ಭಾನುವಾರ, ಜನವರಿ 26, 2020
28 °C

11ರ ಬಾಲಕನಿಗೆ 50 ವರ್ಷ ಜೈಲು ಶಿಕ್ಷೆ...!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌ (ಐಎಎನ್‌ಎಸ್‌): ವಿಚಾರಣಾಧೀನ ಕೈದಿಯನ್ನು ಹತ್ಯೆ ಮಾಡಿದ 11 ವರ್ಷದ ಬಾಲಕನಿಗೆ ಪಾಕಿಸ್ತಾನದ ಭಯೋತ್ಪಾದಕ ನಿಗ್ರಹ ನ್ಯಾಯಾಲಯ 50 ವರ್ಷ ಜೈಲು ಮತ್ತು ₨2 ಲಕ್ಷ ದಂಡ ವಿಧಿಸಿದೆ.ಗೋಹಾರ್‌ ನವಾಜ್‌ ಶಿಕ್ಷೆಗೊಳ­ಗಾದವ. ಜೂನ್‌ನಲ್ಲಿ ನ್ಯಾ­ಯಾ­­­­ಲ­ಯಕ್ಕೆ ಹಾಜರು­ಪಡಿಸಿ ವಾಪಸ್‌ ಕರೆ­ದೊಯ್ಯುತ್ತಿ­ದ್ದ ಹಫೀಜ್‌ ಘಯಾಸ್‌ ಎಂಬ ಕೈದಿ­ಯನ್ನು ಆತ ಗುಂಡಿಕ್ಕಿ ಸಾಯಿ­­­ಸಿದ್ದ.ವೈಯ­ಕ್ತಿಕ ದ್ವೇಷ­­ದಿಂದಾಗಿ ಘಯಾಸ್‌, ಗೋಹಾ­­­ರ್‌ನ ತಂದೆಯ ಕೊಲೆ ಮಾಡಿದ್ದ.  ಮಹಿಳೆ­ಯರ ಕೈಚೀಲ­ದಲ್ಲಿ ಪಿಸ್ತೂಲ್‌ ಇಟ್ಟು­ಕೊಂಡಿದ್ದ­ರಿಂದ ನ್ಯಾಯಾ­­ಲಯ ಪ್ರವೇ­ಶಿಸುವ ವೇಳೆ ಪೊಲೀಸರು ತಪಾಸಣೆ ಮಾಡಿ­ರಲಿಲ್ಲ.

ಪ್ರತಿಕ್ರಿಯಿಸಿ (+)