ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

11ನೇ ಜಿನ್‌ಪಿಂಗ್‌ ಎಂದ ದೂರದರ್ಶನ ವಾರ್ತಾ ವಾಚಕಿ ವಜಾ

Last Updated 19 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನವದೆಹಲಿ (ರಾಯಿಟರ್ಸ್‌): ಭಾರತ ಪ್ರವಾಸ­ದಲ್ಲಿದ್ದ ಚೀನಾ ಅಧ್ಯಕ್ಷ ಕ್ಸಿ ಜಿನ್‌­ಪಿಂಗ್‌ ಅವರ ಹೆಸರನ್ನು  ‘11ನೇ’ ಜಿನ್‌­ಪಿಂಗ್‌ ಎಂದು ಓದಿ ತಪ್ಪೆಸಗಿರುವ ಸರ್ಕಾರಿ ಸ್ವಾಮ್ಯದ ದೂರದರ್ಶನ ವಾಹಿ­ನಿಯ ವಾರ್ತಾ ವಾಚಕಿ ಕೆಲಸ ಕಳೆದು­­ಕೊಂಡಿ­ರುವ ಘಟನೆ ಬೆಳಕಿಗೆ ಬಂದಿದೆ.

ಇಂಗ್ಲಿಷ್‌ನ ‘ಎಕ್ಸ್‌ಐ’ ಅನ್ನು ರೋಮನ್‌ ಅಂಕಿ ಎಂದು ಭಾವಿಸಿದ ವಾರ್ತಾ ವಾಚಕಿ 11ನೇ ಜಿನ್‌ಪಿಂಗ್‌  ಎಂದು ಓದಿದ್ದಾರೆ. ಇದು ದೂರ­­­ದರ್ಶನ­ದಲ್ಲಿ ಬುಧವಾರ ಪ್ರಸಾರ­ವಾ­ಗಿತ್ತು. ಇದಕ್ಕೆ ಸಾಮಾಜಿಕ ಜಾಲ­­­ತಾಣಗಳಲ್ಲಿ ಭಾರಿ ಟೀಕೆ ವ್ಯಕ್ತ­ವಾ­ಗಿದೆ. ಗುತ್ತಿಗೆ ಆಧಾರ ಮೇಲೆ ನೇಮಕ­ಗೊಂ­­ಡಿದ್ದ ಈ ವಾಚಕಿಯು ಮಾಡಿದ ತಪ್ಪು ಅಕ್ಷಮ್ಯವಾಗಿದ್ದು, ಅವರನ್ನು ಕೆಲವು ತಿಂಗಳವರೆಗೆ ಅನ್ವಯ­ವಾಗು­ವಂತೆ ವಜಾ­ಗೊಳಿಸ­ಲಾಗಿದೆ ಎಂದು ದೂರ­­­ದರ್ಶನ ಅಧಿಕಾರಿ­ಗಳು ತಿಳಿಸಿ­ದ್ದಾರೆ. ವಾಚಕಿಯರ ಕೊರತೆಯಿಂದಾಗಿ   ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿ­ಕೊಳ್ಳ­ಲಾಗಿತ್ತೆಂದು ತಿಳಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT