ಗುರುವಾರ , ಫೆಬ್ರವರಿ 25, 2021
31 °C

‘ರಾಷ್ಟ್ರ ರಾಜಕಾರಣದತ್ತ ಯಡಿಯೂರಪ್ಪ ಚಿತ್ತ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರಾಷ್ಟ್ರ ರಾಜಕಾರಣದತ್ತ ಯಡಿಯೂರಪ್ಪ ಚಿತ್ತ’

ಶಿಕಾರಿಪುರ: ಜಾತಿ–ಭೇದ ಮರೆತು ಗ್ರಾಮಸ್ಥರೆಲ್ಲರೂ ಒಗ್ಗಟ್ಟಿನಿಂದ ಜೀವನ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲಹೆ ನೀಡಿದರು. ತಾಲ್ಲೂಕಿನ ಮತ್ತಿಕೋಟೆ ಗ್ರಾಮದಲ್ಲಿ ಮಂಗಳವಾರ ನೂತನ ಚೌಡೇಶ್ವರಿ ದೇವಸ್ಥಾನ ಉದ್ಘಾಟಿಸಿದ ನಂತರ ನಡೆದ ಧರ್ಮಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮದಲ್ಲಿ ಯಾವುದೇ ಸಮಸ್ಯೆ ಬಂದರೂ ಶಾಂತಿಯಿಂದ ಸಮಸ್ಯೆ ಬಗೆಹರಿಸಿಕೊಂಡು, ಒಂದೇ ತಾಯಿ ಮಕ್ಕಳಂತೆ ಗ್ರಾಮಸ್ಥರು ಜೀವನ ನಡೆಸಬೇಕು ಎಂದರು.ರಾಷ್ಟ್ರ ರಾಜಕಾರಣದತ್ತ ಪಯಣ: ‘ರಾಜ್ಯದಿಂದ ರಾಷ್ಟ್ರ ರಾಜಕಾರಣಕ್ಕೆ ಹೋಗುತ್ತೇನೆ. ಹೋಗುವ ಮುಂಚೆಯೇ ದೇವಸ್ಥಾನ ಉದ್ಘಾಟಿಸಿ ದೇವಿಯ ದರ್ಶನ ಪಡೆದಿದ್ದೇನೆ. ದೆಹಲಿಗೆ ಹೋಗಿ ರಾಜ್ಯದ ಅಭಿವೃದ್ಧಿಗೆ ವಿಶೇಷ ಗಮನ ನೀಡುತ್ತೇನೆ’ ಎಂದು ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿದರು.ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೆ ಶಕ್ತಿ ಮಾತೆಯರು ರಾಕ್ಷಸರನ್ನು ಸಂಹರಿಸಲು ಅವತರಿಸಿದ್ದರು. ಪ್ರಸ್ತುತ ನಮ್ಮ ನಡುವೆ ರಾಕ್ಷಸ ಸಂಸ್ಕೃತಿಯ ಜನರಿದ್ದು, ಅವರ ದುಷ್ಟ ಗುಣಗಳನ್ನು ತೊರೆದು ಸದ್ಗುಣ ಬೆಳೆಸಿಕೊಳ್ಳಬೇಕು ಎಂದರು.ಧರ್ಮಸಭೆಯನ್ನು ಐರಣಿ ಹೊಳೆ ಮಠದ ಬಸವರಾಜದೇಶಿ ಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು.  ಕಾಗಿನೆಲೆ ಕನಕಗುರುಪೀಠದ ನಿರಂಜನಾನಂದಪುರಿ ಸ್ವಾಮೀಜಿ, ಹೊಸದುರ್ಗ ಕನಕ ಗುರುಪೀಠ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ, ಮಟ್ಟಿಕೋಟೆ ಸಿದ್ಧಾರೂಢ ಮಠದ ಅವಧೂತ ಸ್ವಾಮೀಜಿ ಧರ್ಮಸಭೆಯ ನೇತೃತ್ವ ವಹಿಸಿದ್ದರು.ಧರ್ಮದರ್ಶಿ ಕೆಂಗಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.ಸಂಸತ್‌ ಸದಸ್ಯ ಬಿ.ವೈ.ರಾಘವೇಂದ್ರ, ಜೆಡಿಎಸ್ ಮುಖಂಡ ಎಚ್‌.ಟಿ. ಬಳಿಗಾರ್, ವಿಧಾನಪರಿಷತ್ ಮಾಜಿ ಸದಸ್ಯ ಕೆ. ಮಲ್ಲಪ್ಪ, ಉಪನ್ಯಾಸಕ ಬಿ.ಎಲ್‌. ರಾಜು, ಮುಖಂಡರಾದ ನಗರದ ಮಹಾದೇವಪ್ಪ, ಭದ್ರಾಪುರ ಹಾಲಪ್ಪ, ಸಂಕ್ಲಾಪುರ ಹನುಮಂತಪ್ಪ, ವಿಜಯಕ್ಷ್ಮಿ ಕಂಚುಗಾರ್‌, ಕಲ್ಲಪ್ಪ, ಸೋಮಶೇಖರಪ್ಪ ದೊಡ್ಡಲಕ್ಕಪ್ಪ, ನಿಜಲಿಂಗಪ್ಪ, ಪರಮೇಶ್ವರಪ್ಪ, ಸಿ.ಸುದರ್ಶನ್‌, ಬಿ.ಸಿ.ವೇ ಣುಗೋಪಾಲ್‌ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.