಕರ ಪೈಕಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶವಿತ್ತು.ಇದನ್ನು ಪ್ರಶ್ನಿಸಿ ಸುಮಾರು 46 ಸಹಕಾರ ಸಂಘಗಳು ಹೈಕೋರ್ಟ್ ಸಂಚಾರಿ ಪೀಠದಲ್ಲಿ ಪ್ರತ್ಯೇಕ ರಿಟ್ ಅರ್ಜಿ ದಾಖಲಿಸಿದ್ದವು.  ಈ ತಿದ್ದುಪಡಿ ಸಾರ್ವಜನಿಕ ಹಿತದೃಷ್ಟಿಯಿಂದಲೇ ಜಾರಿಗೊಳಿಸಲಾಗಿದೆ. ಅಲ್ಲದೇ, ಈ ಕುರಿತು ನಿಯಮಾವಳಿ ರೂಪಿಸಲಾಗಿದೆ ಎಂದು ಸರ್ಕಾರಿ ವಕೀಲರು ವಾದಿಸಿದರು.ಇಂಥ ತಿದ್ದುಪಡಿ ತರಲು ಕಾನೂನಿನಲ್ಲಿ ಅವಕಾಶವಿಲ್ಲ. ಅಲ್ಲದೇ, ನಿಯಮ 63 (1), ಸಂವಿಧಾನದ ಅನುಚ್ಛೇದ 243 (2)ಕ್ಕೆ ವಿರುದ್ಧವಾಗಿದೆ. ಸಹಕಾರಿ ಸಂಘಕ್ಕೆ 10 ಜನ ಲೆಕ್ಕ ಪರಿಶೋಧಕರನ್ನು ಸೂಚಿಸಿರುವುದು ಸರಿಯಾದ ಕ್ರಮವಲ್ಲ ಎಂದು ಅಭಿಪ್ರಾಯಪಟ್ಟ ನ್ಯಾಯಮೂರ್ತಿ ಎಚ್.ಜಿ.ರಮೇಶ ಅವರಿದ್ದ ಏಕಸದಸ್ಯಪೀಠ ತಳ್ಳಿಹಾಕಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.