ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಜಮಾನಾದ ಹೊಸ ಸಿನಿಮಾಗಳು

Last Updated 4 ಜನವರಿ 2015, 19:30 IST
ಅಕ್ಷರ ಗಾತ್ರ

‘ಗೋಲಿಯೋಂಕಾ ರಾಸ್‌ಲೀಲಾ ರಾಮ್‌–ಲೀಲಾ’ ಎಂಬ ಅರೆ ಐತಿಹಾಸಿಕ ಚಿತ್ರ ನಿರ್ದೇಶಿಸಿದ್ದ ಸಂಜಯ್‌ಲೀಲಾ ಬನ್ಸಾಲಿ ಈಗ ಪೂರ್ಣಪ್ರಮಾಣದ ಐತಿಹಾಸಿಕ ಚಿತ್ರ ನಿರ್ದೇಶಕ್ಕೆ ತೊಡಗಿದ್ದಾರೆ.

ಈ ಬಾರಿ ಅವರು ಆಯ್ದುಕೊಂಡಿರುವುದು 17ನೇ ಶತಮಾನದಲ್ಲಿ ಬದುಕಿದ್ದ ಮರಾಠಾ ಪೇಶ್ವೆ ಬಾಜಿರಾವ್ ಜೀವನಕತೆಯನ್ನು. ‘ಬಾಜಿರಾವ್‌ ಮಸ್ತಾನಿ’ ಎಂಬ ಹೆಸರಿನ ಈ ಚಿತ್ರದಲ್ಲಿ ರಣವೀರ್‌ ಸಿಂಗ್‌ ಬಾಜೀರಾವ್‌ ಪೇಟದಲ್ಲಿ ಕಾಣಿಸಿಕೊಂಡರೆ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅವರ  ಪತ್ನಿಯರ ಪಾತ್ರದಲ್ಲಿ ನಟಿಸಲಿದ್ದಾರೆ. ಹಿಂದಿ ಚಿತ್ರರಂಗದ ಅತ್ಯಂತ ದೊಡ್ಡ ಬಜೆಟ್‌ ಸಿನಿಮಾಗಳಲ್ಲಿ ಒಂದು ಎಂದೇ ಹೇಳಲಾಗುತ್ತಿರುವ ಈ ಚಿತ್ರ ಈ ವರ್ಷಾಂತ್ಯಕ್ಕೆ ತೆರೆಕಾಣುವ ನಿರೀಕ್ಷೆಯಿದೆ.

ದಿನಕರ್‌ ಬ್ಯಾನರ್ಜಿ ನಿರ್ದೇಶಿಸಿ, ಸುಶಾಂತ್‌ ಸಿಂಗ್‌ ರಜಪೂತ್‌ ನಾಯಕನಾಗಿ ನಟಿಸುತ್ತಿರುವ ‘ಡಿಟೆಕ್ಟೀವ್‌ ಬ್ಯೋಮಕೇಶ್‌ ಬಕ್ಷಿ’ ಚಿತ್ರ 1940ರ ಕಾಲದಲ್ಲಿ ಕೋಲ್ಕತ್ತದಲ್ಲಿ ನಡೆಯುವ ಕತೆ. ಸುಶಾಂತ್‌ ತಮ್ಮ ಆಂಗಿಕಭಾಷೆಯನ್ನೇ ಸಂಪೂರ್ಣ ಬದಲಿಸಿಕೊಂಡು ಈ ಚಿತ್ರಕ್ಕಾಗಿ ತಯಾರಾಗಿರುವುದು ಹಳೆ ಸುದ್ದಿ. ಈ ಚಿತ್ರವೂ ಬಾಲಿವುಡ್‌ನ ಬಹುವೆಚ್ಚದ ಚಿತ್ರಗಳಲ್ಲಿ ಒಂದು ಎಂದು ಹೇಳಲಾಗುತ್ತಿದೆ.

ಅಲ್ಲಿ ಇಲ್ಲಿ ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ರಣಬೀರ್‌ ಕಪೂರ್‌ ಅವರನ್ನು ಕಳೆದ ವರ್ಷ ಅಭಿಮಾನಿಗಳು ತೆರೆಯ ಮೇಲೆ ಕಣ್ತುಂಬಿಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ಈ ವರ್ಷ ರಣಬೀರ್‌ ಮತ್ತು ಅನುಷ್ಕಾ ಜತೆಯಾಗಿ 1960ರ ದಶಕದ ಮುಂಬೈಯನ್ನು ತೆರೆಯ ಮೇಲೆ ದರ್ಶಿಸಲಿದ್ದಾರೆ.  ಜ್ಞಾನ್‌ ಪ್ರಕಾಶ್‌ ಅವರ ‘ಮುಂಬೈ ಫೇಬಲ್‌’ ಕೃತಿಯನ್ನು ಆಧರಿಸಿರುವ ‘ಬಾಂಬೆ ವೆಲ್ವೆಟ್‌’ ಚಿತ್ರಕ್ಕೆ ಅನುರಾಗ್‌ ಕಶ್ಯಪ್‌ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದೇ ವರ್ಷ ಮೇ ತಿಂಗಳಲ್ಲಿ ಈ ಚಿತ್ರ ತೆರೆಕಾಣುವ ನಿರೀಕ್ಷೆಯಿದೆ.

ಆಯುಷ್ಮಾನ್‌ ಖುರಾನಾ ಅವರೂ ಈ ಗತಕಾಲ ಕಥನಗಳ ಮೇಲಾಟದಲ್ಲಿ ಹಿಂದೆ ಬಿದ್ದಿಲ್ಲ. ‘ಹವೈಜಾದಾ’ ಸಿನಿಮಾದಲ್ಲಿ ಆಯಷ್ಮಾನ್‌ 19ನೇ ಶತಮಾನದ ವಿಜ್ಞಾನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ವಿಭು ಪುರಿ ಈ ಚಿತ್ರದ ನಿರ್ದೇಶನದ ನೊಗ ಹೊತ್ತಿದ್ದಾರೆ.

‘ಮೊಹೆಂಜೋ ದಾರೋ’. ಹೆಸರೇ ಹೇಳುವಂತೆ ಇದೂ ಇತಿಹಾಸದ ಕಥಾವಸ್ತುವನ್ನು ಆಧರಿಸಿದ ಚಿತ್ರ. ಲಗಾನ್‌, ಜೋದಾ ಅಕ್ಬರ್‌ ನಿರ್ದೇಶಕ ಅಶುತೋಷ್‌ ಗೋವಾರಿಕರ್‌ ಅವರ ನಾಲ್ಕನೇ ಚಿತ್ರವಿದು. ಈ ಚಿತ್ರದಲ್ಲಿ ಅವರು ಸಿಂಧೂ ಕಣಿವೆಯ ಕಥನವನ್ನು ಕೈಗೆತ್ತಿಕೊಂಡಿದ್ದಾರೆ. ಹೃತಿಕ್‌ ರೋಷನ್‌ ಅಭಿನಯದ ಬಹುನಿರೀಕ್ಷಿತ ಚಿತ್ರವಾದ ‘ಮೊಹೆಂಜೋ ದಾರೋ’ಕ್ಕೆ ಎ. ಆರ್‌. ರೆಹಮಾನ್‌ ಸಂಗೀತ ಸಾರಥ್ಯವಿರುವುದು ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT