ರಾಣೆಬೆನ್ನೂರು: ಧರ್ಮ ಕಾರ್ಯಕ್ರಮ ಗಳು ಹೆಚ್ಚು ಹೆಚ್ಚು ನಡೆದಾಗ ಸಮಾಜ ಸುಧಾರಣೆಯಾಗಲು ಸಾಧ್ಯ, ಭಾರತೀಯ ಸಂಸ್ಕೃತಿಯಿಂದ ದೂರ ಉಳಿಯುತ್ತಿರುವ ಯುವ ಜನಾಂಗಕ್ಕೆ ಸೂಕ್ತ ಮಾರ್ಗದರ್ಶನ ನೀಡಿದಾಗ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ಮಾಜಿ ಶಾಸಕ ಜಿ.ಶಿವಣ್ಣ ಹೇಳಿದರು.

ನಗರದ ಮೇಡ್ಲೇರಿ ರಸ್ತೆಯ ಆದಿಶಕ್ತಿ ಸಭಾಭವನದಲ್ಲಿ ಬುಧವಾರ ನಡೆದ ಐರಾವತ ಕ್ಷೇತ್ರ ಹೊಳೆಮಠ ಐರಣಿ ಮಠದ ಸಂಸ್ಥಾನಾಧಿಪತಿ ಗುರುಬಸವ ದೇಶಿಕೇಂದ್ರ ಸ್ವಾಮೀಜಿ ಪಟ್ಟಾಭಿಷಿಕ್ತ ರಾಗಿ 4 ದಶಕಗಳ ಕಾಲ ಕ್ಷೇತ್ರ ಸೇವೆ ಸಲ್ಲಿಸಿದ ಪ್ರಯುಕ್ತ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮ ಸಭೆ, ಸಾಮೂಹಿಕ ವಿವಾಹ ಮತ್ತು ಪಟ್ಟಾಭಿಷೇಕ ಮಹೋತ್ಸವದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಐರಣಿ ಹೊಳೆಮಠ ಸಿದ್ಧಾರೂಢ ಪರಂಪರೆಯಲ್ಲಿ ಬಂದಿದ್ದು, ಜಾತ್ಯತೀತ ಮಠವಾಗಿದೆ, ಅಡ್ಡಪಲ್ಲಕ್ಕಿ ಮಹೋತ್ಸವದ ಸವಿನೆನಪಿಗಾಗಿ ರಾಣೆಬೆನ್ನೂರಿನ ಮೇಡ್ಲೆರಿ ಕ್ರಾಸ್ನಲ್ಲಿ ಸುಕ್ಷೇತ್ರ ಹೊಳೆಮಠದ ಮಹಾದ್ವಾರ ನಿರ್ಮಿಸಲು ಶಂಕು ಸ್ಥಾಪನೆಯಾಗ ಬೇಕು ಎಂದರು.

ರುಕ್ಮಿಣಿ ಸಾವುಕಾರ ಮಾತನಾಡಿ, ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅನ್ಯಾಯ, ಅನೀತಿ, ಅತ್ಯಾಚಾರ ನಿರ್ಮೂಲನೆಗೆ ಧರ್ಮ ಕಾರ್ಯಗಳು ಅವಶ್ಯ ಎಂದರು.

ಗುರುಬಸವ ಸ್ವಾಮೀಜಿ, ಲಿಂಗದಹಳ್ಳಿ ವೀರಭದ್ರಸ್ವಾಮೀಜಿ, ಸ್ವಾಮಿ ಪ್ರಕಾಶಾನಂದ ಸ್ವಾಮೀಜಿ, ಡಾ.ಮಹಾಂತೇಶ್ವರ ಸ್ವಾಮೀಜಿ, ಗಂಗಾಪುರದ ಮರುಳಶಂಕರ ಸ್ವಾಮೀಜಿ, ಈಶ್ವರಾನಂದ ಸ್ವಾಮೀಜಿ ಮತ್ತು ರುಕ್ಮಿಣಿ ಸಾವುಕಾರ, ಕೆ.ಎಂ.ಬಂದಮ್ಮನವರ, ಅಂದಾನಪ್ಪ ಅಸುಂಡಿ, ಸಣ್ಣತಮ್ಮಪ್ಪ ಬಾರ್ಕಿ, ಎಂ.ಎಸ್.ಅರಕೇರಿ ಅನಿಸಿಕೆಗಳನ್ನು ಹೇಳಿದರು.

ಸತೀಶ ಮಲ್ಲನಗೌಡ್ರ, ಸಿದ್ದಣ್ಣ ಅಂಬಲಿ, ಡಾ.ಬಿ.ಎಸ್.ಕೇಲಗಾರ, ನಾರಾಯಣಪ್ಪ ಪಾಣಿಬಾತೆ, ರಾಮಣ್ಣ ನಾಯಕ, ಹನುಮಂತಪ್ಪ ಮಡಿವಾಳರ, ಬಸವರಾಜ ಕುಮರಿ, ಎಂ. ಚಿರಂಜೀವಿ, ಎಸ್.ಆರ್.ಬಳ್ಳಾರಿ, ಭಾರತಿ ಜಂಬಿಗಿ, ಗೀತಾ ಜಂಬಿಗಿ, ಪ್ರಕಾಶ ಜೈನ, ಮುದಲಿಂಗಪ್ಪ ಧೂಳೆಹೊಳಿ, ಅಪ್ಪಣ್ಣ ಸಪ್ಪಾಳಿ, ವಿರೂಪಾಕ್ಷಿ ಶೆಟ್ಟರ ಮತ್ತಿತರರು ಉಪಸ್ಥಿತರಿದ್ದರು. ಬಾಬು ಐರಣಿ ಶೆಟ್ಟರ ಸ್ವಾಗತಿಸಿದರು. ಪ್ರೊ.ಬಿ.ಬಿ.ನಂದ್ಯಾಲ ನಿರೂಪಿಸಿದರು. ಪರಮೇಶ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.