ಸುಮಧುರ ಸಂಗೀತಕ್ಕೆ ಅರೆಕ್ಷಣವಾದರೂ ಕಿವಿಗೊಡದವರು ಇರಲಾರರು. ಅದರ ಮಾಧುರ್ಯವೇ ಹಾಗೆ. `ಮೈ ಫೇರ್ ಲೇಡಿ~, `ವೆಸ್ಟ್ ಸೈಡ್ ಸ್ಟೋರಿ~ ಮತ್ತು `ಮೇರಿ ಪಾಪಿನ್ಸ್~ನಂತಹ ಪಾಶ್ಚಾತ್ಯ ಸಂಗೀತಕ್ಕೆ ಮಾರುಹೋದವರಿಗೆ ಭಾರತೀಯ ಸಂಗೀತದ ಕಂಪಿನೊಂದಿಗೆ ನಗರದ ರಂಗಶಂಕರದಲ್ಲಿ ನಾಟಕದ ಸವಿ ಉಣಿಸಿದೆ ಶುಭಾ ಮುದಗಲ್-ಅನಿಶ್ ಪ್ರಧಾನ್ ಜೋಡಿ.

`ಸ್ಟೋರೀಸ್ ಇನ್ ಎ ಸಾಂಗ್~ ನಾಟಕದಲ್ಲಿ ಹಾಸ್ಯದಿಂದ ಕೂಡಿದ ಸುಮಧುರ ಸಂಗೀತದ ಸುಧೆಯಿದೆ. ಇದರ ಹಿಂದೆ ಈ ದಂಪತಿಯ ಶ್ರಮವೂ ಸೇರಿದೆ. ಕೇವಲ ಪಾಶ್ಚಾತ್ಯ ಸಂಗೀತಕ್ಕೆ ಇಂಬುಗೊಡದೆ ಭಾರತೀಯ ಸಂಗೀತದ ಮಾಧುರ್ಯವನ್ನು ಈ ಜೋಡಿ ಹಾಡಿಹೊಗಳಿದ್ದಾರೆ.

ನಿರ್ದೇಶಕ ಸುನೀಲ್ ಶಾನ್ಭಾಗ್ ಜೊತೆಗೆ ಸೇರಿ ಇವರು ಸಂಯೋಜನೆ ಮಾಡಿದ `ಸ್ಟೋರೀಸ್ ಇನ್ ಎ ಸಾಂಗ್~ ಗೀತನಾಟಕ ರಂಗಶಂಕರದಲ್ಲಿ ಪ್ರದರ್ಶನಗೊಂಡಿದೆ. ಸಂಗೀತಕ್ಕೆ ತಕ್ಕಂತೆ ಗಾಯಕರನ್ನು ಹುಡುಕುವುದೇ ದೊಡ್ಡ ಸವಾಲಾಗಿತ್ತು. ನಮ್ಮ ಈ ಸಾಹಿತ್ಯದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಲು ಸಹ ಸಮಯವಿರಲಿಲ್ಲ ಎಂದು ಅನಿಶ್ ಹೇಳುತ್ತಾರೆ.

ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಮುಂದೆ ಇದ್ದಾಳೆ. ಮಹಿಳೆ-ಪುರುಷ ಎನ್ನುವ ಭೇದವಿಲ್ಲ. ಸಂಗೀತ ಸಂಯೋಜನೆಯಲ್ಲೂ ಮಹಿಳೆಯೂ ಪುರಷನಿಗಿಂತ ಕಡಿಮೆ ಇಲ್ಲ ಎಂಬ ಶುಭಾ ಮಾತಿಗೆ ಅವರ ಪತಿಯ ನಗುವಿನ ಸಮರ್ಥನೆಯೂ ಸಿಗುತ್ತದೆ.

ಸದ್ಯಕ್ಕೆ ಚಲನಚಿತ್ರಗಳಿಗೆ ಸಂಗೀತ ಸಂಯೋಜನೆ ಮಾಡುವ ಯಾವುದೇ ಯೋಚನೆ ಇಲ್ಲ ಎನ್ನುವ ಶುಭಾ ಬಾಲಿವುಡ್ನಲ್ಲಿ ತಾವೂ ಯಾಕೆ ಹಾಡಬಾರದು ಎಂದು ತುಂಬಾ ಸಲ ಪ್ರಶ್ನಿಸಿಕೊಂಡ್ದ್ದಿದಿದೆ. ಆದರೆ `ಸೈಜ್ ಜಿರೋ ಹುಡುಗಿಯರಿಗೆ ನನ್ನ ದನಿ ಸರಿಹೊಂದುವುದಿಲ್ಲ~ ಎಂಬುದು ಅವರ ಪ್ರಾಮಾಣಿಕ ನುಡಿ.

`ರಜಾದಿನಗಳಲ್ಲಿ ನಮಗೆ ಬೆಂಗಳೂರಿಗೆ ಬರುವುದೆಂದರೆ ತುಂಬಾ ಇಷ್ಟ. ಇಲ್ಲಿರುವ ಹಸಿರು ಮರಗಳೆಂದರೆ ನಮಗೆ ತುಂಬಾ ಪ್ರೀತಿ. ಆದರೆ ದುರುದೃಷ್ಟವಶಾತ್ ನಾವು ಇಲ್ಲಿ ಬಂದಾಗಲೆಲ್ಲಾ ಮರಗಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ~ ಎಂದು ಗಾರ್ಡನ್ ಸಿಟಿ ಕಾಂಕ್ರಿಟ್ ಸಿಟಿ ಆಗಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.