ಉಡುಪಿ: ‘ಗ್ರಾಮೀಣ ಭಾಗದಲ್ಲಿ ಯಕ್ಷಗಾನ ಪರಂಪರೆಯನ್ನು ಉಳಿಸಿ, ಊರಿನ ಸಾಂಸ್ಕೃತಿಕ ಸಿರಿವಂತಿಕೆ ಹೆಚ್ಚಿಸಲು ಕಾರಣಕರ್ತರಾದ ಅನೇಕ ಯಕ್ಷಗಾನ ಕಲಾವಿದರಿಗೆ ಹೆಚ್ಚಿನ ಪ್ರಸಿದ್ಧಿ ಇಲ್ಲದಿರುವುದರಿಂದ ಅವರ ಸಾಧನೆಯನ್ನು ಗುರುತಿಸುವಲ್ಲಿ ಹಿನ್ನಡೆಯಾಗುತ್ತಿದೆ ಎಂದು ಜಾನಪದ ವಿದ್ವಾಂಸ ಕೆ.ಎಲ್. ಕುಂಡಂತಾಯ ಹೇಳಿದರು.

ಉಡುಪಿಯ ಯಕ್ಷಗಾನ ಕಲಾರಂಗ ಹಿರಿಯ ಯಕ್ಷಗಾನ ಅರ್ಥಧಾರಿ ರಮಾನಾಥ ರಾವ್ ಪವಾರ್ ಅವರಿಗೆ ಕವತ್ತಾರಿನಲ್ಲಿರುವ ಅವರ ಸ್ವಗೃಹ ದಲ್ಲಿ ಇತ್ತೀಚೆಗೆ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಲಾರಂಗದ ಕಾರ್ಯದರ್ಶಿ ಮುರಲಿ ಕಡೆಕಾರ್ ಮಾತನಾಡಿ, ರಮಾನಾಥ ರಾವ್ ಪವಾರ್ ಯಕ್ಷಗಾನದಲ್ಲಿ ಮುಂದುವರೆದಿದ್ದರೆ ಮೇಲ್ಪಂ ಕ್ತಿಯ ಕಲಾವಿದರಾಗಿರುತ್ತಿದ್ದರು ಎಂದರು.

ಕಲಾರಂಗದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಡುಬಿದ್ರಿಯ ಗಜಾನನ ಯಕ್ಷಗಾನ ಕಲಾ ಮಿತ್ರ ಮಂಡಳಿಯ ಜಗನ್ನಾಥ ರಾವ್, ದೇವರಾಜ ರಾವ್, ಭಾಸ್ಕರ ಕುಮಾರ್, ಗಿರಿಜಾ ಪವಾರ್, ಗುರು ಬನ್ನಂಜೆ ಸಂಜೀವ ಸುವರ್ಣ, ಕಲಾ ರಂಗದ ಉಪಾಧ್ಯಕ್ಷ ಎಸ್.ವಿ. ಭಟ್, ಕೆ.ಗಣೇಶ ರಾವ್, ಹಿರಿಯ ಕಲಾವಿದ ರಾದ ನಾರಾಯಣ ಅಂಚನ್, ಅಂಬರೀಶ ಶೆಟ್ಟಿ, ಸುಕುಮಾರ ಶೆಟ್ಟಿ ಉಪಸ್ಥಿತರಿದ್ದರು.

ಪ್ರೊ.ಎಂ.ನಾರಾಯಣ ಹೆಗಡೆ ಸನ್ಮಾನಪತ್ರ ವಾಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.