ಶನಿವಾರ, ಫೆಬ್ರವರಿ 27, 2021
31 °C

‘ಹೋರಾಟಕ್ಕೆ ಆಧುನಿಕ ತಂತ್ರಜ್ಞಾನ ಬೇಕು’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಹೋರಾಟಕ್ಕೆ ಆಧುನಿಕ ತಂತ್ರಜ್ಞಾನ ಬೇಕು’

ಪೀಣ್ಯ ದಾಸರಹಳ್ಳಿ: ‘ಸುತ್ತಮುತ್ತಲಿನ ಬೆಳವಣಿಗೆ­ಯನ್ನು ಗಮನದಲ್ಲಿ ಇಟ್ಟುಕೊಂಡು ಆಧುನಿಕತೆಯ ತಂತ್ರಜ್ಞಾನವನ್ನು ಬಳಸಿ ಹೋರಾಟ ರೂಪಿಸಬೇಕು’  ಎಂದು ಡಾ.ಬಿ.ಆರ್‌. ಅಂಬೇಡ್ಕರ್‌ ಶತಮಾನೋತ್ಸವ ಸಮಿತಿ ಟ್ರಸ್ಟ್‌ ಅಧ್ಯಕ್ಷ ಎಸ್‌.ಮರಿಸ್ವಾಮಿ ಸಲಹೆ ನೀಡಿದರು.ಮಾಗಡಿ ರಸ್ತೆಯ ಸ್ಫೂರ್ತಿಧಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ) ರಾಜ್ಯ ಸಮಿತಿ ಶನಿವಾರ ಆಯೋಜಿಸಿದ್ದ ದಲಿತ ಚಳುವಳಿ ಅವಲೋಕನ ಶಿಬಿರದಲ್ಲಿ ಅವರು ಮಾತನಾಡಿದರು.‘ಚಳವಳಿ, ಹೋರಾಟಗಳಲ್ಲಿ ಭಾಗವಹಿಸಲಾಗದ­ವರು ಇರುವ ಸ್ಥಳಗಳಿಂದ ತಂತ್ರಜ್ಞಾನದ ನೆರವಿನಿಂದ ಬೆಂಬಲ ಸೂಚಿಸುವುದರಿಂದ ಹೋರಾಟಗಳಿಗೆ ಬಲ ಬಂದಂತಾಗುತ್ತದೆ’ ಎಂದರು.ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್‌, ಬೆಂಗಳೂರು ವಿ.ವಿ ಪ್ರಾಧ್ಯಾಪಕ ನಟರಾಜ್‌ ಹುಳಿಯಾರ್‌, ಸಮಿತಿಯ ಮಹಿಳಾ ಒಕ್ಕೂಟದ ರಾಜ್ಯ ಪ್ರಧಾನ ಸಂಚಾಲಕಿ  ಇಂದಿರಾ ಕೃಷ್ಣಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.