ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತು ಮಂದಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ

Last Updated 17 ನವೆಂಬರ್ 2015, 19:38 IST
ಅಕ್ಷರ ಗಾತ್ರ

ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಇದೇ 26ರಿಂದ  29ರವರೆಗೆ ವಿದ್ಯಾಗಿರಿಯಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ ಸಮ್ಮೇಳನದ ಸಂದರ್ಭ ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿ ವಿಶೇಷ ಸಾಧನೆ ಮಾಡಿದ 10 ಗಣ್ಯರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಂಸ್ಥೆಯ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ತಿಳಿಸಿದ್ದಾರೆ.

ಸಾಹಿತಿ ಬನ್ನಂಜೆ ಗೋವಿಂದಾಚಾರ್ಯ, ವಿಮರ್ಶಕ, ಮಕ್ಕಳ ಸಾಹಿತಿ, ಡಾ. ಸುಮತೀಂದ್ರ ನಾಡಿಗ, ಚಲನಚಿತ್ರ ನಿರ್ದೇಶಕ ಎಸ್. ವಿ.ರಾಜೇಂದ್ರಸಿಂಗ್ ಬಾಬು, ಪ್ರಬುದ್ಧ ಗಾಯಕ ವಿದ್ವಾನ್ ಆರ್.ಕೆ ಪದ್ಮನಾಭ, ವಿಮರ್ಶಕಿ ಡಾ.ಬಿ.ಎನ್ ಸುಮಿತ್ರಾ ಬಾಯಿ, ಹಿರಿಯ ಪತ್ರಕರ್ತ ಈಶ್ವರ ದೈತೋಟ, ಮಹಿಳಾ ಭಾಗವತರಾದ ಲೀಲಾವತಿ ಬೈಪಡಿತ್ತಾಯ, ಪ್ರಗತಿಪರ ಕೃಷಿಕ ವರ್ತೂರು ನಾರಾಯಣ ರೆಡ್ಡಿ, ಲೋಹ ಶಿಲ್ಪಿ ಹೊನ್ನಪ್ಪಾಚಾರ್, ನೃತ್ಯ ಕಲಾವಿದ ಸೈಯದ್ ಸಲಾವುದ್ದೀನ್ ಪಾಷ ಅವರು ಆಳ್ವಾಸ್ ನುಡಿಸಿರಿ ಪ್ರಶಸ್ತಿಗೆ ಆಯ್ಕೆಯಾದ ಪ್ರಮುಖ ಸಾಧಕರು.

29ರಂದು ನಡೆಯುವ ನುಡಿಸಿರಿ ಸಮ್ಮೇಳನದ ಸಮಾರೋಪದ ವೇಳೆ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT