ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

12,300 ಕೋಟಿ ಪ್ರೇಮ್‌ಜಿ ದಾನ

Last Updated 22 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು (ಐಎಎನ್‌ಎಸ್): ಸಾಫ್ಟ್‌ವೇರ್ ರಫ್ತು ಸಂಸ್ಥೆ ವಿಪ್ರೊ ಲಿಮಿಟೆಡ್ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರು, ತಮ್ಮ ಬಳಿ ಇದ್ದ  ವಿಪ್ರೊ ಸಮೂಹದ ರೂ. 12,300 ಕೋಟಿ ಮೊತ್ತದ   ಶೇ 12ರಷ್ಟು ಷೇರುಗಳನ್ನು ತಮ್ಮದೇ ದತ್ತಿ ಸಂಸ್ಥೆಗೆ  ವರ್ಗಾಯಿಸಿದ್ದಾರೆ.

ಈ ಷೇರುಗಳ ವರ್ಗಾವಣೆ ಮೂಲಕ, ವಿಪ್ರೊದಲ್ಲಿ `ಅಜೀಂ ಪ್ರೇಮ್‌ಜಿ ಫೌಂಡೇಷನ್  ಹೊಂದಿರುವ ಒಟ್ಟಾರೆ ಷೇರು ಪಾಲು ಶೇ 19.93ಕ್ಕೇರಿದೆ. 2010ರಲ್ಲಿ ಈ ದತ್ತಿ ಸಂಸ್ಥೆ ರಚನೆಯಾದಾಗ  ವಿಪ್ರೊ   ಸಮೂಹದ ಶೇ 7.93ರಷ್ಟು ಷೇರುಗಳನ್ನು ವರ್ಗಾ ಯಿಸಲಾಗಿತ್ತು.

`ಸುಸ್ಥಿರ ಸಮಾಜ ನಿರ್ಮಾಣ' ಆಶಯದೊಂದಿಗೆ 2001ರಲ್ಲಿ ರಚನೆಯಾದ `ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ'ದ ಮೂಲಕ ಈ ದತ್ತಿ ನಿಧಿಯನ್ನು ವಿವಿಧ ಸಮಾಜ ಕಲ್ಯಾಣ ಕಾರ್ಯಕ್ರಮಗಳಿಗೆ ಬಳಸಿಕೊಳ್ಳಲಾಗುತ್ತಿದೆ.

ಪ್ರತಿಷ್ಠಾನವು ಪ್ರಮುಖವಾಗಿ ಕರ್ನಾಟಕ, ಆಂಧ್ರಪ್ರದೇಶ, ಮಧ್ಯಪ್ರದೇಶ, ಪುದುಚೇರಿ, ರಾಜಸ್ತಾನ, ಬಿಹಾರ, ಛತ್ತೀಸ್‌ಗಡ ಮತ್ತು ಉತ್ತರಾಖಂಡನಲ್ಲಿ ಅಲ್ಲಿನ ಸರ್ಕಾರಗಳ ಪಾಲುದಾರಿಕೆಯಲ್ಲಿ ಗ್ರಾಮೀಣ ಶಾಲೆಗಳಲ್ಲಿನ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಶ್ರಮಿಸುತ್ತಿದೆ. ಈ ಯೋಜನೆಯ ಭಾಗವಾಗಿ  ಪ್ರತಿಷ್ಠಾನ ಬೆಂಗಳೂರಿನಲ್ಲಿ `ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯ'ವನ್ನೂ  ಸ್ಥಾಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT