ಲಖನೌ (ಪಿಟಿಐ): ಪ್ರಚಂಡ ಬುದ್ಧಿಶಾಲಿಯಾದ 10 ವರ್ಷ ವಯಸ್ಸಿನ ಜಾಣೆಯೊಬ್ಬಳಿಗೆ ಲಖನೌ ವಿಶ್ವವಿದ್ಯಾಲಯವು ವಿಜ್ಞಾನ ವಿಷಯ (ಬಿ.ಎಸ್ಸಿ.)ದ ಕಲಿಕೆಗೆ ಅನುಮತಿ ನೀಡಿದೆ.
ಬಾಲಕಿ ಸುಷ್ಮಾ ವರ್ಮಾಗೆ ಇಲ್ಲಿನ ಸಿಎಂಎಸ್ ಪದವಿ ಕಾಲೇಜಿನಲ್ಲಿ ಬಿ.ಎಸ್ಸಿ. ಕಲಿಯಲು ವಿವಿಯ ಪ್ರವೇಶಾತಿ ಸಮಿತಿಯು ತಾತ್ಕಾಲಿಕ ಒಪ್ಪಿಗೆ ನೀಡಿದೆ.ಸುಷ್ಮಾಳ ಅಣ್ಣ ಶೈಲೇಂದ್ರ, ತನ್ನ 14ನೇ ವಯಸ್ಸಿನಲ್ಲೇ (2007ರಲ್ಲಿ) ಕಂಪ್ಯೂಟರ್ ವಿಜ್ಞಾನ ವಿಷಯದಲ್ಲಿ ಪದವಿ ಗಳಿಸಿ ದಾಖಲೆ ಮಾಡಿದ್ದ. ಇವರಿಬ್ಬರು ತಮ್ಮ ಏಳನೇ ವಯಸ್ಸಿನಲ್ಲೇ ಪ್ರೌಢ ಶಾಲಾ ಶಿಕ್ಷಣ ಪೂರೈಸಿದ್ದು ಇವರ ತಂದೆ ತೇಜ್ ಬಹದ್ದೂರ್ ದಿನಗೂಲಿ ನೌಕರರಾಗಿದ್ದು, ತಾಯಿ ಛಾಯಾ ದೇವಿ ಅನಕ್ಷರಸ್ಥರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.