ಲೋಕಸಭಾ ಚುನಾವಣೆ ಸಮೀಪಿಸಿದೆ. ಹಲವಾರು ವಿವಾದಗಳು, ನಿರ್ಧಾರಗಳು ಚುನಾವಣಾ ವಿಚಾರಗಳಾಗಿವೆ. ಇವುಗಳನ್ನು ಆಧರಿಸಿ ಸಿದ್ಧಪಡಿಸಲಾದ ವಿಡಂಬನಾತ್ಮಕ ಸಂಭಾಷಣೆ ರೂಪದ ಬರಹ ಇದು. ಇಲ್ಲಿ ಬರುವ ಪಾತ್ರಗಳು ಮತ್ತು ವಿಷಯಗಳು ಯಾವೊಬ್ಬ ವ್ಯಕ್ತಿಯನ್ನು ಅಥವಾ ಪಕ್ಷವನ್ನು ಉಲ್ಲೇಖಿಸಿ ಬರೆದುದು ಅಲ್ಲ.

ಮಂತ್ರಿ: ಮಹಾರಾಜರಿಗೆ ತಮ್ಮ ಮಂತ್ರಿಗಳು ಮಾಡುವ ನಮಸ್ಕಾರಗಳು..

ರಾಜ: ಮಂತ್ರಿಗಳೇ ರಾಜ್ಯದಲ್ಲಿ ನಡೆಯುವ ಕಲಾಪಗಳ ಬಗ್ಗೆ ತಿಳಿಸಿ. ಏನಾದರೂ ಚರ್ಚಾ
ಗ್ರಾಸವಾದ ವಿಷಯವಿದೆಯೇ?

ಮಂತ್ರಿ: ಹೌದು ಮಹಾರಾಜ. ಪ್ರಸ್ತುತ ಸಮಯದಲ್ಲಿ ಕೇಂದ್ರದ ಆಯಿಲ್ ಮೊಯಿಲಿ ನದಿಯನ್ನೇ ತಿರುಗಿಸಿ ಕಲಿಯುಗದ ಭಗೀರಥ ಆಗಬೇಕೆಂದು ಹೊರಟಿದ್ದಾರೆ. ಅಂದಿನ ಭಗೀರಥ ದೇವಲೋಕದಿಂದ ಗಂಗೆಯನ್ನು ಭೂಮಿಗೆ ಕರೆದುಕೊಂಡು ಬಂದ.. ಆದರೆ ಇವರು ಭಗೀರಥನ ಮುಖವಾಡ ಹೊತ್ತುಕೊಂಡು ಒಬ್ಬರ ಬಾಯಿಯಿಂದ ಕಿತ್ತು ಮತ್ತೊಬ್ಬರ ಬಾಯಿಗೆ ತುರುಕಿಸುವಂತಹ ಪ್ರಯತ್ನ ಮಾಡುತ್ತಿದ್ದಾರೆ ಪ್ರಭುಗಳೇ..

ರಾಜ: ಅಯ್ಯೋ.. ಸ್ವಲ್ಪ ಇಂಗ್ಲೀಷ್, ಪುರಾಣ ಎಲ್ಲಾ ಬಿಟ್ಟು ಅರ್ಥವಾಗುವ ಹಾಗೆ ಬಿಡಿಸಿ ಹೇಳಿ ಮಂತ್ರಿಗಳೆ. ಕ್ರಿಕೆಟ್ ಪಂದ್ಯಾಟದಲ್ಲಿ ಭಾರತ ತಂಡದ ಇತ್ತೀಚಿನ ಕಳಪೆ ಪ್ರದರ್ಶನ ನೋಡಿ ನೋಡಿ ರೋಸಿ ಹೋಗಿ ತಲೆನೋವಾಗಿದೆ. (ಸೇವಕರಿಗೆ ಆದೇಶ) ಯಾರಲ್ಲಿ... ಸ್ವಲ್ಪ ನವರತ್ನ ಎಣ್ಣೆ ತನ್ನಿ.....

ಮಂತ್ರಿ: ಕ್ರಿಕೆಟ್ ಬಿಡಿ ರಾಜ.. ಎಣ್ಣೆ ಈಗ ಇಲ್ಲದಿದ್ದರೂ ರಾತ್ರಿಯಾದರೂ ಹಾಕಿಕೊಳ್ಳಬಹುದು. ಈಗ ಚುನಾವಣೆಗೆ ಬನ್ನಿ. ನಮ್ಮ ಇಂಧನ ಮೊಯಿಲಿ ₨12 ಸಾವಿರ ಕೋಟಿ ಖರ್ಚು ಮಾಡಿ ಕರಾವಳಿಯತ್ತ ಹರಿಯುತ್ತಿರುವ ನೇತ್ರಾವತಿ ನದಿಯ ಉಗಮ ಸ್ಥಳವನ್ನೇ ತಿರುಗಿಸಿ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ ಜಿಲ್ಲೆಗಳಿಗೆ ಕೊಳವೆಗಳ ಮುಖಾಂತರ ನೀರು ಬಿಡುವ ಯೋಜನೆಗೆ ಕೈಹಾಕಿದ್ದಾರೆ. ಹೀಗೆ ಮಾಡಿದರೆ ದಕ್ಷಿಣ ಕನ್ನಡದ ಜನರಿಗೆ ನೀರಿನ ಬರ ಉಂಟಾಗುತ್ತದೆ. ಇದರಿಂದಾಗಿ ಕರಾವಳಿಯ ಮೀನುಗಾರರ ಹೊಟ್ಟೆಗೆ ತಣ್ಣೀರು ಬಟ್ಟೆ ಎನ್ನುವ ಪರಿಸ್ಥಿತಿ ಬರಬಹುದು ಮಹಾರಾಜ.

ರಾಜ: ಹಾಹಾಹಾ......! ಎಂತಹ ಘೋರ ಕಲಿಯುಗ ಮಂತ್ರಿ. ಹಣ ಕೊಟ್ಟು ನದಿಯನ್ನು ತಿರುಗಿಸುವ ಕಾಯಕವೇ..? ನೀರಿನ ಕೊರತೆಯನ್ನು ನೀಗಿಸಲು ಪರ್ಯಾಯ ಮಾರ್ಗ ಹುಡುಕುವ ಬದಲು ಮತ್ತೊಬ್ಬರ ಹೊಟ್ಟೆಗೆ ಹೊಡೆಯುವುದು ತಪ್ಪಲ್ಲವೇ? ಅದಕ್ಕೆಂದು ಖರ್ಚು ಮಾಡುವ ಹಣದ ಅರ್ಧದಷ್ಟಾದರೂ ಕರ್ನಾಟಕದ ಬಡ ಜನರಿಗೆ ನೀಡಿದ್ದರೆ, ಅದೆಷ್ಟೋ ಮಂದಿ ನೆಮ್ಮದಿಯ ಜೀವನ ಸಾಗಿಸ ಬಹುದಿತ್ತೇನೋ?....ಮೂರ್ಖತನದ ಪರಮಾವಧಿ ಅಂದರೆ ಇದೇ ಅನಿಸುತ್ತದೆ ಮಂತ್ರಿ ಅಲ್ಲವೇ?

ಮಂತ್ರಿ: ಎಲ್ಲಾ ರಾಜಕೀಯ ಮಹಾರಾಜ.. ರಾಜಕೀಯ.

ರಾಜ: ಶಕುನಿಯ ರಾಜಕೀಯದಿಂದ ಮಹಾಭಾರತ ಯುದ್ಧವಾಯಿತು. ಹೀಗೆ ನಡೆದರೆ ಕರ್ನಾಟಕವೇ ಇಬ್ಭಾಗವಾದೀತು ಮಂತ್ರಿ. ನೇತ್ರಾವತಿಯನ್ನು ತಿರುಗಿಸುವ ಬದಲು ಬೇರೆ ಪರ್ಯಾಯ ಮಾರ್ಗ ಯಾವುದು ಮಂತ್ರಿ?

ಮಂತ್ರಿ: ಕೇವಲ ₨ 230 ಕೋಟಿ ಖರ್ಚು ಮಾಡಿದರೆ ಎಲೆಮಲ್ಲಪ್ಪ ಜಲಾಶಯದಿಂದ ಕೋಲಾರ ಜಿಲ್ಲೆಯಲ್ಲಿರುವ ಪಾಲಾರ್ ಜಲಾಶಯಕ್ಕೆ 32 ಕಿಲೋಮೀಟರ್ ಕೊಳವೆ ಹಾಕಿ ನೀರಿನ ಪೂರೈಕೆ ಮಾಡಿ ಆ ಐದು ಜಿಲ್ಲೆಗಳ ನೀರಿನ ಸಮಸ್ಯೆಯನ್ನು ನೀಗಬಹುದು. ನಮ್ಮ ಪೂಜಾರಿ ಸಾಹೇಬರು ಕೂಡ ಇದೇ ಮಾತನ್ನು ಹೇಳಿದ್ದಾರೆ ಮಹಾರಾಜ.

ರಾಜ: ಹಾ.. ಮಂತ್ರಿ ನಮ್ಮ ಪೂಜಾರಿ ಸಾಹೇಬರ ವಿಷಯ ತೆಗೆದಾಗ ಒಂದು ನೆನಪಿಗೆ ಬಂತು. ನಿಮ್ಮ ಆಯಿಲ್ ಮೊಯಿಲಿಯ ಮಗ ಹ್ಯಾಪಿ ಮೊಯಿಲಿ ಮಂಗಳೂರು ಕ್ಷೇತ್ರದಿಂದ ಸಂಸದನ ಸ್ಥಾನಕ್ಕೆ ಚುನಾವಣೆಗೆ ನಿಲ್ಲಲು ಆಕಾಂಕ್ಷಿಯಾಗಿದ್ದರು ಅಲ್ವಾ..? ಆದರೆ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಆಜಾದ್ ಸಾಹೇಬರು ಅವರನ್ನು ಪಟ್ಟಿಯಿಂದ ದೂರ ಇಟ್ಟಿದ್ದರಂತೆ. ಅದಕ್ಕೆ ತಕ್ಕ ಹಾಗೆ ಚುನಾವಣಾಧಿಕಾರಿಗಳು ಅವರ ಮನವಿಯನ್ನು ಸರಿಯಿಲ್ಲ ಎಂದು ತಿರಸ್ಕರಿಸಿದರಂತೆ. ಅಲ್ಲಾ.. ಮಂತ್ರಿ.. ಕೇಂದ್ರದ ಸಚಿವರ ಮಗನಿಗೆ ಸರಿಯಾಗಿ ಮನವಿ ಕೊಡೋಕೂ ಗೊತ್ತಿಲ್ಲ ಅಂದರೆ ನೀವು ನಂಬುತ್ತೀರಾ? ಈ ಎತ್ತಿನಹೊಳೆ ಇಷ್ಟು ಬಿಸಿಯಾಗುತ್ತಾ ಇರುವಾಗ ನಮ್ಮ ಬಿಜೆಪಿ ಯಾಕೆ ತಣ್ಣಗಾಗಿದೆ ಮಂತ್ರಿ?

ಮಂತ್ರಿ: ಮೊನ್ನೆ ಮೋದಿಯವರು ಮಂಗಳೂರಿಗೆ ಬಂದಿದ್ದರು ಅಲ್ಲವೇ ಮಹಾರಾಜ.. ಅದಕ್ಕೆ ಈ ಸಲ ಎಲ್ಲಾನೂ ಮೋದಿ ಮ್ಯಾಜಿಕ್ ಅಂದುಕೊಂಡು ಬಿಟ್ಟಿದ್ದಾರೆ ಎಂದು ಕಾಣುತ್ತದೆ. ನಮ್ಮ ಕಟೀಲರ ಧ್ವನಿ ಸ್ವಲ್ಪ ಕಡಿಮೆಯಾದಂತೆ ಕಾಣುತ್ತದೆ. ಯಾರು ಎಷ್ಟು ಹೋರಾಟ ಮಾಡುತ್ತಾರೆ ನೋಡಿ ಕೊನೆಗೆ ತನ್ನ ಧ್ವನಿ ಎತ್ತುತ್ತಾರೋ.. ಅಥವಾ ಪೂಜಾರಿ ಸಾಹೇಬರಿಗೆ ಟಿಕೆಟ್ ಸಿಕ್ಕಿತು, ಇನ್ನು ಚುನಾವಣೆ ಹೆಂಗಪ್ಪಾ.. ಎಂದು ತಲೆಕೆಡಿಸಿಕೊಂಡು ಕುಳಿತಿದ್ದಾರೋ ಏನೋ ಒಂದೂ ತಿಳೀತಿಲ್ಲ. ಆದರೆ ಪೂಜಾರಿ ಸಾಹೇಬರು ನೇತ್ರಾವತಿ ನಮ್ಮದು ಅಂತ ಆಯಿಲ್ ಮೊಯಿಲಿಗೆ ಸೆಡ್ಡು ಹೊಡಿಲಿಕ್ಕೆ ನಿಂತಿದ್ದಾರೆ. ಕೇಂದ್ರ ಮತ್ತು ರಾಜ್ಯ ಮುಖ ಮುಖ ನೋಡಿಕೊಂಡರೂ ಬಾಲ ಮಾತ್ರ ಒಂದೇ ಅನ್ನುವುದು ಮರಿಯುವಂತಿಲ್ಲ.

ರಾಜ: ಅದೂ ಹೌದು. ಬಿಜೆಪಿಯಿಂದ ನಮ್ಮ ನಗುವಿನ ಸರದಾರ ಎತ್ತಿನಹೊಳೆ ಯೋಜನೆಗೆ ಹಸಿರು ನಿಶಾನೆ ತೋರಿದ್ದರಂತೆ. ಯಾರದ್ದು ಏನೂ ಇಲ್ಲ... ತನ್ನದೂ ಸ್ವಲ್ಪ ಇರಲಿ ಅಂತ ಏನೋ... . ಅವರದ್ದೂ ಕುರ್ಚಿ ಭೂಕಂಪ ಬಂದ ಹಾಗೆ ಅಲುಗಾಡುತ್ತಿದೆ. ಪ್ರಾಯಶಃ ಯಾವಾಗ ತಲೆಕೆಳಗಾಗಬಹುದು ಎಂದು ಹೇಳಲಿಕ್ಕೆ ಆಗುವುದಿಲ್ಲ ಅನ್ನುವಂತಹ ಪರಿಸ್ಥಿತಿ. ಇಲ್ಲಿ ಠುಸ್ಸೆನ್ನುವ ಪಟಾಕಿಯಾಗಿದ್ದಕ್ಕೆ ಅಲ್ಲಿ ಹೋಗಿ ಜಾತಿ ರಾಜಕೀಯಕ್ಕೆ ಕೈ ಹಾಕಿ ರೋದು... ಇವರದ್ದೂ ಡಿಮ್ಯಾಂಡು ಬೆಳೆಸೋಕೆ ಚಿಕ್ಕ ಪ್ರಯತ್ನ ಅಲ್ವಾ ಮಂತ್ರಿ..?

ಮಂತ್ರಿ: ಹೌದು ಮಹಾರಾಜ. ಈ ಹಿಂದೆ ಕೃಷ್ಣಾ ಮೇಲ್ದಂಡೆ ಯೋಜನೆ ಮುಗಿಸಲು ₨ 120 ಕೋಟಿಯ ಅಂದಾಜು ಮೊತ್ತ ಹೇಳಿ ಯೋಜನೆ ಮುಗಿಯುವಾಗ ₨10,371.67 ಕೋಟಿ ಮುಗಿದಿತ್ತು. ಅದನ್ನು ಕಾರ್ಯಗತಗೊಳಿಸಲು ತೆಗೆದುಕೊಂಡ ಸಮಯ ಬರೋಬ್ಬರಿ 42 ವರ್ಷ. ನೇತ್ರಾವತಿ ತಿರುವು ಯೋಜನೆಗೆ ಅಂದಾಜು ಮೊತ್ತ ₨ 12 ಸಾವಿರ ಕೋಟಿ ಎಂದು ಹೇಳಿದ್ದರೂ ಮುಗಿಯುವಹಂತದಲ್ಲಿ ಇದರಮೂರು ಪಟ್ಟು ಆಗಬಹುದು. ಅಷ್ಟೇ ಯಾಕೆ ಈ ಯೋಜನೆ ತಡೆಗಳನ್ನು ಭೇದಿಸಿಕೊಂಡು ತಯಾರಿಯಾಗಿ ನಿಲ್ಲುತ್ತದೆ ಎನ್ನುವ ಗ್ಯಾರಂಟಿಯೂ ಇಲ್ಲ ಮಹಾರಾಜ.

ರಾಜ: ಅಲ್ಲಾ ಮಂತ್ರಿಗಳೇ... ತನ್ನ ಅಧಿಕಾರ ಹೋದರೂ ಪರವಾಗಿಲ್ಲ. ನೇತ್ರಾವತಿಯನ್ನು ಮಾತ್ರ ಚಿಕ್ಕಬಳ್ಳಾಪುರಕ್ಕೆ ತಂದೇ ತೀರುತ್ತೇನೆ ಎಂದು ಆಯಿಲ್ ಮೊಯಿಲಿ ಹೇಳಿದ್ದಾರೆ ಅಲ್ಲವೇ... ?ಅಷ್ಟಕ್ಕೂ ನಮ್ಮ ದಕ್ಷಿಣ ಕನ್ನಡದವರೇನು ಮೂರ್ಖರೇ? ಬಿಟ್ಟು ಕೊಡಲು?

ಮಂತ್ರಿ: ಈಗಿನ ಪರಿಸ್ಥಿತಿಯಲ್ಲಿ ರಾಜಕಾರಣಿಗಳ ಎದುರು ನಿಲ್ಲಬೇಕಾದರೆ ಹುಟ್ಟಿನಿಂದಲೇ ಕಾಂಪ್ಲಾನ್ ಬಾಯ್ ಆಗಬೇಕು ಮಹಾರಾಜ. ಮೊದಲೇ ಆಯಿಲು ಸಚಿವ. ಎದುರು ಬಂದವರ ಮೇಲೆ ಆಯಿಲ್ ಸುರಿದು ಪ್ರೈ ಮಾಡಬಹುದು.

ರಾಜ: ಅಲ್ಲಾ ಮಂತ್ರಿಗಳೇ...ಏನಾದರೂ ಈ ಯೋಜನೆ ಜಾರಿಗೆ ಬಂದರೆ ಇದರಲ್ಲಿ ಭಾಗಿಯಾಗುವ ಪ್ರತಿಯೊಬ್ಬನಿಗೂ ಹಣದ ಸುರಿಮಳೆ
ಯಲ್ಲವೇ? ಮೊದಲೇ ರಾಜ್ಯ ಸರ್ಕಾರ ಸಾಲ ತೀರಿಸಲು ಇದ್ದಬದ್ದ ಸೌಧಗಳನ್ನು ಅಡವಿಗೆ ಇಟ್ಟಿದೆ. ಸಾಲದ ಮಳೆಯಾಗಿ ಕರ್ನಾಟಕವನ್ನೇ ಅಡವು ಇಡಬೇಕಾದ ಸಂದರ್ಭವೂ ಒದಗಬಹುದು ಮಂತ್ರಿ.

ಮಂತ್ರಿ: ಈ ಎಲ್ಲ ಸಮಸ್ಯೆಗೆ ಪರಿಹಾರ ಏನು ಪ್ರಭು? ನೀವೆ ನ್ಯಾಯ ಹೇಳಬೇಕು.

ರಾಜ: ಇಲ್ಲಿ ನಾನಲ್ಲ ನ್ಯಾಯ ಹೇಳಬೇಕಾದುದು ಮಂತ್ರಿ. ನೇತ್ರಾವತಿ ನದಿಯನ್ನು ಉಳಿಸಲು ದಕ್ಷಿಣ ಕನ್ನಡ ಜಿಲ್ಲೆಯೊಂದಿಗೆ 40 ವರ್ಷಗಳ ನಂತರ ಮೀನು ಮಾರುಕಟ್ಟೆಗೆ ಬಾಗಿಲು ಹಾಕಿದ ಸಾಮಾನ್ಯ ಜನರು ನ್ಯಾಯ ಹೇಳಬೇಕು. ಇದು ಪ್ರಜಾಪ್ರಭುತ್ವ ರಾಷ್ಟ್ರ ಮಂತ್ರಿ. ಇಲ್ಲಿನ ಜನರು ಎದ್ದರೆ ಬಾಂಬ್ಗಿಂತ ಭೀಕರವಾಗಿರುತ್ತಾರೆ. ದಕ್ಷಿಣ ಕನ್ನಡದ ಪ್ರತಿಯೊಬ್ಬನೂ ಈ ಯೋಜನೆಯ ವಿರುದ್ಧ ನಿಂತರೆ ಯಾವುದೇ ಮಂತ್ರಿಯೂ ಕೂಡ ಏನೂ ಮಾಡಲಾರ. ಎಲ್ಲವನ್ನೂ ಜನರಿಗೇ ಬಿಟ್ಟು ಬಿಡೋಣ ಮಂತ್ರಿಗಳೇ.. ಇದೇ ಅಂತಿಮ ನಿರ್ಣಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.