‘ನೀರ್ ದೋಸೆ’ ಚಿತ್ರದ ನಾಯಕಿ ಬದಲಾಗಿದ್ದಾಳೆಯೇ? ಹಾಗೊಂದು ಸುದ್ದಿ ಗಾಂಧಿನಗರದಲ್ಲಿ ಗರಿಗರಿ ದೋಸೆಯಂತೆ ಚಲಾವಣೆಯಲ್ಲಿದೆ. ರಮ್ಯಾ ಬದಲಿಗೆ ರಾಗಿಣಿ ಕಾವಲಿ ಮುಂದೆ ತುಪ್ಪ ಹಿಡಿದು ನಿಂತಿದ್ದಾರೆ ಎನ್ನುವುದು ಸುದ್ದಿಯ ಸಾರ. ‘ಇದು ನಿಜವಾ?’ ಎಂದು ಕೇಳಿದರೆ ನಿರ್ದೇಶಕ ವಿಜಯ ಪ್ರಸಾದ್ ಹೇಳಿದ್ದು– ‘ದೋಸೆ ಹಿಟ್ಟಿನಾಣೆಗೂ ಇದು ಸುದ್ದಿಯಲ್ಲ, ಬರಿ ವದಂತಿ’.

ಸದ್ಯಕ್ಕೆ ವಿಜಯ ಪ್ರಸಾದ್ ಅವರಿಗೆ ಬಿಡುವಿಲ್ಲ. ರಮ್ಯಾ ಅವರ ಕಾಲ್ಶೀಟ್ ಗೊಂದಲದಿಂದಾಗಿ ‘ನೀರ್ ದೋಸೆ’ ನೆನೆಗುದಿಗೆ ಬಿದ್ದಿದೆಯಲ್ಲ; ಹಾಗಾಗಿ ಸದ್ಯಕ್ಕವರು ‘ಕಾಮಿಡಿ ಸರ್ಕಲ್’ನಲ್ಲಿ ಮಗ್ನರು. ಈಟೀವಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕಾಮಿಡಿ ಸರ್ಕಲ್’ನಲ್ಲಿ ಎಷ್ಟು ನಗೆದೋಸೆ ಹೊಯ್ದರೂ ಖರ್ಚಾಗುತ್ತಿರುವುದು ಅವರಿಗೆ ಖುಷಿಕೊಟ್ಟಿದೆ. ಈ ಮೊದಲು ‘ಸಿಲ್ಲಿ ಲಲ್ಲಿ’ಯಂಥ ಜನಪ್ರಿಯ ಧಾರಾವಾಹಿ ರೂಪಿಸಿದ್ದ ಅವರಿಗೆ ಈಗ ವಾರಕ್ಕೆರಡು ತಾಸು ಜನರನ್ನು ನಗಿಸುವುದು ಕಷ್ಟವೇನೂ ಆದಂತಿಲ್ಲ.

ಸರ್ಕಲ್ ಕಾಮಿಡಿಯ ನಡುವೆಯೂ ವಿಜಯ ಪ್ರಸಾದ್ ‘ನೀರ್ ದೋಸೆ’ಯನ್ನು ಮರೆತಿಲ್ಲ. ಚುನಾವಣೆ ಮುಗಿಯುವವರೆಗೂ ರಮ್ಯಾ ಅವರು ಸಿನಿಮಾ ಬಗ್ಗೆ ಯೋಚಿಸುವಂತಿಲ್ಲ. ಆ ಕಾರಣದಿಂದಾಗಿ ಅವರು ಬೆಳ್ಳಿತೆರೆ ಮರೆತು ಕಿರುತೆರೆಯತ್ತ ಹೊರಳಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ರಮ್ಯಾ ನಟಿಸುವುದಿಲ್ಲ ಎನ್ನುವ ವದಂತಿಗಳು ಕೂಡ ಹಬ್ಬಿವೆ. ‘ಈ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ. ನನ್ನ ಪಾಲಿಗೆ ಈಗಲೂ ರಮ್ಯಾ ಅವರೇ ನೀರ್ ದೋಸೆಯ ನಾಯಕಿ’ ಎನ್ನುತ್ತಾರೆ ವಿಜಯ ಪ್ರಸಾದ್.

ಈ ನಡುವೆ, ಬೇರೆ ನಿರ್ಮಾಪಕರು ಬೇರೊಂದು ಸಿನಿಮಾ ಮಾಡಿಕೊಡುವಂತೆ ಅವರನ್ನು ಕೇಳಿದ್ದಾರಂತೆ. ಆದರೆ ‘ನೀರ್ ದೋಸೆ’ ಮುಗಿಯುವವರೆಗೆ ಅವರು ಬೇರೆ ಸಿನಿಮಾದ ಬಗ್ಗೆ ಯೋಚಿಸಲು ಸಿದ್ಧರಿಲ್ಲ. ಇಷ್ಟಕ್ಕೂ ಈ ದೋಸೆಪ್ರೇಮದ ಕಾರಣವಾದರೂ ಏನು? ‘ಅದು ನನ್ನ ಮಹತ್ವಾಕಾಂಕ್ಷೆಯ ಸಿನಿಮಾ’ ಎನ್ನುತ್ತಾರೆ. ನನ್ನ ಪಾಲಿಗಷ್ಟೇ ಅಲ್ಲ, ಕನ್ನಡ ಚಿತ್ರರಂಗದ ಪಾಲಿಗೂ ಇದೊಂದು ವಿಶಿಷ್ಟ ಚಿತ್ರವಾಗಲಿದೆ ಎನ್ನುವುದು ಅವರ ಆತ್ಮವಿಶ್ವಾಸದ ಮಾತು.

ಅಂದಹಾಗೆ, ‘ನೀರ್ ದೋಸೆ’ ಕಥೆ ಹುಟ್ಟಿದ್ದೊಂದು ಕವಿಸಮಯದಂಥ ಸಂದರ್ಭ. ವಿಜಯ ಪ್ರಸಾದ್ ಮನೆಯ ಪಕ್ಕ ಇರುವ ಗೆಳೆಯರ ಮನೆಯಂಗಳದಲ್ಲಿ ಒಂದು ದಾಸವಾಳದ ಗಿಡವಿದೆ. ಈ ಗಿಡದಲ್ಲೇನೂ ವಿಶೇಷವಿಲ್ಲ. ಆದರೆ, ಒಮ್ಮೆ ಹೂ ಪಡೆಯುವ ಸಂದರ್ಭದಲ್ಲಿ ಗೆಳೆಯರ ಕೈ ಇವರ ಕೈಗೆ ತಾಕಿತಂತೆ. ತಕ್ಷಣವೇ ಮೈಯಲ್ಲಿ ಮಿಂಚು ಹರಿದಂಥ ಅನುಭವ. ಮಾತಿಗೆ ಸಿಕ್ಕದ ದಿವ್ಯ ಅನುಭವವೊಂದು ಮನಸ್ಸಿಗೆ ತಾಕಿದಂತನ್ನಿಸಿತು. ಯಾವುದೋ ನೆಪಗಳಲ್ಲಿ ಬೆಸೆದುಕೊಳ್ಳುವ ಸಂಬಂಧಗಳ ಕುರಿತು ನೂರೆಂಟು ಯೋಚನೆಗಳು ವಿಜಯ ಪ್ರಸಾದ್ ಮನಸ್ಸಿನಲ್ಲಿ ಉಂಟಾದವು. ಆ ಅನುಭವವೇ ‘ನೀರ್ ದೋಸೆ’ಯ ಮೂಲ. ಬೋಧಿಯಂತೆ ಕಂಡ ದಾಸವಾಳ ದೋಸೆಯ ರೂಪು ತಾಳಿದೆ; ಈ ದೋಸೆಯ ನೆಪದಲ್ಲಿ ಸಂಬಂಧಗಳು ಬೆಸೆದುಕೊಳ್ಳುವ ಮಾನವೀಯ ಕಥನ ಚಿತ್ರದ್ದು.

ಚುನಾವಣೆ ನಂತರ ರಮ್ಯಾ ಅವರು ತಮ್ಮ ಚಿತ್ರದಲ್ಲಿ ಅಭಿನಯಿಸುತ್ತಾರೆ ಎನ್ನುವ ನಿರೀಕ್ಷೆ ಮತ್ತು ವಿಶ್ವಾಸ ಎರಡನ್ನೂ ವಿಜಯ ಪ್ರಸಾದ್ ಇನ್ನೂ ಉಳಿಸಿಕೊಂಡಿದ್ದಾರೆ. ಹಿಟ್ಟು ಹುಳಿಯಾದಷ್ಟೂ ದೋಸೆ ಗರಿಗಟ್ಟುತ್ತದೆ ಎನ್ನುವುದು ಅವರ ನಂಬಿಕೆ. ಅಷ್ಟು ಮಾತ್ರವಲ್ಲ, ನಗಿಸುವುದರಲ್ಲಿ ಸ್ಪೆಷಲಿಸ್ಟ್ ಆದ ಅವರಿಗೆ ನಗುವಿನ ಹಿಂದಿನ ವಿಷಾದದ ಅರಿವೂ ಇದ್ದಂತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.