ಶನಿವಾರ, ಜನವರಿ 18, 2020
23 °C

‘ತಂಡದಲ್ಲಿ 15 ಆಟಗಾರರಿಗೆ ಅವಕಾಶ ನೀಡಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಅಂತರ ಕಾಲೇಜು ಮತ್ತು ಅಂತರ ಶಾಲಾ ಟೂರ್ನಿಗಳಲ್ಲಿ  ಒಂದು ತಂಡದಲ್ಲಿ 11 ಆಟಗಾರರ ಬದಲು 15 ಆಟ ಗಾರರಿಗೆ ಅವಕಾಶ ನೀಡುವುದು ಒಳ್ಳೆ ಯದು ಎಂಬ ಸಲಹೆಯನ್ನು ಸಚಿನ್‌ ತೆಂಡೂಲ್ಕರ್‌ ಅವರು ಮುಂಬೈ ಕ್ರಿಕೆಟ್‌ ಸಂಸ್ಥೆಗೆ  ನೀಡಿದ್ದಾರೆ.ಹಾಗಾದಲ್ಲಿ ಮುಂಬೈನಲ್ಲಿ ಹೆಚ್ಚಿನ ಸಂಖ್ಯೆಯ ಪ್ರತಿಭೆಗಳನ್ನು ಬೆಳಕಿಗೆ ತರಲು ಸಾಧ್ಯ ಎಂಬ ಅಭಿಪ್ರಾಯ ವನ್ನು ಅವರು ವ್ಯಕ್ತಪಡಿಸಿದ್ದಾರೆ.

ಎಂಸಿಎ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಸಚಿನ್‌, ‘ಮುಂಬೈನಲ್ಲಿ ಕ್ರಿಕೆಟ್‌ ಬೆಳವಣಿಗೆಗೆ ಏನು ಮಾಡಬಹುದು ಎಂಬುದರ ಕುರಿತು ಒಂದು ದಿನ ನಾನು ಹಾಗೂ ಸಹೋದರ ಸಮಾ ಲೋಚನೆ ನಡೆಸಿದ್ದೆವು. ತಂಡವೊಂದ ರಲ್ಲಿ 15 ಆಟಗಾರರಿಗೆ ಅವಕಾಶ ನೀಡುವುದರಿಂದ ಇದು ಸಾಧ್ಯ ಎಂಬ ಅಂಶ ಆಗ ನನ್ನ ಮನಸ್ಸಿಗೆ ಹೊಳೆಯಿತು’ ಎಂದು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)