ಸೋಮವಾರ, ಏಪ್ರಿಲ್ 19, 2021
28 °C

ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಗೇರಿ: ಪಟ್ಟೆಗಾರಪಾಳ್ಯದ ಬಿ.ಡಿ.ಎ. ಲೇಔಟ್ ಅರಳಿ ಮರದ ರಸ್ತೆಯಲ್ಲಿ ನಡೆದ ಕಾವೇರಿಪುರ ವಾರ್ಡ್ ಮಟ್ಟದ ನಾಡಪ್ರಭು ಕೆಂಪೇಗೌಡ ದಿನಾಚರಣೆ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರಿಗೆ ಕೆಂಪೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪಾಲಿಕೆ ಸದಸ್ಯ ಆರ್.ಪ್ರಕಾಶ್ ಮಾತನಾಡಿ, ಕೆಂಪೇಗೌಡ ಪ್ರಶಸ್ತಿ ಆರಂಭಿಸದಿದ್ದರೆ ವಾರ್ಡ್‌ನಲ್ಲಿ ಇರುವ ಸಾಧಕರನ್ನು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಮೂಲಕ ಸಾಧನೆಗೈದ ಗಣ್ಯರನ್ನು ಗುರುತಿಸಿ ಅಭಿನಂದಿಸುವುದರಿಂದ ಪಾಲಿಕೆ ಸದಸ್ಯರ ಗೌರವವೂ ಹೆಚ್ಚಿದಂತಾಗುತ್ತದೆ ಎಂದರು.ಯು.ಎಸ್.ಕೃಷ್ಣಮೂರ್ತಿ, ಆರ್. ಅಶ್ವತ್ಥನಾರಾಯಣ, ಎಚ್.ಸಿ. ಸಿಂಗ್ರಯ್ಯ, ಎಚ್.ನರಸೇಗೌಡ, ಬಿ.ಸಿ. ಸೀನಯ್ಯ, ಡಾ.ವೆಂಕಟಾಚಲಪತಿ, ಕೆ. ಎಚ್.ಕುಮಾರ್, ವಿ.ಎಂ.ಆರ‌್ಮುಗಂ, ಸೌಭಾಗ್ಯವತಿ, ವರದರಾಜು, ಎನ್. ನಾರಾಯಣ್, ರಂಗಸ್ವಾಮಯ್ಯ, ವಿ. ಕೃಷ್ಣಮೂರ್ತಿ, ಬಿ.ಕೆ.ಶಿವಕುಮಾರ್, ಎಚ್.ರವಿಕೃಷ್ಣ, ರಂಗಮ್ಮ ಬಸವರಾಜು, ಪುಟ್ಟಸ್ವಾಮಿಗೌಡ, ಡಾ.ಬಿ. ಶ್ರೀಕಾಂತಶೆಟ್ಟಿ, ತಿಮ್ಮಪ್ಪ, ಬಿ.ಪರಮೇಶ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಪಾಲಿಕೆ ಸದಸ್ಯರ ವೈಯಕ್ತಿಕ ಹಣದಿಂದ ನೂರು ಬಡ ಮಹಿಳೆಯರಿಗೆ ಹೊಲಿಗೆ ಯಂತ್ರ, ಆಟೋ ಚಾಲಕರಿಗೆ ಆರೋಗ್ಯ ವಿಮಾ ಕಾರ್ಡ್, ಬಡವರಿಗೆ ತಳ್ಳುವ ಗಾಡಿ, ವೈದ್ಯಕೀಯ ವೆಚ್ಚದ ಚೆಕ್, ಶೃಂಗಾರ ತರಬೇತಿಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಉಚಿತ ಮೇಕಪ್ ಕಿಟ್‌ಗಳನ್ನು ವಿತರಿಸಲಾಯಿತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.