ಶನಿವಾರ, ಜನವರಿ 18, 2020
20 °C
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕೇಂದ್ರ ಸ್ಪಷ್ಟನೆ

ಸಾಲ ಮನ್ನಾ ಸಾಧ್ಯವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ದ್ರಾಕ್ಷಿ ಮತ್ತು ದಾಳಿಂಬೆ ಸೇರಿದಂತೆ ತೋಟಗಾರಿಕೆ ಬೆಳೆಗಳ ಸಾಲ ಮನ್ನಾ  ಸಾಧ್ಯವಿಲ್ಲ ಆದರೆ, ಬಡ್ಡಿ ಮನ್ನಾ ಮಾಡಲು ಪ್ರಯತ್ನಿ­ಸ­ಲಾಗುವುದು ಎಂದು ಕೇಂದ್ರ ಸರ್ಕಾರ ಶನಿವಾರ ಖಡಾಖಂಡಿತವಾಗಿ ಹೇಳಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಹಣ­ಕಾಸು ಸಚಿವ ಪಿ. ಚಿದಂಬರಂ ಅವರನ್ನು ಭೇಟಿ ಮಾಡಿ ದ್ರಾಕ್ಷಿ ಮತ್ತು ದಾಳಿಂಬೆ ಬೆಳೆ ಮೇಲಿನ ಸಾಲ ಮನ್ನಾ ಮಾಡು­ವಂತೆ ಮನವಿ ಮಾಡಿದ ಸಮಯದಲ್ಲಿ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ.ತೋಟಗಾರಿಕೆ ಬೆಳೆಗಳ ಮೇಲಿನ ಸಾಲ ಮನ್ನಾ ಸಾಧ್ಯವಿಲ್ಲ. ಬಡ್ಡಿ ಮನ್ನಾ ಕುರಿತು ಪರಿಶೀಲಿಸಲಾಗುವುದು. ಆರ್‌ಬಿಐ ಮಾರ್ಗಸೂಚಿ ಚೌಕಟ್ಟಿ­-ನೊಳಗೆ ರೈತರ ಸಾಲ ಮರು ಹೊಂದಾ­ಣಿಕೆ ಮಾಡುವ ಬಗ್ಗೆ ಚಿಂತಿಸಬಹುದು ಎಂದು ಚಿದಂಬರಂ  ತಿಳಿಸಿದರು.ಅಸಲು ಮತ್ತು ಬಡ್ಡಿ ಸೇರಿ ದ್ರಾಕ್ಷಿ ಮೇಲೆ ₨700 ಕೋಟಿ, ದಾಳಿಂಬೆ ಮೇಲೆ ₨170 ಕೋಟಿ ಸಾಲವನ್ನು ರೈತರು ಪಾವತಿ­ಸ­ಬೇಕಾಗಿದೆ.ಇದಲ್ಲದೆ, ಕೊಳೆ ರೋಗದಿಂದ ನಾಶವಾಗಿರುವ ಅಡಿಕೆಗೆ ₨500 ಕೋಟಿ ಹಾಗೂ ನುಸಿ ರೋಗದಿಂದ ಹಾಳಾಗಿರುವ ತೆಂಗಿಗೆ ₨580 ಕೋಟಿ ರೂಪಾಯಿ ನೆರವು ನೀಡುವಂತೆ ಕೃಷಿ ಸಚಿವ ಶರದ್‌ ಪವಾರ್‌ ಅವರಿಗೂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.ರಾಜ್ಯದ ಮನವಿಯನ್ನು ಪರಿಶೀಲಿಸಿ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಪವಾರ್‌ ಮುಖ್ಯಮಂತ್ರಿಗೆ ಭರವಸೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)