ಮಂಗಳವಾರ, ಆಗಸ್ಟ್ 11, 2020
24 °C

10 ಸಾವಿರ ಸಸಿ ನೆಡುವ ಗುರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

10 ಸಾವಿರ ಸಸಿ ನೆಡುವ ಗುರಿ

ಯಲಹಂಕ: ಯಲಹಂಕ ವಲಯ ವ್ಯಾಪ್ತಿಯಲ್ಲಿ ಹತ್ತು ಸಾವಿರ ಸಸಿಗಳನ್ನು ನೆಡುವ ಗುರಿ ಇದೆ ಎಂದು ಶಾಸಕ ಎಸ್.ಆರ್. ವಿಶ್ವನಾಥ್ ಹೇಳಿದರು.ವಿಶ್ವ ಪರಿಸರ ದಿನದ ಅಂಗವಾಗಿ ಪುಟ್ಟೇನಹಳ್ಳಿಯ ಕೆಎಚ್‌ಬಿ ಕಾಲೋನಿ ಉದ್ಯಾನದಲ್ಲಿ ಬಿಬಿಎಂಪಿ ಸದಸ್ಯರ ಹಾಗೂ ಅಧಿಕಾರಿಗಳ ಶ್ರಮದಾನದ ಮೂಲಕ ಹಮ್ಮಿಕೊಂಡಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ಈ ಭಾಗದಲ್ಲಿ ಸಾಂಕೇತಿಕವಾಗಿ ವಿವಿಧ ಜಾತಿಯ 2 ಸಾವಿರ ಸಸಿಗಳನ್ನು ನೆಡಲಾಗುತ್ತಿದೆ~ ಎಂದರು.`ಯಲಹಂಕದ 56 ಉದ್ಯಾನಗಳ ಪೈಕಿ 52ರಲ್ಲಿ ಈಗಾಗಲೇ ಹೊಂಗೆ, ಬೇವು, ಹಲಸು ಸೇರಿದಂತೆ ಔಷಧಿಯುಕ್ತ ಸಸಿಗಳನ್ನು ಬೆಳೆಸಲಾಗಿದೆ. ಮುಂದಿನ 5 ವರ್ಷಗಳಲ್ಲಿ  60 ಕಿರು ಅರಣ್ಯಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ~ ಎಂದರು.

 

ಬಿಬಿಎಂಪಿ ಯಲಹಂಕ ವಲಯದ ಜಂಟಿ ಆಯುಕ್ತ ರಬೀಂದ್ರ, ಪಾಲಿಕೆ ಸದಸ್ಯೆ ಕೆ.ವಿ.ಯಶೋಧಾ ರವಿಶಂಕರ್, ವಲಯ ಅರಣ್ಯಾಧಿಕಾರಿ ಆರ್. ಸುರೇಶ್, ತೋಟಗಾರಿಕೆ ಇಲಾಖೆ ಅಧೀಕ್ಷಕ ಮಹಮದ್ ಆಲಿ, ಕಾರ್ಯನಿರ್ವಾಹಕ ಎಂಜಿನಿಯರ್ ಎ.ಜಿ.ರಂಗಯ್ಯ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀನಿವಾಸ್ ಇತರರು ಹಾಜರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.