ನಾಗಮಂಗಲ: ದೇವಾಲಯಗಳು ಅಭಿವೃದ್ಧಿ ಹೊಂದಬೇಕಾದರೆ ಅರ್ಚಕರೇ ಮೂಲ ಕಾರಣ ಎಂದು ಶ್ರೀರಂಗಪಟ್ಟಣದ ಆಗಮ ಜ್ಯೋತಿಷ ವಿದ್ವಾಂಸ ಡಾ.ಭಾನುಪ್ರಕಾಶ್ ಶರ್ಮಾ ಅಭಿಪ್ರಾಯಪಟ್ಟರು.

ಅವರು ಈಚೆಗೆ ತಾಲ್ಲೂಕಿನ ಆದಿಚುಂಚನಗಿರಿ ಕ್ಷೇತ್ರದಲ್ಲಿ ಮಠದ ವತಿಯಿಂದ ಆಯೋಜಿಸಿದ್ದ 6ನೇ ವರ್ಷದ ರಾಜ್ಯಮಟ್ಟದ ಅರ್ಚಕರ ವೃತ್ತಿ ಶಿಕ್ಷಣ ಶಿಬಿರದಲ್ಲಿ ಮಾತನಾಡಿದರು.

ಶ್ರದ್ಧೆ, ಭಕ್ತಿ, ಪೂಜಾ ಕ್ರಮದ ನಿಖರ ಮಾಹಿತಿ ಮುಂತಾದವುಗಳನ್ನು ಅರ್ಚಕ ಹೊಂದಿದ್ದರೆ ದೇವಾಲಯಗಳು ಅಭಿವೃದ್ಧಿ ಹೊಂದುವುದೇ ಅಲ್ಲದೇ ಪುರಾತನ ಸಂಸ್ಕಾರ ಹಾಗೂ ಮೌಲ್ಯಗಳನ್ನು ಉಳಿಸುವಲ್ಲಿ ಕೂಡ ಆತನ ಪಾತ್ರ ಮಹತ್ತರವಾದುದು ಎಂದು ಹೇಳಿದರು.

ಕಾಲಭೈರವೇಶ್ವರ ಸಂಸ್ಕೃತ ವೇದಾಗಮ ಮಹಾವಿದ್ಯಾಲಯದ ಪ್ರಾಂಶುಪಾಲ ಹಾಗೂ ಶಿಬಿರದ ನಿರ್ದೇಶಕ ಪ್ರೊ.ಸಿ. ನಂಜುಂಡಯ್ಯ, ವಿದ್ವಾಂಸ ಪ್ರೊ.ಎಸ್. ಗೋವಿಂದಭಟ್, ಡಾ.ಮಧುಸೂಧನ ಅಡಿಗ, ಜ್ಯೋತಿಷ ವಿದ್ವಾಂಸ ಡಾ.ಎನ್.ಎಸ್. ವಿಶ್ವಪತಿಶಾಸ್ತ್ರಿ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.