`ದೊಡ್ಡೂರು~ ಅಂಬೋದು ನಮ್ಮೂರಿನ ಹೆಸರು. ಇದು ಹಿರೇಹಳ್ಳದ ದಂಡೆಮ್ಯಾಗೆ ಇರೋದಕ್ಕೆ ಈ ಹೆಸರು ಬಂದಿರಬೇಕು. ದೊಡ್ಡೂರು ನಿಜವಾಗಿ ದೊಡ್ಡೂರಲ್ಲ. ಅಬ್ಬಬ್ಬ ಅಂದ್ರೆ ಮೂರುನಾಕು ಸಾವಿರ ಮನೆ ಇರಬೋದು. ಊರಲ್ಲಿ ಗ್ರಾಮಪಂಚಾಯತಿ ಇದೆ.

ಪಂಚಾಯತಿ ಕಟ್ಟೆ ಇದೆ. ಪ್ರಾಥಮಿಕ ಶಾಲೆ ಇದೆ. ಅಂಚೆ ಕಚೇರಿ, ಕಲ್ಯಾಣ ಮಂಟಪ, ಒಂದೆರಡು ದೇವಸ್ಥಾನ ಎಲ್ಲ ಇವೆ. ಊರು ಅಂದ ಮೇಲೆ ಅಂಗಡಿ ಮುಂಗಟ್ಟು ಇದ್ದದ್ದೇ. ಊರ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿ ಇದೆ. ಊರಲ್ಲಿ ಒಂದು ಟೂರಿಂಗ್ ಟಾಕೀಸೂ ಇದ್ದು ಅದರಲ್ಲಿ ಕನ್ನಡ ಸಿನಿಮಾ ಬರ್ತಿರ್ತಾವೆ.

ಹೊಲಕ್ಕೆ ಗದ್ದೆಗೆ ತೋಟಕ್ಕೆ ಕೈತೋಟಕ್ಕೆ ಕುಡಿಯೋ ನೀರಿಗೆ ಎಲ್ಲಕ್ಕೂ ಒಂದು ದೊಡ್ಡ ಆಸರೆ ಎಂದರೆ ಊರ ಹೊರಗಿನ ಹಿರೇಹಳ್ಳ. ಶುದ್ಧ ಸ್ಫಟಿಕ ನೀರಿನ ಆಶಯ! ನಮ್ಮೂರಿಗೊಂದೇ ಅಲ್ಲ, ಸುತ್ತ ಹತ್ತೆಂಟು ಹಳ್ಳಿಗಳಿಗೆ ಇದರದ್ದೇ ಅಂತರ್ಜಲ!

ಅಂದಹಾಗೆ, ನಮ್ಮ ಗ್ರಾಮ ಪಂಚಾಯತಿಗೆ ಶ್ರೇಷ್ಠ ಗ್ರಾಮ ಪಂಚಾಯತಿ ಎಂಬ ಪ್ರಶಸ್ತಿಯೂ ಲಭಿಸಿದೆ. ಪಂಚಾಯತಿ ಪ್ರೆಸಿಡೆಂಟರಿಗೆ ಸನ್ಮಾನ ಸಮಾರಂಭವೂ ಜರುಗಿದೆ. ಎಲ್ಲವೂ ಚಂದ ಇದ್ದರೆ ದೃಷ್ಟಿ ತಾಕೋದಿಲ್ಲವೇ ಹಾಗೇ ಆಗತೊಡಗಿದೆ ನಮ್ಮೂರಲ್ಲಿ...

ಈಗ್ಗೆ ಒಂದೆರಡು ವರ್ಷದ ಕೆಳಗೆ ಹಿರೇಹಳ್ಳದ ದಂಡೆಮ್ಯಾಗೆ ದೊಡ್ಡಣ್ಣಶೆಟ್ಟರ ಪಾಲಿಫೈಬರ್ಸ್ ಫ್ಯಾಕ್ಟರಿ ಸ್ಟಾರ್ಟ್ ಆಗ್ಯೆದೆ. ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡೋಕೆ ನಮ್ಮೂರಿನ ಯುವಕರಿಗೆ ಸಾಕಷ್ಟು ಉದ್ಯೋಗ ದೊರಕಿದೆ. ಖುಷಿ ಖುಷಿಯಿಂದ ಅವರೆಲ್ಲ ಅಲ್ಲಿ ಕೆಲಸಕ್ಕೆ ಹೋಗುತ್ತಿರುತ್ತಾರೆ.

ಈ ಫ್ಯಾಕ್ಟರಿ ಊರಿಗೆ ವರವಾಗುವುದಕ್ಕಿಂತ ಶಾಪವಾಗಿಯೇ ಪರಿಣಮಿಸಿದೆ. ಏಕೆಂದರೆ ಈ ಫ್ಯಾಕ್ಟರಿಯ ರಾಸಾಯನಿಕ ತ್ಯಾಜ್ಯವೆಲ್ಲ ನಮ್ಮ ಹಿರೇಹಳ್ಳದ ಪಾಲಾಗುತ್ತಿದೆ. ಪಾಲಿಫೈಬರ್ಸ್ನ ತ್ಯಾಜ್ಯದಿಂದ ಹಳ್ಳದ ಸ್ಫಟಿಕ ಸದೃಶ ನೀರು ವಿಷಪೂರಿತವಾಗುತ್ತಿದೆ!

ಒಮ್ಮಮ್ಮೆ ನೀರು ಹಸಿರುಗಟ್ಟಿ ಮೀನು ಏಡಿ ಮುಂತಾದ ಜಲಚರಗಳೆಲ್ಲ ಸತ್ತು ನೀರ ಮೇಲೆ ತೇಲುತ್ತಿರುತ್ತವೆ.ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ನಮ್ಮನ್ನು ರಕ್ಷಿಸುತ್ತದೆ. ಕುಡಿಯುವ ನೀರು, ತಿನ್ನುವ ಅನ್ನ, ಉಸಿರಾಡುವ ಗಾಳಿ, ಪರಿಶುದ್ಧವಾಗಿ ಇದ್ದರೆ ಮಾತ್ರ ನಾವು ಆರೋಗ್ಯವಾಗಿರುತ್ತೇವೆ. ಆರೋಗ್ಯವೇ ಮಹಾಭಾಗ್ಯ ಅಲ್ಲವೇ.

ಈ ಮಹಾಭಾಗ್ಯ ಎಲ್ಲರದಾಗಬೇಕು. ಈ ಭೂಮಿ ಪರಿಶುದ್ಧವಾಗಿ ಮುಂದಿನ ಜನಾಂಗಕ್ಕೆ ಹಸ್ತಾಂತರವಾಗಬೇಕು. ಇದು ಎಲ್ಲರಿಗೂ ತಿಳಿದಿರಲಿ ಅಂತ ಇಷ್ಟೆಲ್ಲ ಹೇಳಬೇಕಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.