ಹುಬ್ಬಳ್ಳಿ: ತಾರಿಹಾಳ ಬೈಪಾಸ್ ಬಳಿ ಇದೇ ಜನವರಿ 27ರಿಂದ 29ರ ವರೆಗೆ ನಡೆದ ಹಿಂದು ಶಕ್ತಿ ಸಂಗಮ ಸ್ಥಳದಲ್ಲಿ ಮತ್ತೆ ಕೃಷಿ ಚಟುವಟಿಕೆಗಳು ನಡೆಯಲಿವೆ. ಇದಕ್ಕಾಗಿ ಬದುಗಳನ್ನು ನಿರ್ಮಿಸುವ ಕೆಲಸ 5-6 ದಿನಗಳಿಂದ ಶುರುವಾಗಿದ್ದು, ಇನ್ನೂ ಒಂದು ವಾರದವರೆಗೆ ನಡೆಯಲಿದೆ.

ಆರ್ಎಸ್ಎಸ್ (ರಾಷ್ಟ್ರೀಯ ಸ್ವಯಂ ಸೇವಕ ಸಂಘ) ಸಂಘಟಿಸಿದ್ದ ಕರ್ನಾಟಕ-ಉತ್ತರ ಪ್ರಾಂತೀಯ ಮಹಾಶಿಬಿರಕ್ಕಾಗಿ ಬಳಸಿಕೊಂಡಿದ್ದು ಒಟ್ಟು 140 ಎಕರೆ. ಇದಕ್ಕಾಗಿ ಗಾಮನಗಟ್ಟಿ ಹಾಗೂ ಗೋಕುಲ ಗ್ರಾಮದ 10 ಕೂಡು ಕುಟುಂಬಗಳು ತಮ್ಮ 140 ಎಕರೆಯನ್ನು ಶಿಬಿರಕ್ಕಾಗಿ ಸ್ವಇಚ್ಛೆಯಿಂದ ಬಿಟ್ಟುಕೊಟ್ಟಿದ್ದವು. ಜನವರಿಯಲ್ಲಿ ಶಿಬಿರ ನಡೆದರೆ, ಸಿದ್ಧತೆಗಾಗಿ ನವೆಂಬರ್ ತಿಂಗಳಲ್ಲಿಯೇ 140 ಎಕರೆಯನ್ನು ರೈತರಿಂದ ಪಡೆಯಲಾಯಿತು.

ನಂತರ ಬದುಗಳನ್ನು ಸಮನಾಗಿಸಿ ಶಿಬಿರಕ್ಕಾಗಿ ಸಜ್ಜುಗೊಳಿಸಲಾಯಿತು. ಈಗ ಮತ್ತೆ ಬದುಗಳನ್ನು ಜೆಸಿಬಿ ಯಂತ್ರದ ಮೂಲಕ ಹಾಕಿಕೊಡುವ ಕಾರ್ಯ ನಡೆದಿದೆ. ಜೊತೆಗೆ ತೆಗ್ಗುಗಳಿದ್ದಲ್ಲಿ ಸಮನಾಗಿಸುವ ಕಾರ್ಯವೂ ನಡೆದಿದೆ.

`ಶಿಬಿರಕ್ಕಾಗಿ 140 ಎಕರೆಯನ್ನು ಸಮನಾಗಿಸಿದ್ದು ಕಂಡು ಸೈಟು ಮಾಡಿ ಮಾರುವ ಉದ್ದೇಶವಿದೆ ಎಂದು ಅನೇಕರು ತಿಳಿದಿದ್ದರು. ಆದರೆ ನಮಗೆ ಅಲ್ಲಿ ಸೈಟು ಮಾಡುವ ಉದ್ದೇಶವಿಲ್ಲ. ಮತ್ತೆ ಕೃಷಿ ಚಟುವಟಿಕೆಗಳಿಗೆ ಅನುವು ಮಾಡಿಕೊಡುವ ಉದ್ದೇಶ ಆರ್ಎಸ್ಎಸ್ನದು. ಬದುಗಳನ್ನು ನಿರ್ಮಿಸುವಾಗ ಆಯಾ ಜಮೀನಿನ ರೈತರು ಸ್ಥಳದಲ್ಲಿರುತ್ತಾರೆ. ತಮಗೆ ಹೇಗೆ ಬೇಕೋ ಹಾಗೆ ಜಮೀನನ್ನು ಸಿದ್ಧಪಡಿಸಿಕೊಳ್ಳುತ್ತಾರೆ. ಇದಕ್ಕಾಗಿ ಅವರಿಂದ ಯಾವುದೇ ದುಡ್ಡನ್ನು ಪಡೆಯುವುದಿಲ್ಲ~ ಎಂದು ಸ್ವಯಂ ಸೇವಕ ಹಾಗೂ ಶಿಬಿರದ ಸಂಘಟಕರಲ್ಲಿ ಒಬ್ಬರಾದ ರಘು ಅಯ್ಯಂಗಾರ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದರು.

ಶಿಬಿರಕ್ಕಾಗಿ 140 ಎಕರೆಯಲ್ಲಿದ್ದ ಕಂಟಿ-ಕಸವನ್ನು ಸ್ವಚ್ಛಗೊಳಿಸಲಾಯಿತು. ಇದರಲ್ಲಿ 40 ಎಕರೆಯನ್ನು ಸಂಘ ಸ್ಥಾನವೆಂದು ಮೈದಾನವಾಗಿ ನಿರ್ಮಿಸಲಾಯಿತು. ಇದರಲ್ಲಿ ಗಣವೇಷಧಾರಿ ಸ್ವಯಂ ಸೇವಕರು ವ್ಯಾಯಾಮ ಹಾಗೂ ಅಭ್ಯಾಸ ಮಾಡಿದರು. ಉಳಿದ ಜಾಗದಲ್ಲಿ ಸ್ವಯಂಸೇವಕರಿಗೆ ಉಳಿದುಕೊಳ್ಳಲು ಡೇರೆ, ಮುಖ್ಯ ವೇದಿಕೆ, ಪುಸ್ತಕ ಪ್ರದರ್ಶನ, ಆರೋಗ್ಯ ಶಿಬಿರ ನಡೆಸಲು ಪ್ರತ್ಯೇಕ ಟೆಂಟ್ಗಳನ್ನು ನಿರ್ಮಿಸಲಾಯಿತು.

ಹೀಗೆ ಸಂಘಶಕ್ತಿಯ ಸಾಕ್ಷಾತ್ಕಾರಕ್ಕೆ ರೂಪುಗೊಂಡಿದ್ದು ವಿಜಯನಗರ. ಒಣಬೇಸಾಯ ಇದ್ದುದರಿಂದ ಜಮೀನನ್ನು ಸಮತಟ್ಟುಗೊಳಿಸಲು ಕಷ್ಟವಾಗಲಿಲ್ಲ. ಶಿಬಿರದಲ್ಲಿ ವಿವಿಧ ಜಿಲ್ಲೆಗಳಿಂದ 21,763 ಗಣವೇಷಧಾರಿ ಸ್ವಯಂ ಸೇವಕರು ಭಾಗವಹಿಸಿದ್ದರು. ಆರ್ಎಸ್ಎಸ್ ಸಂಸ್ಥಾಪಕರಾದ ಡಾ.ಹೆಡಗೆವಾರ್ ಅವರು 1937ರಲ್ಲಿ ಉತ್ತರ ಪ್ರಾಂತದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿಗೆ ಭೇಟಿ ನೀಡಿದ ಅಮೃತ ಮಹೋತ್ಸವದ ಸಂಭ್ರಮಕ್ಕಾಗಿ ಹಿಂದು ಶಕ್ತಿ ಸಂಗಮವನ್ನು ಹಮ್ಮಿಕೊಳ್ಳಲಾಗಿತ್ತು.

`ಶಿಬಿರವನ್ನು ಹುಬ್ಬಳ್ಳಿಯಲ್ಲಿ ಆಯೋಜಿಸಲಾಗುತ್ತದೆ ಎಂದು ತೀರ್ಮಾನವಾದಾಗ ಸಾವಿರಗಟ್ಟಲೆ ಜನರನ್ನು ಒಂದೆಡೆ ಕಲೆ ಹಾಕುವಂಥ ಜಾಗ ಹುಡುಕಾಡಿದೆವು. ಅದು ಹುಬ್ಬಳ್ಳಿ ನಗರಕ್ಕೆ ಹತ್ತಿರವಾಗಿರಬೇಕು. ಜೊತೆಗೆ ಮುಖ್ಯ ರಸ್ತೆಯಿಂದ ಬಹಳ ದೂರ ಇರಬಾರದಾಗಿತ್ತು. ಆಗ ಸಿಕ್ಕಿದ್ದು ತಾರಿಹಾಳ ಬೈಪಾಸ್ ಹತ್ತಿರದ 140 ಎಕರೆ.

ಯಾವುದೇ ಗದ್ದಲವಿಲ್ಲದೆ ನಡೆದ ಹಿಂದು ಶಕ್ತಿ ಸಂಗಮದ ಯಶಸ್ಸಿಗೆ ಕಾರಣರಾದ ರೈತರಿಗೆ ಮತ್ತೆ ಕೃಷಿ ಯೋಗ್ಯ ಜಮೀನಾಗಿ ಸಿದ್ಧಗೊಳಿಸಿಕೊಡುವುದೇ ಅವರಿಗೆ ಸಲ್ಲಿಸುವ ಕೃತಜ್ಞತೆ~ ಎನ್ನುತ್ತಾರೆ ರಘು ಅಯ್ಯಂಗಾರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.