ಬುಧವಾರ, ಏಪ್ರಿಲ್ 14, 2021
31 °C

10ಕ್ಕೆ ನಮ್ಮೂರ ಕೆರೆಗಳು ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಬಸವರಾಜ ಕುಂಚೂರು ಅವರ ‘ನಮ್ಮೂರ ಕೆರೆಗಳು ಗ್ರಾಮೀಣ ಜಲದೇವತೆಗಳು’ ಪುಸ್ತಕದ ಎರಡನೇ ಆವೃತ್ತಿಯ ಬಿಡುಗಡೆ ಸಮಾರಂಭ ಏ. 10ರಂದು ನಗರದ ರೋಟರಿ ಬಾಲಭವನದಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ 10.30ಕ್ಕೆ ಸಮಾರಂಭ ನಡೆಯಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಅವರು ಪುಸ್ತಕ ಬಿಡುಗಡೆ ಮಾಡಲಿದ್ದಾರೆ ಎಂದು ಇತಿಹಾಸ ಸಂಶೋಧಕ ಬುರುಡೇಕಟ್ಟೆ ಮಂಜಪ್ಪ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸಮಾರಂಭದಲ್ಲಿ ಕೆರೆಗಳ ಕುರಿತು ವಿಚಾರ ಸಂಕಿರಣ ನಡೆಯಲಿದೆ. 22 ಕೆರೆಗಳಿಗೆ ನೀರು ತುಂಬುವ ಯೋಜನೆಯ ಹೋರಾಟಗಾರ ಡಾ.ಜಿ. ಮಂಜುನಾಥಗೌಡ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ ಕೃತಿ ಪರಿಚಯ ಮಾಡಲಿದ್ದಾರೆ. ಈ ಸಂದರ್ಭ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರೊ.ಎಸ್.ಬಿ. ರಂಗನಾಥ್, ಕುಮಾರಸ್ವಾಮಿ, ಅವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಬಿಐಇಟಿ ಕಾಲೇಜಿನ ನಿರ್ದೇಶಕ ಪ್ರೊ.ವೈ. ವೃಷಭೇಂದ್ರಪ್ಪ ಕೆರೆ ನೀರಾವರಿ ಬಗ್ಗೆ, ಪ್ರೊ.ಬಿ.ವಿ. ವೀರಭದ್ರಪ್ಪ ಅವರು ಪ್ರಾಚೀನ ಕೆರೆಗಳು ಒಂದು ನೋಟ ಕುರಿತು, ಡಾ.ಎಂ.ಜಿ. ಈಶ್ವರಪ್ಪ ಅವರು ಕಾಡು, ಕೆರೆ ಮತ್ತು ಪರಿಸರದ ಬಗ್ಗೆ ವಿಚಾರ ಸಂಕಿರಣದಲ್ಲಿ ಮಾತನಾಡಲಿದ್ದಾರೆ ಎಂದು ನುಡಿದರು.ಕೃತಿ ಕುರಿತು ಲೇಖಕ ಬಸವರಾಜ ಕುಂಚೂರು ಮಾತನಾಡಿ, ಕೃತಿಯಲ್ಲಿ ಹರಪನಹಳ್ಳಿ ತಾಲ್ಲೂಕಿನ 60 ಕೆರೆಗಳ ಬಗ್ಗೆ ವಿಶೇಷ ಅಧ್ಯಯನ ನಡೆಸಲಾಗಿದೆ. ಕೆರೆಗಳ ರಚನೆ, ಜಾನಪದ ಇತಿಹಾಸ, ಎಲ್ಲ ವಿಷಯಗಳನ್ನು ಒಳಗೊಂಡಿದೆ. ಶ್ರಮ ಸಂಸ್ಕೃತಿಯ ಪ್ರತೀಕವಾಗಿದ್ದ ಕೆರೆಗಳು ಇಂದು ಕಣ್ಮರೆಯಾಗತೊಡಗಿವೆ. ಕರ್ನಾಟಕದಲ್ಲೇ ಸುಮಾರು 38 ಸಾವಿರ ಕೆರೆಗಳಿದ್ದವು. ಈಗ ಅದರ ಕಾಲುಭಾಗದಷ್ಟು ಕೂಡಾ ಇಲ್ಲ. ಅವುಗಳ ಜೀರ್ಣೋದ್ಧಾರ ಕುರಿತು ಜನಾಂದೋಲನ ಆಗಬೇಕಿದೆ ಎಂದು ಹೇಳಿದರು.ಕೆ.ಸಿ. ಲೋಕೇಶ್, ಕೊಟ್ರೇಶ್ ನಾಯ್ಕ, ಕರಿಬಸಪ್ಪ, ಮಲ್ಲಿಕಾರ್ಜುನ್, ಹೀಗೂ ದುಂಡ್ಯೆಪ್ಪ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.