ಶನಿವಾರ, ಜೂನ್ 19, 2021
23 °C

ಸಿಗದ ಭರವಸೆ;ಕುಸಿದ ಆಶಾಗೋಪುರ

ಪ್ರಜಾವಾಣಿ ವಾರ್ತೆ ರಾಹುಲ ಬೆಳಗಲಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಬದುಕುವ ಚೈತನ್ಯ ವನ್ನೇ ಕಸಿದುಕೊಂಡಿರುವ ಬರಗಾ ಲದಿಂದ ಈಗಾಗಲೇ ಕಂಗೆಟ್ಟಿರುವ ಜಿಲ್ಲೆ ಯ ಜನರು ಬುಧವಾರ ಮತ್ತೊಮ್ಮೆ ಬರಸಿಡಿಲು ಎದುರಿಸುವಂತಾಯಿತು.  ಕಳೆದ ವರ್ಷದ ರೈಲ್ವೆ ಬಜೆಟ್‌ನಿಂದ ಭಾರಿ ನಿರಾಸೆಗೊಳಗಾಗಿದ್ದ ಜನರು ಬುಧವಾರ ಮತ್ತೆ ಅಂಥದ್ದೇ ಸ್ಥಿತಿಯನ್ನು ಅನುಭವಿಸಬೇಕಾಯಿತು.  ಭಾರಿ ಮಳೆ ಯಾಗದಿದ್ದರೂ ಚಿಂತೆ ಯಿಲ್ಲ, ತುಂತುರು ಮಳೆಯಾದರೂ ಖಂಡಿತ ಆಗುತ್ತದೆ ಎಂಬ ಆಶಾಭಾವನೆ ಇಟ್ಟುಕೊಂಡ ಜನರಿಗೆ ಒಂದೇ ಒಂದು ಮಳೆಹನಿಯ ದರ್ಶನ ಆಗಲಿಲ್ಲ !ಕಳೆದ ವರ್ಷ ರೈಲ್ವೆ ಬಜೆಟ್ ಮಂಡನೆ ಮಾಡುವ ಸಂದರ್ಭದಲ್ಲಿ ನಗರಕ್ಕೆ ಭೇಟಿ ನೀಡಿದ್ದ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ, `ಜಿಲ್ಲೆಯ ಜನರಿಗೆ ಸಿಹಿ ಸುದ್ದಿ ಕಾದಿದೆ.  ಸದ್ಯಕ್ಕೆ ಏನನ್ನೂ ಹೇಳುವುದಿಲ್ಲ~ ಎಂದು ಹೇಳಿ ಕುತೂಹಲ ಮೂಡಿಸಿದ್ದರು. ಆದರೆ ಸಿಹಿ ಸವಿಯುವ ಅಥವಾ ಹಂಚುವ ಅವ ಕಾಶವೇ ಜನರಿಗೆ ಒದಗಿ ಬರಲಿಲ್ಲ.ಕಳೆದ ಅಕ್ಟೋಬರ್ ಭೇಟಿ ನೀಡಿದಾಗಲೂ ಇದೇ ರೀತಿಯ ಆಶಾಭಾವನೆ ಮೂಡಿಸಿದ್ದರು. ಆದರೆ ಈ ಸಲವೂ ಸಿಹಿ ಖರೀದಿಸುವಂತಹ ಪ್ರಸಂಗ ಬರಲಿಲ್ಲ.ಕಾರಣ: ಕೇಂದ್ರ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಅವರು ಮಂಡಿಸಿದ ರೈಲ್ವೆ ಬಜೆಟ್‌ನಲ್ಲಿ ಚಿಕ್ಕಬಳ್ಳಾಪುರದ ಹೆಸರು ಹೆಚ್ಚು ಪ್ರಸ್ತಾಪವಾಗಲಿಲ್ಲ. ಕೋಲಾರಕ್ಕೆ ಕೋಚ್ ಕಾರ್ಖಾನೆ ಸ್ಥಾಪಿ ಸುವುದು ಹೊರತುಪಡಿಸಿದರೆ, ಜಿಲ್ಲೆಗೆ ಹೆಚ್ಚಿನ ಕೊಡುಗೆ ದೊರೆತಿಲ್ಲ ಎಂಬ ಬೇಸರ ಜನರಲ್ಲಿ ಮೂಡಿದೆ.`ಕೇಂದ್ರ ಸರ್ಕಾರದಲ್ಲಿ ನಮ್ಮ ಜಿಲ್ಲೆಗಳನ್ನು ಮತ್ತು ಕ್ಷೇತ್ರಗಳನ್ನು ಪ್ರತಿ ನಿಧಿಸುವ ಸಚಿವರಿದ್ದರೂ ಏನೂ ಪ್ರಯೋಜ ನವಾಗಲಿಲ್ಲ~ ಎಂದು ಜನರು ವಿಷಾದ ವ್ಯಕ್ತ ಪಡಿಸುತ್ತಾರೆ.ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ನಡುವೆ ಹೆಚ್ಚುವರಿ ರೈಲು ಸೌಲಭ್ಯ ಕಲ್ಪಿಸಲಾಗುವುದು, ನಗರದ ರೈಲ್ವೆ ನಿಲ್ದಾಣವನ್ನು ಮೇಲ್ದರ್ಜೆಗೇರಿಸ ಲಾಗು ವುದು, ನಿಲ್ದಾಣಕ್ಕೆ ಬೃಹತ್ ಜಂಕ್ಷನ್ ಸ್ವರೂಪ ನೀಡಲಾಗುವುದು, ಪ್ರಯಾ ಣಿಕರ ಅನುಕೂಲಕ್ಕಾಗಿ ಇನ್ನಷ್ಟು ರೈಲು ಸಂಪರ್ಕ ಕಲ್ಪಿಸಲಾಗುವುದು ಎಂದೆಲ್ಲ ಸಚಿವ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದ್ದರು.ಆದರೆ ಬುಧವಾರ ಮಂಡನೆಯಾದ ಬಜೆಟ್‌ನಲ್ಲಿ ಇದ್ಯಾ ವುದೇ ವಿಷಯಗಳು ಪ್ರಸ್ತಾಪ ವಾಗದಿರುವುದು ಜನರಲ್ಲಿ ಖೇದದ ಜೊತೆಗೆ ಅಚ್ಚರಿಯೂ ಮೂಡಿಸಿದೆ.`ಕೇಂದ್ರ ರಾಜ್ಯ ಸಚಿವ ಕೆ.ಎಚ್.ಮುನಿ ಯಪ್ಪ ಅವರು ಕೋಲಾರಕ್ಕೆ ಮಾತ್ರವೇ ಸೀಮಿತಗೊಂಡಿದ್ದಾರೆ ಹೊರತು ನೆರೆಯ ಲೋಕಸಭಾ ಕ್ಷೇತ್ರವಾದ ಚಿಕ್ಕ ಬಳ್ಳಾಪುರದ ಬಗ್ಗೆ ಹೆಚ್ಚಿನ ಕಾಳಜಿ ತೋರಿಲ್ಲ.ಕೇಂದ್ರ ಸರ್ಕಾರದ ಮತ್ತೊಬ್ಬ ಸಚಿವ ವೀರಪ್ಪ ಮೊಯಿಲಿ ಅವರು ಕೂಡ ನಮ್ಮ ಜಿಲ್ಲೆಗೆ ಸಿಹಿ ಸುದ್ದಿ ತಂದು ಕೊಡುವಲ್ಲಿ ವಿಫಲರಾಗಿದ್ದಾರೆ. ನಾವು ಹೆಮ್ಮೆಪಡುವ ಸಚಿವರು ನಮ್ಮನ್ನು ನಿರಾಸೆಗೊಳಿಸಿದ್ದಾರೆ~ ಎಂದು ಉದ್ಯಮಿ ಸೀತಾರಾಮ `ಪ್ರಜಾವಾಣಿ~ಗೆ ತಿಳಿಸಿದರು.`ಚಿಕ್ಕಬಳ್ಳಾಪುರಕ್ಕೆ ಬಂದಾಗಲೆಲ್ಲ ಭಾರಿ ಭರವಸೆಯನ್ನು ಹರಿಬಿಡುವ ಸಚಿವರು ಜನರ ಮನಸ್ಸಿನಲ್ಲಿ ಆಶಾ ಗೋಪುರವನ್ನೇ ನಿರ್ಮಿಸುತ್ತಾರೆ ಆದರೆ.ಭಾರಿ ಸ್ವರೂಪದ ಬದಲಾವಣೆ ಯನ್ನು ನಿರೀಕ್ಷಿಸಿ ಎನ್ನುತ್ತಾರೆ. ಆದರೆ ಕೊನೆಗೆ ಅನಿರೀಕ್ಷಿತ ಬೆಳವಣಿಗೆ ಮತ್ತು ಆಘಾ ತಕ್ಕೆ ಒಳಗಾಗುವಂತೆ ಮಾಡು ತ್ತಾರೆ ಇದು ನಿಲ್ಲಬೇಕಾಗಿದೆ.ನಾಯಕತ್ವದ ಕೊರತೆ, ನಿರಾಸಕ್ತಿ, ನಿರ್ಲಕ್ಷ್ಯ ಮುಂತಾದವುಗಳಿಂದ ಈಗಾ ಗಲೇ ಹಿಂದುಳಿದ ಪ್ರದೇಶವೆಂದು ಪರಿಗಣಿಸಲ್ಪಟ್ಟಿರುವ ಜಿಲ್ಲೆಯು ಇನ್ನಷ್ಟು ಹಿನ್ನಡೆ ಅನುಭವಿಸಲಿದೆ~ ಎಂದು ಅವರು ತಿಳಿಸಿದರು.

ನಿರಾಸೆಯಲ್ಲೇ ಕೊಂಚ ಸಮಾಧಾನ

ನಿರಾಸೆಯ ನಡುವೆ ರೈಲ್ವೆ ಬಜೆಟ್ ಜಿಲ್ಲೆಯ ಜನರಿಗೆ ಕೊಂಚ ಸಮಾಧಾನ ತಂದಿದೆ. ಬಹುದಿನಗಳ ಬೇಡಿಕೆಯಾಗಿರುವ ಚಿಕ್ಕಬಳ್ಳಾಪುರ ಮತ್ತು ಪುಟ್ಟಪರ್ತಿ ರೈಲು ಮಾರ್ಗಕ್ಕೆ ಆದ್ಯತೆ ನೀಡಲಾಗಿದೆ. ಬುಧವಾರ ರೈಲ್ವೆ ಬಜೆಟ್ ಮಂಡನೆ ಮಾಡಿದ ಕೇಂದ್ರ ರೈಲ್ವೆ ಸಚಿವರು, ದಿನೇಶ್ ತ್ರಿವೇದಿ, `ರಾಜ್ಯ ಸರ್ಕಾರದ ಸಹಯೋಗದಲ್ಲಿ ಚಿಕ್ಕಬಳ್ಳಾಪುರ ಮತ್ತು ಪುಟ್ಟಪರ್ತಿ ರೈಲು ಮಾರ್ಗ ಯೋಜನೆ ರೂಪಿಸಲಾಗುವುದು ಎಂದಿದ್ದಾರೆ.

ಯೋಜನೆ ಅನುಷ್ಠಾನ ಕಷ್ಟಸಾಧ್ಯ

ರೈಲು ಮಾರ್ಗ ಯೋಜನೆ ಅನುಷ್ಠಾನ ಗೊಳಿಸುವುದಕ್ಕೆ ಸಂಬಂಧಿಸಿದಂತೆ ಯೋಜನಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ. ಆಯೋಗದಿಂದ ಹಸಿರು ನಿಶಾನೆ ದೊರೆತು ಯೋಜನಾ ಕಾಮಗಾರಿ ಆರಂಭವಾಗುವ ವೇಳೆಗೆ ಒಂದು ವರ್ಷ ಕಳೆಯುತ್ತದೆ. ಹಣ ಬಿಡುಗಡೆಯಾಗುವ ವೇಳೆಗೆ ಮತ್ತೊಂದು ವರ್ಷ ಕಳೆದುಹೋಗುತ್ತದೆ. ಯಥಾರೀತಿ ಭರವಸೆ ನೀಡಲಾಗುತ್ತದೆ ಹೊರತು ಯಾವುದೂ ಸಹ ಅನುಷ್ಠಾನಕ್ಕೆ ಬರುವುದಿಲ್ಲ.

-ಎಂ.ಪಿ.ಮುನಿವೆಂಕಟಪ್ಪ, ಡಿವೈಎಫ್‌ಐ ಮುಖಂಡಪ್ರಯಾಣ ದರ ಏರಿಕೆಯಿಂದ ಹೊರೆ

ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ನೆರೆಯ ಕ್ಷೇತ್ರವಾದ ಚಿಕ್ಕಬಳ್ಳಾಪುರ ಬಗ್ಗೆ ಕಾಳಜಿ ಇದ್ದಿದ್ದರೆ, ಇನ್ನಷ್ಟು ಯೋಜನೆಗಳನ್ನು ತರುತ್ತಿದ್ದರು. ಆದರೆ ಈವರೆಗೆ ನೀಡಲಾಗಿರುವ ಭರವಸೆಗಳಲ್ಲಿ ಕೆಲವು ಇದುವರೆಗೆ ಈಡೇರಿಲ್ಲ. ಪ್ರಯಾಣ ದರ ಏರಿಕೆ ಮಾಡಿರುವುದು ಸರಿಯಲ್ಲ.

-ಬಿ.ಎನ್.ಮುನಿಕೃಷ್ಣಪ್ಪ, ರೈತ ಮುಖಂಡನಿರೀಕ್ಷಿತ ಕೊಡುಗೆ ದೊರೆತಿಲ್ಲ

ಹಿಂದುಳಿದ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಗತಿಪಥದಲ್ಲಿ ಮುನ್ನಡೆಸಲು ಉಪ ಯುಕ್ತ ಮತ್ತು ಶಾಶ್ವತವಾದ ರೈಲ್ವೆ ಯೋಜನೆಯೊಂದು ಅನುಷ್ಠಾನ ಗೊಳ್ಳಬೇಕಿತ್ತು. ಜಿಲ್ಲೆಯ ಅಭಿವೃದ್ಧಿಗೆ ಅದು ಪೂರಕವಾಗಬೇಕಿತ್ತು. ಭಾರಿ ನಿರೀಕ್ಷೆಯನ್ನೇ ಇಟ್ಟುಕೊಂಡ ಜನರಿಗೆ ಬಜೆಟ್ ಬೇಸರ ಮೂಡಿಸಿದೆ. ಕೇಂದ್ರ ಸಚಿವರಾದ ಕೆ.ಎಚ್.ಮುನಿಯಪ್ಪ ಮತ್ತು ವೀರಪ್ಪ ಮೊಯಿಲಿಯವರು ಅವರಿಂದ ನಿರೀಕ್ಷಿತ ಮಟ್ಟದಲ್ಲಿ ಕೊಡುಗೆ ದೊರೆತಿಲ್ಲ.

-ಯಲುವಹಳ್ಳಿ ಸೊಣ್ಣೇಗೌಡ, ರೈತ ಮುಖಂಡ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.