ನವದೆಹಲಿ(ಪಿಟಿಐ): ಸೇವಾ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್–ಅಕ್ಟೋಬರ್ ಅವಧಿಯಲ್ಲಿ ಶೇ 62ರಷ್ಟು ಕುಸಿತ ಕಂಡಿದ್ದು, 136 ಕೋಟಿ ಡಾಲರ್ಗಳಿಗೆ (₨8,432 ಕೋಟಿಗೆ) ಇಳಿಕೆ ಕಂಡಿದೆ ಎಂದು ಕೈಗಾರಿಕಾ ನೀತಿ ಮತ್ತು ಉತ್ತೇಜನ ಇಲಾಖೆ (ಡಿಐಪಿಪಿ) ಹೇಳಿದೆ.

ಬ್ಯಾಂಕ್, ವಿಮೆ, ಹೊರಗುತ್ತಿಗೆ, ಸಂಶೋಧನೆ ಮತ್ತು ಅಭಿವೃದ್ಧಿ, ಕೊರಿ ಯರ್, ತಾಂತ್ರಿಕ ಪರಿಶೀಲನೆ ವಲಯಗ ಳನ್ನೂ ಸೇವಾ ಕ್ಷೇತ್ರ ಒಳಗೊಂಡಿದೆ. 2012ನೇ ಸಾಲಿನ ಏಪ್ರಿಲ್–ಅಕ್ಟೋ ಬರ್ ಅವಧಿಯಲ್ಲಿ 360 ಕೋಟಿ ಡಾಲ ರ್ಗಳಷ್ಟು (₨22,320 ಕೋಟಿ) ‘ಎಫ್ಡಿಐ’ ದಾಖಲಾಗಿತ್ತು. ಮಾರುಕಟ್ಟೆ ತಜ್ಞರ ಪ್ರಕಾರ, ವಿದೇಶಿ ಹೂಡಿಕೆದಾರರು ಹೊಸ ಸರ್ಕಾರಕ್ಕಾಗಿ ಕಾಯುತ್ತಿದ್ದಾರೆ. ಹೀಗಾಗಿ ಚುನಾವಣೆ ಬಳಿಕ ‘ಎಫ್ಡಿಐ’ ಹರಿವು ಹೆಚ್ಚಬಹುದು ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

‘ಬ್ಯಾಂಕಿಂಗ್ ಕ್ಷೇತ್ರದಲ್ಲಿ ಹೆಚ್ಚಿನ ‘ಎಫ್ಡಿಐ’ ಆಕರ್ಷಿಸಬೇಕಾದರೆ ಮಹತ್ತರ ಸುಧಾರಣೆಗಳು ಆಗಬೇಕು. ಹೀಗಾಗಿ ವಿದೇಶಿ ಹೂಡಿಕೆದಾ ರರು ಬದಲಾವಣೆ ತರುವ ಹೊಸ ಸರ್ಕಾರದ ನಿರೀಕ್ಷೆಯಲ್ಲಿದ್ದಾರೆ’ ಎಂದು ಹೂಡಿಕೆ ತಜ್ಞ ಕಿರಣ್ ಮಲ್ಹೋತ್ರ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.