ಸೋಮವಾರ, ಮಾರ್ಚ್ 1, 2021
23 °C

ಹಂಪಿಯಲ್ಲಿ ರೌಡಿ ರಾಠೋಡ್ ಗೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪಿಯಲ್ಲಿ ರೌಡಿ ರಾಠೋಡ್ ಗೆ ಅಡ್ಡಿ

ಬೆಂಗಳೂರು (ಐಎಎನ್ಎಸ್): ಹಂಪಿಯಲ್ಲಿ ಆರಂಭವಾಗಿದ್ದ ಖ್ಯಾತ ಹಿಂದಿ ಚಿತ್ರನಟ ಅಕ್ಷಯಕುಮಾರ್ ಹಾಗೂ ಸೋನಾಕ್ಷಿ ಸಿನ್ಹಾ ಅಭಿನಯದ `ರೌಡಿ ರಾಠೋಡ್~ ಚಲನಚಿತ್ರದ ಹಾಡುಗಳ ಚಿತ್ರೀಕರಣಕ್ಕೆ ಮಂಗಳವಾರ ಸ್ಥಳೀಯರು ಅಡ್ಡಿಪಡಿಸಿದರು.ಸ್ಥಳೀಯ ನೃತ್ಯಗಾರರಿಗೆ  ಕನಿಷ್ಠ ಪ್ರಾತಿನಿಧ್ಯ ಕೂಡಾ ದೊರೆತಿಲ್ಲ ಎಂದು ಆರೋಪಿಸಿ ಗ್ರಾಮಸ್ಥರು ಚಿತ್ರೀಕರಣಕ್ಕೆ ಅಡ್ಡಿಪಡಿಸಿದರು. ಚಿತ್ರೀಕರಣಕ್ಕೆ ಮಂಗಳವಾರದಿಂದ ಶುಕ್ರವಾರದವರೆಗೆ ಮಾತ್ರ ಅವಕಾಶ ನೀಡಲಾಗಿತ್ತು. ಆದರೆ ಸೋಮವಾರವೇ ಆರಂಭಿಸಿದ್ದು  ಕೂಡಾ ಚಿತ್ರೀಕರಣ ನಿಲ್ಲಲು ಇನ್ನೊಂದು ಕಾರಣ ಎಂದು ಹೇಳಲಾಗಿದೆ.ಸೋಮವಾರದಿಂದ ಆರಂಭವಾಗಿದ್ದ  ಚಿತ್ರೀಕರಣದಲ್ಲಿ ಖ್ಯಾತ ನಟನಟಿಯರು ಪಾಲ್ಗೊಂಡಿದ್ದರು.

ಐತಿಹಾಸಿಕ ಹಂಪಿಯ ವಿಜಯವಿಠಲ, ಪುರಂದರ ಮಂಟಪ, ಆನೆಸಾಲು ಒಂಟೆ ಸಾಲುಗಳ ಬಳಿ ಮತ್ತು ಕಮಲ್‌ಮಹಲ್ ಆಸುಪಾಸಿನಲ್ಲಿ ಚಿತ್ರದ ಹಾಡುಗಳಿಗೆ ಅದ್ದೂರಿಯಾಗಿ ಚಿತ್ರೀಕರಣ  ನಡೆದಿತ್ತು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.