ಭಾನುವಾರ, ಜೂನ್ 13, 2021
22 °C

11ರಿಂದ ಕಾಂಗ್ರೆಸ್‌ ಪಾದಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಗೊಂಡ ಅಭಿವೃದ್ಧಿ ಕಾರ್ಯ­ಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಶಾಸಕ ಡಾ. ಕೆ.ಸುಧಾಕರ್‌ ಮಾ.11­ರಿಂದ 14ರವರೆಗೆ ಕ್ಷೇತ್ರ ವ್ಯಾಪ್ತಿಯಲ್ಲಿ ಪಾದಯಾತ್ರೆ ಹಮ್ಮಿ­ಕೊಂಡಿದ್ದಾರೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಎಸ್‌.ಪಿ.ಶ್ರೀನಿವಾಸ್ ಪತ್ರಿಕಾಗೋಷ್ಠಿ­ಯಲ್ಲಿ ತಿಳಿಸಿದರು.ಮಾ.11ರ ಬೆಳಿಗ್ಗೆ 8ಕ್ಕೆ ನಂದಿ ದೇಗುಲದಿಂದ ಆರಂಭಗೊಳ್ಳುವ ಪಾದ­ಯಾತ್ರೆ ರಾತ್ರಿ 8.15ಕ್ಕೆ ಹೊಸಹುಡ್ಯ­ದಲ್ಲಿ ಕೊನೆಗೊಳ್ಳಲಿದೆ.  12ರಂದು ಹೊಸಹುಡ್ಯದಿಂದ ವಾಪಸಂದ್ರದವರೆಗೆ, 13ಕ್ಕೆ ವಾಪಸಂದ್ರದಿಂದ ಮಂಡಿಕಲ್ಲು ಮತ್ತು 14ಕ್ಕೆ ಕಾಡಚಿಕ್ಕನಹಳ್ಳಿಯಿಂದ ಕಾಮರೆಡ್ಡಿಹಳ್ಳಿಯವರೆಗೆ ಪಾದಯಾತ್ರೆ ನಡೆಯಲಿದೆ ಭಾನುವಾರ ತಿಳಿಸಿದರು.ಕಾಂಗ್ರೆಸ್‌ ನಾಯಕರ ಸೂಚನೆಯ ಮೇರೆಗೆ ರಾಜ್ಯದಾದ್ಯಂತ ಈ ರೀತಿಯ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಚಿಕ್ಕ­ಬಳ್ಳಾಪುರ ಲೋಕಸಭಾ ಕ್ಷೇತ್ರ ಮಟ್ಟದ ಯುವ ಕಾಂಗ್ರೆಸ್ ಸಮಾವೇಶವನ್ನು ಮಾ.15ರಂದು ದೇವನಹಳ್ಳಿಯಲ್ಲಿ ನಡೆಸ­­ಲಾಗುವುದು.  ಸಮಾವೇಶದಲ್ಲಿ ಸಚಿವ ಕೃಷ್ಣ ಬೈರೇಗೌಡ, ಶಾಸಕ ಸಂತೋಷ್‌ ಲಾಡ್‌ ಮುಂತಾದವರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.   ಕಾರ್ಯ­ಕರ್ತ­ರಾದ ಜಿಯಾ­ಉಲ್ಲಾ, ಸಂತೋಷ್‌­ರಾಜ್‌,  ತಿರು­ಮಳಪ್ಪ, ನರಸಿಂಹ­ಮೂರ್ತಿ, ಅರ್ಜುನ್‌, ಬಾಲು, ರಾಜೇಶ್‌, ಗಂಗರಾಜು, ಬಾಬಾ­­ಜಾನ್‌ ಪತ್ರಿಕಾ­ಗೋಷ್ಠಿ­ಯಲ್ಲಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.