ವಿಶ್ವನಾಥ ಎಚ್.ಸಿ.
ನನಗೆ ಹೃದಯದಲ್ಲಿ ಕಡಿತ ಮತ್ತು ನೋವು ಬರುತ್ತದೆ, ಕಾರಣ ತಿಳಿಸಿ.
ಹೃದಯದಲ್ಲಿ ಕಡಿತ ಬರಲು ಸಾಧ್ಯವಿಲ್ಲ. ಹೃದಯಕ್ಕೆ ನೋವಿಲ್ಲ. ನಿಮ್ಮ ಕಡಿತ ಎದೆಯಲ್ಲಿ ಇರಬೇಕು. ಅದಕ್ಕೆ ಹಲವಾರು ಕಾರಣಗಳಿವೆ. ಉತ್ತಮ ವೈದ್ಯರಿಂದ ಪರೀಕ್ಷಿಸಿಕೊಳ್ಳಿ, ಹೆದರಬೇಡಿ.

ವಿಜಯ ಕುಮಾರ್, 53 ವರ್ಷ, ಬೆಂಗಳೂರು.
ನಾನು ಸುಮಾರು 3-4 ವರ್ಷಗಳಿಂದ ಕೀಲು ನೋವುಗಳಿಂದ ಬಳಲುತ್ತಿದ್ದೇನೆ. ಒಬ್ಬ ವೈದ್ಯರ ಸಲಹೆಯಂತೆ ರೆಮಟಾಲಜಿ ತಜ್ಞ ವೈದ್ಯರನ್ನು ಭೇಟಿ ಮಾಡಿದ್ದೇನೆ. ಅವರು ಹಲವು ಪರೀಕ್ಷೆಗಳಿಗೆ ಸಲಹೆ ಮಾಡಿದರು.

ಆದರೆ ANA profile ಪರೀಕ್ಷೆ ಬಹು ದುಬಾರಿಯಾದುದರಿಂದ ಅದನ್ನು ಮಾಡಿಸಲಿಲ್ಲ. ಮತ್ತೊಬ್ಬ ರೆಮಟಾಲಜಿ ತಜ್ಞರು ಪೂರ್ಣ ರಕ್ತ ಪರೀಕ್ಷೆ, ಮೂತ್ರ ಹಾಗೂ ಇನ್ನೂ ಅನೇಕ ಪರೀಕ್ಷೆಗಳಿಗೆ ಸಲಹೆ ಮಾಡಿದರು.

ಈ ಎಲ್ಲಾ ಪರೀಕ್ಷೆಗಳನ್ನು ಮಾಡಿಸಲಾಯಿತು. ಆದರೆ ಎಲ್ಲವೂ ಸಾಮಾನ್ಯ ಆಗಿದೆ ಎಂದು ರಿಪೋರ್ಟ್ ಬಂದಿದೆ. ನನಗೆ ಮೊದಲು ಪಾದಗಳು, ಭುಜಗಳು ಹಾಗೂ ಕತ್ತು ನೋವಿತ್ತು. ಈಗ ಒಂದು ವರ್ಷದಿಂದ ಮಣಿಕಟ್ಟು, ಹಸ್ತಗಳ ಉರಿಯಾತನೆಯಿಂದ ಬಳಲುತ್ತಿದ್ದೇನೆ. ರಾತ್ರಿ ಹೆಚ್ಚಾಗುವುದು; ಬೆಳಿಗ್ಗೆ ನೋವಿರುತ್ತದೆ. ನಿದ್ದೆಯ ಅಡಚಣೆ ಇದೆ. ಗಾಢವಾದ ನಿದ್ದೆ ಇಲ್ಲ. ಜಾಗೃತಾವಸ್ಥೆಯಿಂದ ಜಾರಿದರೆ ಸ್ವಪ್ನಾವಸ್ಥೆಗೆ ತಲುಪುತ್ತೇನೆ.

ಆದುದರಿಂದ ಈ ಕಾಯಿಲೆ ಏನು? ಇದನ್ನು ಗುಣಪಡಿಸಬಹುದೆ? ಇದರಿಂದ ಭವಿಷ್ಯದಲ್ಲಿ ಏನೇನಾಗವುದೋ ಎಂಬ ಆತಂಕವೂ ಇದೆ. ಇದಕ್ಕೆ ಎಂತಹ ಚಿಕಿತ್ಸೆ ಅವಶ್ಯಕ ಎಂದು ತಿಳಿಬೇಕಾಗಿ ಮನವಿ.

ದಯವಿಟ್ಟು ನಿಮ್ಮ ಎರಡನೇ ವೈದ್ಯರ ಸಲಹೆ ಮೇರೆಗೆ ಉಪಶಮನ ಪಡಕೊಳ್ಳಿ. Greek ಮತ್ತು latin ನ ದೊಡ್ಡ ಶಬ್ದಗಳಿಂದ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಪತ್ರದ ಸಾರಾಂಶದಿಂದ ನನ್ನ ಅಭಿಪ್ರಾಯದಲ್ಲಿ ನಿಮಗಂತಹ ಏನೂ ಕಾಯಿಲೆ ಇಲ್ಲ. ಕಾಯಿಲೆ ಇದೆ ಎಂದು ಹೆದರುವುದು ಕಾಯಿಲೆ ಇರುವುದಕ್ಕಿಂತಲೂ ಕಷ್ಟ. ಎರಡನೆ ವೈದ್ಯರ ಸಲಹೆ ಪಡೆದುಕೊಂಡು ಗುಣಮುಖರಾಗಿ.

ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿಗಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? ಆರೋಗ್ಯಕ್ಕೆ ಸಂಬಂಧಿಸಿದಂತೆ ನಿಮ್ಮಲ್ಲಿ ಅನೇಕ ಪ್ರಶ್ನೆಗಳಿರಬಹುದಲ್ಲವೆ? ಈ ಪ್ರಶ್ನೆಗಳನ್ನು ಬರೆದು ನಮಗೆ ಕಳಿಸಿ. ನಿಮ್ಮ ಈ ಪ್ರಶ್ನೆಗಳಿಗೆ `ಸ್ವಾಸ್ಥ್ಯ- ಸೌಖ್ಯ~ದ ಅಂಕಣಕಾರರೂ ಆದ ಪ್ರೊ ಬಿ.ಎಂ.ಹೆಗ್ಡೆ ಉತ್ತರಿಸಲಿದ್ದಾರೆ.

ಪ್ರಶ್ನೆಕಳಿಸುವ ವಿಳಾಸ: ಸಂಪಾದಕರು, ಭೂಮಿಕಾ ವಿಭಾಗ, ಪ್ರಜಾವಾಣಿ, 75, ಎಂ.ಜಿ.ರಸ್ತೆ, ಬೆಂಗಳೂರು - 560001 ಇ-ಮೇಲ್ ವಿಳಾಸ: bhoomikapv@gmail.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.