ಬೆಂಗಳೂರು: ‘ಆದಿಚುಂಚನಗಿರಿ ಮಠವು ರೈತರ ಶ್ರಮ ಹಾಗೂ ಸಹಕಾ ರದಿಂದ ಬೆಳೆದ ಧಾರ್ಮಿಕ ಕ್ಷೇತ್ರ. ಹೀಗಾಗಿ ಮಠವು ಶ್ರೀಸಾಮಾನ್ಯ ಹಾಗೂ ಕೃಷಿಕರನ್ನು ತಲುಪುವಂತಾ ಗಬೇಕು’ ಎಂದು ಲೇಖಕ ಜಾಣಗೆರೆ ವೆಂಕಟರಾಮಯ್ಯ ಹೇಳಿದರು. ವಿಶ್ವ ಒಕ್ಕಲಿಗರ ಮಹಾ ವೇದಿಕೆಯು ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣ ದಲ್ಲಿ ಬುಧವಾರ ಏರ್ಪಡಿಸಿದ್ದ ಲೇಖಕ ಕೂಡ್ಲೂರು ವೆಂಕಟಪ್ಪ ಅವರ ‘ಅಗಡ ಚಿಕ್ಕಿ ನಾಯಕ್ಸಾನಿ’ ಜನಪದ ಕಥಾ ಸಂಕ ಲನ ಬಿಡುಗಡೆ ಹಾಗೂ ವಿಶ್ವ ಒಕ್ಕಲಿ ಗರ ಮಹಾ ವೇದಿಕೆಯ ಜಯನಗರ ಘಟಕ ಉದ್ಘಾಟಿಸಿ ಮಾತನಾಡಿದರು.

‘ವಿಶ್ವ ಒಕ್ಕಲಿಗರ ಮಹಾ ಸಂಸ್ಥೆಯು ಕುವೆಂಪು ವಿಚಾರಧಾರೆಗಳನ್ನು ಅಳವ ಡಿಸಿಕೊಳ್ಳುವ ಮೂಲಕ ಅಸ್ಥಿತ್ವಕ್ಕೆ ಬಂದಿದೆ. ಅದೇ ರೀತಿಯಲ್ಲಿ ಚುಂಚನ ಗಿರಿ ಮಠವೂ ಕುವೆಂಪು ವಿಚಾರಧಾರೆಗ ಳೊಂದಿಗೆ ಬೃಹತ್ತಾಗಿ ಬೆಳೆಯಬೇಕು. ವಿಚಾರವಾದಿಗಳಾಗಿರುವ ನಿರ್ಮಲಾ ನಂದನಾಥ ಸ್ವಾಮೀಜಿ ಅವರು ಮಠ ವನ್ನು ಆ ದಿಕ್ಕಿನಲ್ಲಿ ಕೊಂಡೊಯ್ಯುವ ಅಗತ್ಯವಿದೆ’ ಎಂದರು.

‘ಇಂದು ಜಾನಪದ ಕ್ಷೇತ್ರ ಕಲುಷಿತ ವಾಗುತ್ತಿದೆ. ಜನಪದ ಲೋಕ ದಲ್ಲಿ ಆಗುತ್ತಿರುವ ವಂಚನೆ, ದ್ರೋಹಗಳಿಂದ ಆತಂಕವಾಗುತ್ತಿದೆ. ನಾನೇ ಎಂದು ಮೆರೆಯುವವರು ಜಾನಪದ ಕ್ಷೇತ್ರದಲ್ಲಿ ಹೆಚ್ಚಾಗಿದ್ದಾರೆ’ ಎಂದು ಹೇಳಿದರು. ‘ಅಂತಹವರ ನಡುವೆ ಕೂಡ್ಲೂರು ವೆಂಕಟಪ್ಪ ಅವರಂತಹವರು ಜನಪದ ಕ್ಷೇತ್ರದ ಹಿರಿಮೆಯನ್ನು ಎತ್ತರಕ್ಕೆ ಏರಿ ಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದ್ದಾರೆ. ಮನುಷ್ಯನಲ್ಲಿ ರೋಮಾಂಚನವನ್ನು ಮೂಡಿಸುವ ಕಲೆಯೇ ಜಾನಪದ ಕಲೆ ಮತ್ತು ಶಕ್ತಿ’ ಎಂದರು.

ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ‘ಇಂದು ಜ್ಞಾನದ ಹೆಸರಿನಲ್ಲಿ ಅಜ್ಞಾನದೆಡೆಗೆ ಸಾಗುತ್ತಿದ್ದೇವೆ. ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ನಮ್ಮ ಮುಂದಿನ ಪೀಳಿಗೆಗೆ ದಾಟಿಸಲು ಸಾಧ್ಯವಾಗದೆ ಹೋದರೆ, ಮುಂದೆ ನಮ್ಮ ಸಮಾಜದ ಪರಿಸ್ಥಿತಿಯನ್ನು ನೆನೆದು ಆತಂಕವಾಗುತ್ತದೆ’ ಎಂದರು.

‘ಸಮಾಜದ ಓರೆಕೋರೆಗಳನ್ನು ಸಾಹಿತಿಗಳು ತಿದ್ದಬೇಕು. ಜನಪದರು ನಮ್ಮ ಸಂಸ್ಕೃತಿಯ ಬೇರುಗಳು. ಅಂತಹ ಬೇರುಗಳ ಮೇಲೆಯೇ ನಮ್ಮ ನಾಗರಿ ಕತೆಯೆಂಬ ಸುಂದರ ಮರ ಬೆಳೆಯಲು ಸಾಧ್ಯವಾಗಿದೆ ಎಂಬುದನ್ನು ನಾವು ಎಂದಿಗೂ ಮರೆಯಬಾರದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.