ಭಾನುವಾರ, ಜೂನ್ 13, 2021
22 °C
ಗುಜರಾತ್‌ ಗಲಭೆಯಲ್ಲಿ ಮೋದಿ ಪಾತ್ರ: ಸಿಬಲ್‌

‘ಸುಪ್ರೀಂ’ ಸ್ವತಂತ್ರ ತನಿಖಾ ತಂಡ ರಚಿಸಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಗುಜ­ರಾತ್‌ ಗಲಭೆಗೆ ಸಂಬಂಧಿಸಿದಂತೆ ಬಿಜೆಪಿ ಪ್ರಧಾನಿ ಅರ್ಭ್ಯರ್ಥಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆ­ಸು­ವುದನ್ನು ಕಾಂಗ್ರೆಸ್‌ ಮುಂದುವರಿಸಿದೆ.  ‘ಗುಜರಾತ್‌ ಗಲಭೆಗೆ ಸಂಬಂಧಿಸಿ­ದಂತೆ ವಿಶೇಷ ತನಿಖಾ ತಂಡ (ಎಸ್‌ಐಟಿ)ಕ್ಕಿದ್ದ ಅಧಿ­ಕಾರ ಅತ್ಯಲ್ಪ­ವಾಗಿತ್ತು. ಆದ್ದರಿಂದ ಸುಪ್ರೀಂ­ಕೋರ್ಟ್‌ ಸ್ವತಂತ್ರ ತನಿಖಾ ತಂಡ ರಚಿಸಿ ಗಲಭೆಯ ತನಿಖೆಯನ್ನು ಅದಕ್ಕೆ ವಹಿಸಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಮುಖಂಡ ಕಪೀಲ್‌ ಸಿಬಲ್‌ ಶನಿವಾರ ಹೇಳಿದರು.‘ಭ್ರಷ್ಟಾಚಾರ ಪ್ರಕರಣಗಳನ್ನು ನಿರ್ವ­ಹಿ­ಸಲು ಪ್ರಾಮುಖ್ಯತೆ ನೀಡುವು­ದ­ರೊಂದಿಗೆ ಮಾನವೀಯತೆ ಜೀವಂತ­ವಾ­ಗಿಡಲು ಸುಪ್ರೀಂಕೋರ್ಟ್‌ ಸ್ವತಂತ್ರ ತನಿಖಾ ತಂಡ ರಚಿಸಿ ಗುಜರಾತ್‌ ಗಲಭೆಗೆ ಸಂಬಂ­ಧಿಸಿದ ಎಲ್ಲ ಪ್ರಕರಣ­ಗ­ಳನ್ನು ಅದಕ್ಕೆ ನೀಡಿ ಮೇಲ್ವಿಚಾರಣೆ ಮಾಡ­­­ಬೇಕು’ ಎಂದು ಅವರು ಪತ್ರಿಕಾ­ಗೋಷ್ಠಿಯಲ್ಲಿ ಹೇಳಿದರು.‘ಗಲಭೆ ನಡೆದ ಆರು ವರ್ಷಗಳ ನಂತರ  ಎಸ್‌ಐಟಿ ರಚಿಸ­ಲಾ­ಯಿತು. ಈ ತಂಡದಲ್ಲಿದ್ದ ಪೊಲೀಸ್‌ ಅಧಿಕಾರಿಗಳ ವ್ಯಾಪ್ತಿಯಲ್ಲೇ ಗಲಭೆಗಳು ನಡೆದಿತ್ತು. ಗಲಭೆಯ ಬಗ್ಗೆ ಸಿಬಿಐನಂತೆ ತನಿಖೆ ನಡೆ­ಸುವ ಅಧಿಕಾರ ಎಸ್‌ಐಟಿಗೆ ಇಲ್ಲ. ಅದು ಸಾಕ್ಷಿಗಳ ಹೇಳಿಕೆಗಳನ್ನು ದಾಖಲಿಸಿ­ಕೊಳ್ಳ­ಬಹುದು ಅಷ್ಟೇ’ ಎಂದರು.ಕಾಂಗ್ರೆಸ್‌ ನಾಯಕನಾಗಿ ಈ ಹೇಳಿಕೆ­ಗಳನ್ನು ನೀಡುತ್ತಿದ್ದೇನೆಯೇ ಹೊರತು ಸಂಸದ­ನಾಗಿ ಅಥವಾ ದೇಶದ ಕಾನೂನು ಸಚಿವನಾಗಿ ಅಲ್ಲ ಎನ್ನುವು­ದನ್ನು ಅವರು ಸ್ಪಷ್ಟಪಡಿಸಿದರು.ಈ ವಿಷಯವನ್ನು ಮೊದಲೇ ಏಕೆ ಹೇಳಿ­­ರ­ಲಿಲ್ಲ ಎಂದು ಕೇಳಿದ ಪ್ರಶ್ನೆಗೆ ‘ಗಲಭೆ ಸಂತ್ರಸ್ತರ ಪರವಾಗಿ ನಾನು ನ್ಯಾಯಾಲಯಕ್ಕೆ ಹೋಗಿದ್ದೆ’ ಎಂದು ಉತ್ತರಿಸಿದರು.

‘ದೇಶದಲ್ಲಿ ಮೋದಿ ಪರ ಅಲೆ ಇಲ್ಲ. ಪ್ರಾದೇ­­ಶಿಕ ಪ್ರಕ್ಷಗಳೊಂದಿಗೆ ಬಿಜೆಪಿ ಕೈಜೋಡಿ­ಸುತ್ತಿರುವುದು ನೋಡಿದರೆ ಮೋದಿ ಅವರ ವೈಯಕ್ತಿಕ ವರ್ಚಸ್ಸು ಬಿಜೆಪಿಗೆ ಅಗತ್ಯವಿರುವ ಸಂಸದ ಸಂಖ್ಯೆ ತಂದು­ಕೊಡುತ್ತದೆ ಎನ್ನುವುದನ್ನು ಹೇಳ­ಲಾ­ಗದು’ ಎಂದು ಸಿಬಲ್‌ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.