ಮಂಗಳವಾರ, ಮೇ 24, 2022
30 °C

ಹಕ್ಕುಗಳನ್ನು ಸಮರ್ಪಕವಾಗಿ ನಿಭಾಯಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಲ್ಲಾಪುರ: ಬೈಬಲ್‌ನಲ್ಲಿರುವ  ಮುಗ್ದತೆಯನ್ನು ಪಾಲಿಸುತ್ತಿರುವ ಯುವಕರ ಕುರಿತು ಹೆಮ್ಮಯಾಗುತ್ತಿದೆ, ಆದರೆ ಕೇವಲ ಮುಗ್ದತೆಯೇ ಜೀವನ ವಾಗದಿರಲಿ . ಯುವಕ, ಯುವತಿ ಮಂಡಳಗಳ ಮೂಲಕ ನಿಮ್ಮ ಹಕ್ಕುಗಳನ್ನು ಸಮರ್ಪಕವಾಗಿ ನಿಭಾಯಿಸಿ ಎಂದು ಚಲನಚಿತ್ರ ನಿರ್ಮಾಪಕ , ಜೆ.ಡಿ.ಎಸ್. ಮುಖಂಡ ಡಿ. ಅನಿಲಕುಮಾರ ಹೇಳಿದರು.ಪಟ್ಟಣದ ಹೋಲಿ ರೋಜರಿ ಚರ್ಚಿನ ಆವಾರದಲ್ಲಿ ಶುಕ್ರವಾರ ರಾತ್ರಿ ಕೆನರಾ ಯುವಕ ಹಾಗೂ ಯುವತಿ ಮಂಡಳಗಳು ಜಂಟಿಯಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.ಅಧ್ಯಕ್ಷತೆ ವಹಿಸಿದ್ದ ಫಾದರ್ ಡಿವಿಡ್ ಪಿಂಟೀ ಕೇವಲ ನಮ್ಮಂದಿಗೆ ಮಾತ್ರ ಬೆರೆಯುವ ಸಂಘ ಸಂಸ್ಥೆಗಳಿದ್ದವು , ಈ ಸಮಘಟನೆ ಸಮಾಜದೊಂದಿಗೆ ಬೆರೆ ಯುವಂತಾಗಲಿ ಎಂದು ಹಾರೈಸಿದರು.ವೇದಿಕೆಯಲ್ಲಿ ಪ.ಪಂ. ಅಧ್ಯಕ್ಷ ಪಿ.ಟಿ.ಮರಾಠೆ, ಸಾಮಾಜಿ ಕಾರ್ಯಕರ್ತ ಪಿ.ಜಿ.ಭಟ್ಟ ವಡ್ರಮನೆ , ಸಹಾಯಕ ಫಾದರ್ ರೋಸನ್ ಫರ್ನಾಂಡಿಸ ಉಪಸ್ಥಿತರಿದ್ದರು.  ಅಂತೋನಿ ಸ್ವಾಗತಿಸಿದರು , ವಿಲ್ಸನ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.