ಭಾನುವಾರ, ಏಪ್ರಿಲ್ 18, 2021
33 °C

122 ಕೋಟಿ ಮೊತ್ತದ ಅತಿಕ್ರಮಿತ ಆಸ್ತಿ ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಗರದ ವಿವಿಧೆಡೆ ಅತಿಕ್ರಮಣಗೊಂಡಿದ್ದ ರೂ. 122 ಕೋಟಿ ಮೊತ್ತದ ಸಾರ್ವಜನಿಕ ಆಸ್ತಿಯನ್ನು ಕಳೆದ ಹತ್ತು ತಿಂಗಳ ಅವಧಿಯಲ್ಲಿ ವಶಕ್ಕೆ ಪಡೆಯಲಾಗಿದೆ~ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಹಾಗೂ ಬೆಂಗಳೂರು ಮಹಾನಗರ ಕಾರ್ಯ ಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ. ಶರ್ಮಾ ತಿಳಿಸಿದರು.ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, `ಈ ವರ್ಷ ಇಲ್ಲಿಯವರೆಗೆ 194 ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ 44 ಪ್ರಕರಣಗಳ ಆರೋಪ ಪಟ್ಟಿ ಸಲ್ಲಿಸಲಾಗಿದ್ದು, ಉಳಿದವು ತನಿಖೆ ಹಂತದಲ್ಲಿವೆ~ ಎಂದು ಹೇಳಿದರು.`ಸುತಗಂಟ್ಯ  ಪಾಳ್ಯದಲ್ಲಿ ಅತಿಕ್ರ ಮಣಗೊಂಡಿದ್ದ  ರೂ 60 ಕೋಟಿ  ಮೌಲ್ಯದ 1.25  ಎಕರೆ ಬಿಬಿಎಂಪಿ  ಭೂಮಿಯನ್ನು   ವಶಕ್ಕೆ ಪಡೆಯಲಾಗಿದ್ದು, ವಿವಿಧೆಡೆ ಖಾಸಗಿ ವ್ಯಕ್ತಿಗಳ ಪಾಲಾಗಿದ್ದ ರೂ 62 ಕೋಟಿ ಮೌಲ್ಯದ ಸಾರ್ವಜನಿಕ ಆಸ್ತಿಯನ್ನೂ ಪತ್ತೆ ಹಚ್ಚಲಾಗಿದೆ~ ಎಂದು ವಿವರಿಸಿದರು.`ಬಿಎಂಟಿಎಫ್ ಸ್ಥಾಪನೆಯಾದ ದಿನದಿಂದ ಕಳೆದ ವರ್ಷದ ಅಂತ್ಯದವರೆಗೆ ಅನ್ಯರ ಪಾಲಾಗಿದ್ದ ರೂ 3,000 ಕೋಟಿ ಮೌಲ್ಯದ ಸರ್ಕಾರದ ಆಸ್ತಿ ಪತ್ತೆ ಮಾಡಲಾಗಿದೆ~ ಎಂದ ತಿಳಿಸಿದರು. `60 ಎಕರೆ ವಿಸ್ತೀರ್ಣದ ಒಡೆಯರಹಳ್ಳಿ ಕೆರೆಯ ಅತಿಕ್ರಮಣವನ್ನು ತಡೆಗಟ್ಟಲಾಗಿದ್ದು, ಅಲ್ಲಿ ನಡೆಯುತ್ತಿದ್ದ ಮರಳು ದಂಧೆಯನ್ನೂ ನಿಲ್ಲಿಸಲಾಗಿದೆ. ಈ ದಂಧೆಯ ಹಿಂದೆ ಹಲವರ ಕೈವಾಡ ಇದೆ~ ಎಂದು ಹೇಳಿದರು.`ಪ್ರಸಕ್ತ ವರ್ಷ ನಿಯಮಾವಳಿ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ 558 ಪ್ರಕರಣಗಳು ದಾಖಲಾಗಿದ್ದು, ಅವುಗಳ ತನಿಖೆ ನಡೆಸಲಾಗುತ್ತಿದೆ~ ಎಂದು ಮಾಹಿತಿ ನೀಡಿದರು.ದೊಡ್ಡಗುಬ್ಬಿಯ ತಮ್ಮ ಒಡೆತನದ ಜಾಗೆಯಲ್ಲಿ ಪಾಲಿಕೆ ಎಂಜಿನಿಯರ್‌ಗಳು ಅತಿಕ್ರಮವಾಗಿ ಪ್ರವೇಶ ಮಾಡಿದ್ದರು ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಶರ್ಮಾ ಪ್ರತಿಕ್ರಿಯಿಸಲು ನಿರಾಕರಿಸಿದರು. ಸಚಿವ ಎಸ್.ಸುರೇಶಕುಮಾರ್ ವಿರುದ್ಧ ದಾಖಲಾದ ಪ್ರಕರಣದ ಕುರಿತೂ ಪ್ರತಿಕ್ರಿಯಿಸಲಿಲ್ಲ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.