ಶಿಮ್ಲಾ (ಐಎಎನ್ಎಸ್): ವಿಶ್ವದ ಶ್ರೀಮಂತ ಜೀವವೈವಿಧ್ಯದ ತಾಣ `ದಿ ಗ್ರೇಟ್ ಹಿಮಾಲಯ ರಾಷ್ಟ್ರೀಯ ಉದ್ಯಾನವನ~ಕ್ಕೆ ಶೀಘ್ರದಲ್ಲೇ ವಿಶ್ವ ಮಾನ್ಯತೆ ದೊರೆಯುವ ಸಾಧ್ಯತೆ ಇದೆ.

ಈ ಉದ್ಯಾನಕ್ಕೆ ಯುನೆಸ್ಕೊ ವಿಶ್ವ ಪರಂಪರೆ ತಾಣದ ಮಾನ್ಯತೆ ನೀಡುವ ಸಂಬಂಧ ಅಂತರರಾಷ್ಟ್ರೀಯ ಪರಿಸರ ಸಂರಕ್ಷಣಾ ತಂಡವೊಂದು (ಐಯುಸಿಎನ್) ಅಕ್ಟೋಬರ್ 3ರಿಂದ 12ರವರೆಗೆ ಉದ್ಯಾನ ವೀಕ್ಷಣೆಗಾಗಿ ಭೇಟಿ ನೀಡಲಿದೆ~ ಎಂದು ಉದ್ಯಾನದ ನಿರ್ದೇಶಕ ಅಜಯ್ ಶ್ರೀವಾಸ್ತವ್ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

`2009ರಲ್ಲಿ ಈ ಉದ್ಯಾನವನ್ನು ಯುನೆಸ್ಕೊ ವಿಶ್ವ ಪರಂಪರೆ ತಾಣಗಳ ಆಯ್ಕೆ ಪಟ್ಟಿಯಲ್ಲಿ ಸೇರಿಸಿದ ನಂತರ ಮೊದಲ ಬಾರಿಗೆ ಅಂತರರಾಷ್ಟ್ರೀಯ ಮಟ್ಟದ ತಂಡವೊಂದು ಇಲ್ಲಿಗೆ ಭೇಟಿ ನೀಡುತ್ತಿದೆ~ ಎಂದು ಅಜಯ್ ತಿಳಿಸಿದ್ದಾರೆ.

ಪಶ್ಚಿಮ ಹಿಮಾಲಯ ಪರ್ವತದ ತಪ್ಪಲಲ್ಲಿ 754 ಚ.ಕಿ.ಮೀ ವಿಸ್ತೀರ್ಣದಲ್ಲಿ ಹರಡಿಕೊಂಡಿರುವ ಈ ಉದ್ಯಾನದಲ್ಲಿ ಅಭೂತಪೂರ್ವ ಸೌಂದರ್ಯದ ನೀರ್ಗಲ್ಲುಗಳು, ಹಸಿರು ಹಾಸು ಹೊದ್ದ ಗಗನ ಚುಂಬಿ ಪರ್ವತಗಳು, ನದಿ-ಝರಿಗಳಿವೆ.

ಇಂಥ ಜೀವವೈವಿಧ್ಯದ ಸೌಂದರ್ಯವನ್ನು ಗಮನಿಸಿಯೇ ಸರ್ಕಾರ 1999ರಲ್ಲಿ ಈ ಸ್ಥಳವನ್ನು ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಿ ಅಧಿಸೂಚನೆ ಹೊರಡಿಸಿತ್ತು. ಇದಾದ ಹತ್ತುವರ್ಷಗಳ ನಂತರ ವಿಶ್ವ ಮಾನ್ಯತೆಯ ಪುರಸ್ಕಾರಕ್ಕೆ ಈ ಪಾರ್ಕ್ ಪಾತ್ರವಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.