ಬುಧವಾರ, ಮೇ 12, 2021
23 °C
ಸಿಇಟಿ ಕೌನ್ಸೆಲಿಂಗ್: 5ರಿಂದ ಮೂಲ ದಾಖಲೆಗಳ ಪರಿಶೀಲನೆ

ಸೀಟು ಆಯ್ಕೆ: ಈ ಬಾರಿ ಒಂದೇ ಸುತ್ತಿಗೆ ಅವಕಾಶ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಬರೆದು ಎಂಜಿನಿಯರಿಂಗ್, ವೈದ್ಯಕೀಯ ಶಿಕ್ಷಣ ಪಡೆಯಲು ಕಾತುರರಾಗಿರುವ ವಿದ್ಯಾರ್ಥಿಗಳ ಮೂಲ ದಾಖಲೆಗಳ ಪರಿಶೀಲನೆ, ನಿಗದಿಯಂತೆ ಜೂನ್ 5ರಿಂದ ಆರಂಭವಾಗಲಿದೆ.ಗೋಕುಲಂನಲ್ಲಿರುವ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ `ಪೂರ್ವಭಾವಿ ಕೌನ್ಸೆಲಿಂಗ್'ನಲ್ಲಿ, ಸಿಇಟಿ ನೋಡಲ್ ಅಧಿಕಾರಿ ಆನಂದರಾಜ್ ಈ ವಿಷಯ ತಿಳಿಸಿದರು. `ಜೂನ್ 5ರಿಂದ 23ರ ವರೆಗೆ ರ‌್ಯಾಂಕಿಂಗ್‌ಗೆ ಅನುಗುಣವಾಗಿ ಮೂಲ ದಾಖಲೆಗಳ ಪರಿಶೀಲನೆ ಮಾಡಲಾಗುವುದು. ಇದಕ್ಕಾಗಿ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನ ಕಟ್ಟಡದಲ್ಲಿ ಕೌನ್ಸೆಲಿಂಗ್ ಕೇಂದ್ರ ಆರಂಭಿಸಲಾಗಿದೆ.

ಒಟ್ಟು ಆರು ಕೌಂಟರ್‌ಗಳನ್ನು ತೆರೆಯಲಾಗಿದ್ದು, ಯಾವುದಾದರೂ ಒಂದು ಕೌಂಟರ್‌ನಲ್ಲಿ ದಾಖಲೆಗಳ ಪರಿಶೀಲನೆ ಮಾಡಿಸಿಕೊಳ್ಳಬಹುದು. ಇದಕ್ಕೂ ಮುನ್ನ, ಹೆಸರು ನೋಂದಣಿ ಮಾಡಿ ಕೊಳ್ಳಬೇಕು' ಎಂದು ಹೇಳಿದರು. `ಮೈಸೂರು, ಮಂಡ್ಯ, ಕೊಡಗು ಹಾಗೂ ಚಾಮರಾಜನಗರ ಜಿಲ್ಲೆಗಳ ವಿದ್ಯಾರ್ಥಿಗಳು ವಿದ್ಯಾವರ್ಧಕ ಕಾಲೇಜಿನಲ್ಲಿ ಆರಂಭಿಸಿರುವ ಕೌನ್ಸೆಲಿಂಗ್ ಕೇಂದ್ರದಲ್ಲಿಯೇ ತಾವು ಪಡೆದಿರುವ ರ‌್ಯಾಂಕುಗಳಿಗೆ ಅನುಗುಣ ವಾಗಿ ಮೂಲ ದಾಖಲೆ ಪರಿಶೀಲನೆಗೆ ಒಳಪಡಿಸಬೇಕು' ಎಂದರು.ಒಬ್ಬ ವಿದ್ಯಾರ್ಥಿಗೆ 12 ರಾಂಕ್

ವೈದ್ಯಕೀಯ/ದಂತ ವೈದ್ಯಕೀಯ (ಎಂ.ಬಿ.ಬಿ.ಎಸ್, ಬಿ.ಡಿ.ಎಸ್), ಆಯುರ್ವೇದ, ಹೋಮಿಯೋಪಥಿ, ಯುನಾನಿ, ನ್ಯಾಚುರೋಪಥಿ ಮತ್ತು ಯೋಗ (ಭಾರತೀಯ ವೈದ್ಯ ಪದ್ಧತಿ ಮತ್ತು ಹೋಮಿಯೋಪಥಿ), ಎಂಜಿನಿಯರಿಂಗ್/ತಾಂತ್ರಿಕ (ಬಿ.ಇ, ಬಿ.ಟೆಕ್), ಆರ್ಕಿಟೆಕ್ಚರ್ (ಬಿ.ಆರ್ಕ್), ಬಿ.ಎಸ್‌ಸಿ (ಕೃಷಿ), ಬಿ.ಎಸ್‌ಸಿ (ಫಾರ್ಮಸಿ), ಬಿ.ಎಸ್‌ಸಿ (ಸೆರಿಕಲ್ಚರ್), ಬಿ.ಎಸ್‌ಸಿ (ಅಗ್ರಿ ಬಯೋಟೆಕ್), ಬಿ.ಎಸ್‌ಸಿ (ತೋಟಗಾರಿಕೆ), ಬಿ.ಎಚ್. ಎಸ್.ಸಿ (ಗೃಹವಿಜ್ಞಾನ), ಬ್ಯಾಚಲರ್ ಆಫ್ ವೆಟರ್ನರಿ ಅಂಡ್ ಅನಿಮಲ್ ಹಸ್ಬೆಂಡರಿ (ಬಿ.ವಿ.ಎಸ್ ಅಂಡ್ ಎ.ಎಚ್), ಬಿ.ಟೆಕ್ (ಫುಡ್ ಟೆಕ್ನಾಲಜಿ), ಬಿ.ಟೆಕ್ (ಡೇರಿ ಟೆಕ್ನಾಲಜಿ), ಬಿ.ಎಫ್.ಎಸ್.ಸಿ (ಫಿಶರಿ ಸೈನ್ಸ್), ಬಿ.ಟೆಕ್ (ಫುಡ್ ಸೈನ್ಸ್ ಅಂಡ್ ಟೆಕ್ನಾಲಜಿ), ಬಿ.ಎಸ್‌ಸಿ (ಅಗ್ರಿ ಮಾರ್ಕೆಟಿಂಗ್, ಕೋ-ಆಪರೇಷನ್), ಬಿ.ಟೆಕ್ (ಅಗ್ರಿಕಲ್ಚರ್ ಎಂಜಿನಿಯರಿಂಗ್) ಸೇರಿದಂತೆ 12 ರ‌್ಯಾಂಕುಗಳನ್ನು ನೀಡಲಾಗುತ್ತದೆ.ಪರಿಶೀಲನೆ ಹೀಗೆ: ವಿದ್ಯಾರ್ಥಿಯ ಜೊತೆಗೆ ಒಬ್ಬರು ಪೋಷಕರಿಗೆ ಮಾತ್ರ ಸಹಾಯ ಕೇಂದ್ರಕ್ಕೆ ಬರಲು ಅವಕಾಶವಿದೆ. ಸಿಇಟಿ ಪ್ರವೇಶ ಪತ್ರ, ಅಂಕಪಟ್ಟಿ, ಎರಡು ಭಾವಚಿತ್ರಗಳನ್ನು ತರಬೇಕು. ದಾಖಲೆಗಳ ಪರಿಶೀಲನೆ ಬಳಿಕ ವಿದ್ಯಾರ್ಥಿಗಳಿಗೆ ಪರಿಶೀಲನಾ ಪ್ರಮಾಣಪತ್ರ, ಆನ್‌ಲೈನ್ ಸೀಟು ಆಯ್ಕೆ ಪ್ರಕ್ರಿಯೆ ಮಾಹಿತಿಯುಳ್ಳ ಪುಸ್ತಕ, ಧ್ವನಿಮುದ್ರಿತ ಸಿ.ಡಿಯನ್ನು ಉಚಿತವಾಗಿ ನೀಡಲಾಗುತ್ತದೆ. ವಿದ್ಯಾರ್ಥಿಯು ಸಹಾಯ ಕೇಂದ್ರದಿಂದ ಹೊರಡುವ ಮುನ್ನ ಪರಿಶೀಲನಾ ಪ್ರಮಾಣಪತ್ರ, ಆನ್‌ಲೈನ್ ಕೋಡ್ ಮತ್ತು ಪಾಸ್‌ವರ್ಡ್, ಮಾಹಿತಿ ಪುಸ್ತಕ ಹಾಗೂ ಸಿ.ಡಿ ತೆಗೆದುಕೊಂಡಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು.ಸೀಟು ಆಯ್ಕೆ ಹೇಗೆ?

ಸಿಇಟಿ ಪ್ರವೇಶ ಪತ್ರದ ಸಂಖ್ಯೆ ಮತ್ತು ಪರೀಕ್ಷಾ ಪ್ರಾಧಿಕಾರ ಈಗಾಗಲೇ ಕೊಟ್ಟಿರುವ ಪಾಸ್‌ವರ್ಡ್ ಅನ್ನುwww.kea.kar.nic.inವೆಬ್‌ಸೈಟ್‌ಗೆ ಹೋಗಿ ಲಾಗಿನ್ ಆಗಬೇಕು. ಸಿಇಟಿ ಸಂಖ್ಯೆ, ಅರ್ಜಿ ಸಂಖ್ಯೆ, ಪಾಸ್‌ವರ್ಡ್, ಈ-ಮೇಲ್ ಹಾಗೂ ಮೊಬೈಲ್ ಸಂಖ್ಯೆ ವೆಬ್‌ಸೈಟ್‌ನಲ್ಲಿ ನಮೂದಿಸುವ ಮೂಲಕ ಸೀಟು ಆಯ್ಕೆ ಮಾಡಿಕೊಳ್ಳಬಹುದು.ಸೂಪರ್ ನ್ಯುಮರರಿ ಕೋಟಾ

2012-13ನೇ ಸಾಲಿನಿಂದ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ (ಎಐಸಿಟಿಇ) ಪ್ರತಿಯೊಂದು ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೂಪರ್ ನ್ಯುಮರರಿ ಕೋಟಾದಡಿ ಸೀಟು ಪಡೆಯಲು ಅವಕಾಶ ಕಲ್ಪಿಸಿದೆ. ವಿದ್ಯಾರ್ಥಿಯ ಪೋಷಕರ ಆದಾಯ ರೂ. 4.5 ಲಕ್ಷಕ್ಕಿಂತ ಕಡಿಮೆ ಇದ್ದಲ್ಲಿ, ಒಟ್ಟು ಸೀಟುಗಳಲ್ಲಿ ಶೇ 5ರಷ್ಟನ್ನು ರ‌್ಯಾಂಕ್‌ಗೆ ಅನುಗುಣವಾಗಿ ಉಚಿತವಾಗಿ ಪಡೆಯಬಹುದು. ಇದು ಕೇವಲ ಎಂಜಿನಿಯರಿಂಗ್ ಕಾಲೇಜು ಗಳಿಗೆ ಮಾತ್ರ ಅನ್ವಯಿಸುತ್ತದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.